ಬೆಳಗಾವಿ: ಗುಂಪು ಘರ್ಷಣೆಯಲ್ಲಿ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡು ಐವರಿಗೆ ಗಂಭೀರ ಗಾಯವಾಗಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಬೆಳಗಾವಿ ತಾಲೂಕಿನ ಸಾವಗಾಂವ್ ಗ್ರಾಮದ ಹೊರವಲಯದಲ್ಲಿ ತಡರಾತ್ರಿ ನಡೆದಿದೆ.
ಬರಕ್ಕೆ ಊರು ಬಿಟ್ಟು ಬೇರೆ ಕಡೆ ಕುರಿ ಮೇಯಿಸಲು ಬಂದವರ ಮೇಲೆ ಹಲ್ಲೆ ನಡೆಸಲಾಗಿದೆ. ಕುರಿಗಾಹಿಗಳು ಗೋಕಾಕ್‍ದಿಂದ ಬೆಳಗಾವಿಗೆ ಬಂದಿದ್ದರು. ಆದರೆ ಬೆಳಗಾವಿಯಲ್ಲಿ ಮಳೆಯಿಲ್ಲದೇ ಬರಗಾಲದಿಂದ ಅಲ್ಲಿನ ದನ-ಕರುಗಳಿಗೆ ಮೇವು-ನೀರು ಸಿಗುತ್ತಿಲ್ಲ. ಇದರಿಂದ ಕೋಪಗೊಂಡ ಗ್ರಾಮಸ್ಥರು ಆರೇಳು ಕುರಿಗಾಹಿಗಳು ಮೇಲೆ 40ಕ್ಕೂ ಹೆಚ್ಚು ಜನರು ಹಲ್ಲೆ ಮಾಡಿದ್ದಾರೆ.

ಪರಿಣಾಮ ಕುರಿಗಾಹಿಗಳು ದಿಕ್ಕೆಟ್ಟು ಓಡಾಡಿದ್ದಾರೆ. ಈ ಗುಂಪು ಘರ್ಷಣೆಯಿಂದ 400ಕ್ಕೂ ಹೆಚ್ಚು ಕುರಿಗಳು ತೋಟದಲ್ಲಿ ಚೆಲ್ಲಾಪಿಲ್ಲಿಯಾಗಿವೆ. ಇನ್ನೂ ಘಟನೆಯಲ್ಲಿ ಗಾಯಗೊಂಡಿದ್ದ ಗಾಯಾಳು ಮಲ್ಲವ್ವಾ, ಭಾರತಿ ಸೇರಿ ಐವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ವಿಠ್ಠಲ್, ರಾಮಪ್ಪ ಎಂಬವರ ಸ್ಥಿತಿ ಚಿಂತಾಜನಕವಾಗಿದೆ.
ಈ ಘಟನೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Leave a Reply