ಅಸ್ಸಾಂ ಪ್ರವಾಹ- 10 ಮಂದಿ ಬಲಿ, ಸಾವಿನ ಸಂಖ್ಯೆ 118ಕ್ಕೆ ಏರಿಕೆ

ಗುವಾಹಟಿ: ಸತತ ಮಳೆಯಿಂದ ಅಸ್ಸಾಂನ ಹಲವು ಜಿಲ್ಲೆಗಳಲ್ಲಿ ಭೀಕರ ಪ್ರವಾಹ ಉಂಟಾಗಿದ್ದು, ಇದರಿಂದಾಗಿ ನಾಲ್ವರು ಮಕ್ಕಳು ಸೇರಿದಂತೆ 10 ಜನರು ಸಾವನ್ನಪ್ಪಿದ್ದು, ಈ ಮೂಲಕ ಸಾವಿನ ಸಂಖ್ಯೆ 118ಕ್ಕೆ ಏರಿದೆ.

ಅಸ್ಸಾಂನಲ್ಲಿ ಪ್ರವಾಹವು 28 ಜಿಲ್ಲೆಗಳಲ್ಲಿ 33.03 ಲಕ್ಷ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕ್ಯಾಚಾರ್ ಜಿಲ್ಲೆಯ ಸಿಲ್ಚಾರ್ ಪಟ್ಟಣವು ಸತತ ಐದನೇ ದಿನವೂ ಮುಳುಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಬಾರ್ಪೇಟಾ, ಧುಬ್ರಿ, ಕರೀಮ್‍ಗಂಜ್ ಮತ್ತು ಉದಲ್ಗುರಿ ಜಿಲ್ಲೆಗಳಲ್ಲಿ ತಲಾ ಇಬ್ಬರು ಸಾವನ್ನಪ್ಪಿದ್ದರೇ, ಕ್ಯಾಚಾರ್ ಮತ್ತು ಮೊರಿಗಾಂವ್‍ನಲ್ಲಿ ತಲಾ ಓರ್ವ ಮೃತಪಟ್ಟಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಮುಂಬೈ ದಾಳಿಯ ಮಾಸ್ಟರ್ ಮೈಂಡ್‌ಗೆ 15 ವರ್ಷ ಜೈಲು ಶಿಕ್ಷೆ ವಿಧಿಸಿದ ಪಾಕಿಸ್ತಾನ

ಗುರುವಾರ, 30 ಜಿಲ್ಲೆಗಳಲ್ಲಿ 45.34 ಲಕ್ಷ ಜನಸಂಖ್ಯೆಯು ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿದೆ ಎಂದು ಅಸ್ಸಾಂ ರಾಜ್ಯ ನಿರ್ವಹಣಾ ವಿಪತ್ತು ಪ್ರಾಧಿಕಾರದ (ಎಎಸ್‍ಡಿಎಂಎ) ಬುಲೆಟಿನ್ ತಿಳಿಸಿದೆ. ಬಹುತೇಕ ನದಿಗಳಲ್ಲಿ ನೀರಿನ ಮಟ್ಟ ಇಳಿಮುಖವಾದ ಕಾರಣ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಕೊಂಚ ಸುಧಾರಿಸಿದೆ. ಇದನ್ನೂ ಓದಿ: ಇಡಿ ಪ್ರಶ್ನೆಗೆ ನಾನು ದಣಿದಿದ್ದೇನೆ ಎಂದ ರಾಹುಲ್- ಕೇವಲ 20% ಪ್ರಶ್ನೆಗಷ್ಟೇ ಉತ್ತರ

Live Tv

Comments

Leave a Reply

Your email address will not be published. Required fields are marked *