ಹೈದರಾಬಾದ್: ಹಿಮಾಲಯ ಮತ್ತು ಹಿಂದೂ ಮಹಾಸಾಗರದ ನಡುವಿನ ಭೂಮಿಯಲ್ಲಿ ವಾಸಿಸುವ ಎಲ್ಲಾ ಜನರು ಹಿಂದೂಗಳು ಎಂದು ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೇಶ ಜ್ಞಾನದ ನಾಡು ಎಂಬುದನ್ನು ಅನೇಕ ವಿದೇಶಿ ವಿದ್ವಾಂಸರು ಒಪ್ಪಿಕೊಂಡಿದ್ದಾರೆ. ಈ ವಿಷಯವನ್ನು ಭಾರತೀಯರಾಗಿರುವ ಪ್ರತಿಯೊಬ್ಬರೂ ಹೆಮ್ಮೆ ಪಡಬೇಕು ಎಂದರು.

ಹಿಂದೂ ಧರ್ಮವು ಜೀವನದೊಂದು ವಿಧಾನವಾಗಿದೆ. ಎಂದಿಗೂ ಹಿಂದೂ ಪದವನ್ನು ಸೀಮಿತ ಗಡಿಗಳಿಗೆ ನಿರ್ಬಂಧಿಸಬಾರದು. ಹಿಂದೂ ಭೌಗೋಳಿಕ ಗುರುತು. ಹಿಮಾಲಯ ಮತ್ತು ಹಿಂದೂ ಮಹಾಸಾಗರದ ನಡುವೆ ವಾಸಿಸುವ ಎಲ್ಲಾ ಜನರು ಹಿಂದೂಗಳು ಎಂದು ನುಡಿದರು. ಇದನ್ನೂ ಓದಿ: ಜಾತಿ, ಧರ್ಮದ ಹೆಸರಲ್ಲಿ ದೇಶವನ್ನು ಹಿಂದಕ್ಕೆ ಕೊಂಡೊಯ್ಯುವ ಯತ್ನ: ಶರದ್ ಪವಾರ್
ವಿಶ್ವವೇ ಒಪ್ಪಿಕೊಂಡಿರುವ ಪ್ರಜಾಪ್ರಭುತ್ವಕ್ಕೆ ಭಾರತ ಉದಾಹರಣೆಯಾಗಿದೆ. ನಾವು ನಮ್ಮ ದೇಶವನ್ನು ನಮ್ಮ ತಾಯಿ ಎಂದು ಪರಿಗಣಿಸುತ್ತೇವೆ. ಇದರಿಂದಲೇ ಭಾರತ ಮಾತಾ ಎಂದು ಕರೆಯುತ್ತೇವೆ ಎಂದರು. ಇದನ್ನೂ ಓದಿ: ಔಷಧಿಯ ಮೇಲಿನ ದರ ಶೇ.40 ರಷ್ಟು ಏರಿಸಿದ ಲಂಕಾ ಸರ್ಕಾರ

ನದಿಗಳ ಜೋಡಣೆಯಲ್ಲಿ ಎನ್‍ಡಿಎ ಸರ್ಕಾರದ ಪ್ರಯತ್ನಗಳ ಕುರಿತು ಮಾತನಾಡಿದ ಅವರು, ಗಂಗಾ ನದಿಯ ಸಂರಕ್ಷಣೆ ಮತ್ತು ಪುನರುಜ್ಜೀವನಕ್ಕಾಗಿ ಸರ್ಕಾರವು ನಮಾಮಿ ಗಂಗೆ ಯೋಜನೆಯನ್ನು ಪ್ರಾರಂಭಿಸಿದೆ ಎಂದು ಹೇಳಿದರು.

Leave a Reply