ಠಾಣೆಯ ಸಮೀಪದಲ್ಲೇ ಸಾಲಾಗಿ ಐವರನ್ನು ನಿಲ್ಲಿಸಿ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

– ಬದುಕುಳಿದ ವ್ಯಕ್ತಿಯಿಂದ ಬೆಳಕಿಗೆ ಬಂದ ಪ್ರಕರಣ

ಗುವಾಹಟಿ: ಮೊಬೈಲ್, ನಗದು ನಾಣ್ಯ ನೇತುವೆ ಮೇಲೆ ನಿಲ್ಲಿಸಿ ಗುಂಡಿಕ್ಕಿ ಒಂದೇ ಕುಟುಂಬದ ಮೂವರನ್ನು ಸೇರಿ 5 ಜನರನ್ನು ಹತ್ಯೆ ಮಾಡಿದ ಘಟನೆ ಅಸ್ಸಾಂ ನಲ್ಲಿ ಗುರುವಾರ ರಾತ್ರಿ ನಡೆದಿದ್ದು, ಹಂತಕರಿಂದ ತಪ್ಪಿಸಿಕೊಂಡ ವ್ಯಕ್ತಿಯೊಬ್ಬನಿಂದ ಪ್ರಕರಣ ಬೆಳಕಿಗೆ ಬಂದಿದೆ.

ಆಗಿದ್ದೇನು?:
ಅಸ್ಸಾಂ ತಿನ್‍ಸುಕಿಯಾ ಜಿಲ್ಲೆಯ ಖೆರೋನಿಬರಿ ಗ್ರಾಮದ ಸದಿಯಾ ಸೇತುವೆ ಸಮೀಪ ಅಂಗಡಿಗೆ ಇದೆ. ಅಲ್ಲಿಗೆ ಕೆಲ ಮುಸುಕುಧಾರಿಗಳು ಗುರುವಾರ ರಾತ್ರಿ 7.30ರಿಂದ 8 ಗಂಟೆ ಸುಮಾರಿಗೆ ಬಂದಿದ್ದಾರೆ. ಈ ವೇಳೆ ಅಂಗಡಿಯಲ್ಲಿ ಕುಳಿತಿದ್ದ ಆರು ಜನರನ್ನು ಸೇತುವೆಗೆ ಕರೆದುಕೊಂಡು ಹೋಗಿ, ಅವರ ಬಳಿಯಿದ್ದ ಮೊಬೈಲ್, ನಗದು ನಾಣ್ಯವನ್ನು ಕಿತ್ತುಕೊಂಡಿದ್ದಾರೆ.

ಆರು ಜನರನ್ನು ಸಾಲಾಗಿ ಸೇತುವೆ ಮೇಲೆ ನಿಲ್ಲಿಸಿ, ಗುಂಡಿನ ದಾಳಿ ನಡೆಸಿದ್ದಾರೆ. ಅವರಲ್ಲಿ ನಾಮಸುದ್ರಾ ಎಂಬ ವ್ಯಕ್ತಿ ಸೇತುವೆಯಿಂದ ಹಾರಿ, ಪ್ರಾಣ ಉಳಿಸಿಕೊಂಡಿದ್ದಾನೆ. ಘಟನೆಯಿಂದ ಭಯಗೊಂಡಿದ್ದ ನಾಮಸುದ್ರಾ ಶುಕ್ರವಾರ ಬೆಳಗ್ಗೆ ಎಚ್ಚರಗೊಂಡು ಮನೆಗೆ ತೆರಳಿದ್ದಾನೆ. ಭಯಗೊಂಡಿದ್ದ ಆತನನ್ನು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಈ ಘಟನೆ ನಡೆದಿದ್ದು ಪೊಲೀಸ್ ಠಾಣೆಯಿಂದ ಕೇವಲ 200 ಮೀಟರ್ ದೂರದಲ್ಲಿ. ಅಷ್ಟೇ ಅಲ್ಲದೆ ಕೊಲೆಯಾದ ವ್ಯಕ್ತಿಗಳು ಪೊಲೀಸರಿಗೆ ಕರೆ ಮಾಡಿದ್ದರು. ಈ ವೇಳೆ ಪೊಲೀಸರ ಮೊಬೈಲ್ ಸ್ವೀಚ್ ಆಫ್ ಅಂತಾ ಬಂದಿತ್ತು. ಹೀಗಾಗಿ ಪೊಲೀಸರ ನಿರ್ಲಕ್ಷ್ಯದಿಂದಲೇ ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *