Asia Cup – ಇಂದಿನ ಪಂದ್ಯ ರದ್ದಾದ್ರೆ ಫೈನಲಿಗೆ ಹೋಗುವವರು ಯಾರು?

ಕೊಲಂಬೋ: ಏಷ್ಯಾ ಕಪ್‌ ಟೂರ್ನಿಯಲ್ಲಿ (Asia Cup Cricket) ಸೆಮಿಫೈನಲ್‌ ಎಂದೇ ಬಿಂಬಿತವಾಗಿರುವ ಪಾಕಿಸ್ತಾನ (Pakistan) ಮತ್ತು ಶ್ರೀಲಂಕಾ (Srilanka) ನಡುವಿನ ಪಂದ್ಯಕ್ಕೂ ಮಳೆ (Rain) ಸುರಿಯುವ ಸಾಧ್ಯತೆಯಿದೆ. ಒಂದು ವೇಳೆ ಮಳೆ ಸುರಿದು ಪಂದ್ಯ ರದ್ದಾದ್ರೆ ಶ್ರೀಲಂಕಾ ಫೈನಲ್‌ ಪ್ರವೇಶಲಿದೆ.

ಹೌದು. ಈ ಮೊದಲು ಭಾರತ (India) ಮತ್ತು ಪಾಕಿಸ್ತಾನದ ಸೂಪರ್‌ 4 ಪಂದ್ಯಕ್ಕೆ ಮೀಸಲು ದಿನ ನಿಗದಿಯಾಗಿತ್ತು. ಹೀಗಾಗಿ ಎರಡನೇ ದಿನ ಆಟ ಮುಂದುವರಿದ ಪರಿಣಾಮ ಭಾರತ ಪಾಕ್‌ ವಿರುದ್ಧ 228 ರನ್‌ಗಳ ಅಂತರದಿಂದ ಗೆದ್ದುಕೊಂಡಿತ್ತು. ಆದರೆ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಪಂದ್ಯಕ್ಕೆ ಯಾವುದೇ ಮೀಸಲು ದಿನ ನಿಗದಿಯಾಗಿಲ್ಲ.

ಮೀಸಲು ದಿನ ನಿಗದಿಯಾಗದ ಕಾರಣ ನೆಟ್‌ ರನ್‌ರೇಟ್‌ ಆಧಾರದಲ್ಲಿ ಶ್ರೀಲಂಕಾ ಫೈನಲ್‌ ಪ್ರವೇಶಿಸಲಿದೆ. ಏಷ್ಯಾ‌ ಕಪ್ ಫೈನಲ್‌ನಲ್ಲಿ ಇಲ್ಲಿಯವರೆಗೆ ಭಾರತ ಮತ್ತು ಪಾಕಿಸ್ತಾನ ಆಡಿಲ್ಲ. ಇಂದು ಒಂದು ವೇಳೆ ಪಾಕ್‌ ಜಯಗಳಿಸಿದರೆ  ಸೆ.17ರಭಾನುವಾರ ಕೊಲಂಬೋದಲ್ಲಿ ಹೈವೋಲ್ಟೇಜ್‌ ಫೈನಲ್‌ ಪಂದ್ಯ ನಡೆಯಲಿದೆ.  ಇದನ್ನೂ ಓದಿ: ಕೇವಲ 10 ರನ್‌ ಜೊತೆಯಾಟವಾಡಿ ಹೊಸ ದಾಖಲೆ ಬರೆದ ಕೊಹ್ಲಿ-ಹಿಟ್‌ಮ್ಯಾನ್‌

ನೆಟ್‌ ರನ್‌ ರೇಟ್‌ ಎಷ್ಟಿದೆ?
ಆಡಿದ ಎರಡು ಪಂದ್ಯಗಳನ್ನು ಗೆದ್ದಿರುವ ಭಾರತ 4 ಅಂಕದೊಂದಿಗೆ 2.690 ನೆಟ್‌ ರನ್‌ ರೇಟ್‌ನೊಂದಿಗೆ ಈಗಾಗಲೇ ಫೈನಲ್‌ ಪ್ರವೇಶ ಮಾಡಿದೆ. ಶ್ರೀಲಂಕಾ ಎರಡು ಪಂದ್ಯಗಳಿಂದ 2 ಅಂಕ ಸಂಪಾದಿಸಿದೆ -0.200 ನೆಟ್‌ ರನ್‌ ರೇಟ್‌ ಹೊಂದಿದ್ದರೆ ಪಾಕಿಸ್ತಾನ 2 ಪಂದ್ಯಗಳಿಂದ 2 ಅಂಕ ಸಂಪಾದಿಸಿ -1.892 ನೆಟ್‌ ರನ್‌ ರೇಟ್‌ನೊಂದಿಗೆ ಮೂರನೇ ಸ್ಥಾನ ಪಡೆದಿದೆ.

ನೆಟ್‌ ರನ್‌ ರೇಟ್‌ ಉತ್ತಮವಾಗಿರುವ ಕಾರಣ ಶ್ರೀಲಂಕಾ ಸುಲಭವಾಗಿ ಫೈನಲ್‌ ಪ್ರವೇಶ ಮಾಡಲಿದೆ. ಆಡಿರುವ ಎರಡು ಪಂದ್ಯಗಳನ್ನು ಸೋತಿರುವ ಬಾಂಗ್ಲಾದೇಶ ಈಗಾಗಲೇ ಟೂರ್ನಿಯಿಂದ ಹೊರ ಬಿದ್ದಿದೆ.

 

 

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]