ನಿಮಗೆ ಗಂಡಸ್ತನ ಇದ್ದರೆ ಯೋಜನೆ ಜಾರಿ ಮಾಡಿ ತೋರಿಸಿ: ಅಶ್ವಥ್ ನಾರಾಯಣ

ASHWATH NARAYAN 1

ರಾಮನಗರ: ಮೇಕೆದಾಟು ಯೋಜನೆ ಕಾಂಗ್ರೆಸ್‌ನಿಂದ ಅನುಷ್ಠಾನ ಮಾಡಲು ಸಾಧ್ಯವಿಲ್ಲ. ಬಿಜೆಪಿಯಿಂದ ಮಾತ್ರ ಈ ಯೋಜನೆ ಜಾರಿ ಸಾಧ್ಯ. ನಿಮಗೆ ಗಂಡಸ್ತನ ಇದ್ದರೆ ಯೋಜನೆಯನ್ನು ಜಾರಿ ಮಾಡಿ ತೋರಿಸಿ ಎಂದು ಸಚಿವ ಡಾ. ಸಿ.ಎನ್.ಅಶ್ವಥ್ ನಾರಾಯಣ ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕಿದ್ದಾರೆ.

ಮೇಕೆದಾಟು ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ನಾಡಿನ ನೆಲ, ಜಲ ವಿಚಾರವಾಗಿ ಬಿಜೆಪಿ ನಾಡಿನ ಹಿತ ಕಾಪಾಡುವಲ್ಲಿ ಬದ್ದವಾಗಿದೆ. ನಮ್ಮ ಮೊದಲ ಆದ್ಯತೆ ನಮ್ಮ ರಾಜ್ಯ, ನಮ್ಮ ನಾಡು. ಅಧಿಕಾರಕೋಸ್ಕರ ನಾವು ಏನು ಬೇಕಾದರೂ ಮಾಡುವವರು ಅಲ್ಲ ಎಂದರು.  ಇದನ್ನೂ ಓದಿ: ಅಧಿಕಾರಕ್ಕಾಗಿ ಕಾಂಗ್ರೆಸ್‍ನಿಂದ ಮೇಕೆದಾಟು ಪಾದಯಾತ್ರೆ ನಾಟಕ: ಹಾಲಪ್ಪ ಆಚಾರ್

ಮೇಕೆದಾಟು ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿದೆ. ನಾವು ಜಾರಿ ಮಾಡಲು ಮುಂದಾಗಿದ್ದಕ್ಕೆ ಡಿಕೆ ಶಿವಕುಮಾರ್ ಈ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

2008ರಿಂದ ಕಾವೇರಿ ಜಲನಯನ ವ್ಯಾಪ್ತಿಯ 12-13 ಜಿಲ್ಲೆಗಳಲ್ಲಿ ನೀರಾವರಿ ಯೋಜನೆ ಜಾರಿಗೆ ತಂದವರು ಬಿಜೆಪಿಯವರು. ಯಡಿಯೂರಪ್ಪ ಸಿಎಂ ಬೊಮ್ಮಾಯಿ ನೀರಾವರಿ ಮಂತ್ರಿಯಾಗಿದ್ದರು. ದಕ್ಷಿಣ ಭಾರತದಲ್ಲಿ ನೀರಾವರಿ ಯೋಜನೆ ಕುಂಠಿತವಾದಾಗ ಅದನ್ನು ಅಭಿವೃದ್ಧಿಪಡಿಸಿದವರು ಬಿಜೆಪಿಯವರು ಎಂದು ತಿಳಿಸಿದರು. ಇದನ್ನೂ ಓದಿ: ಪಾದಯಾತ್ರೆಯಲ್ಲಿದ್ದ ಎಚ್.ಎಂ.ರೇವಣ್ಣಗೆ ಸೋಂಕು – ಕಾಂಗ್ರೆಸ್‍ನಿಂದ ರಾಜ್ಯಕ್ಕೆ ಕೊರೊನಾ ರಫ್ತು ಎಂದ ಬಿಜೆಪಿ

ಕಾಂಗ್ರೆಸ್‌ಗೆ ನಾನು ನೇರ ಸವಾಲ್ ಹಾಕುತ್ತಿದ್ದೇನೆ. ನಾವು ಗಂಡಸರು, ಗಂಡಸ್ತನ ಇರುವುದಕ್ಕೆ ಈ ಯೋಜನೆ ಜಾರಿ ಮಾಡಿ ತೋರಿಸುತ್ತೇವೆ. ನಿಮಗೆ ಗಂಡಸ್ತನ ಇದ್ದರೆ ಮಾಡಿ ತೋರಿಸಿ. ಕಾವೇರಿ ಜಲನಯನ ವ್ಯಾಪ್ತಿಯಲ್ಲಿ ನೀವು ಏನು ಮಾಡಿದ್ದೀರಿ ಎಂಬುದು ತಿಳಿದಿದೆ. ಕಾಂಗ್ರೆಸ್‌ನವರು ಬಿಜೆಪಿಯೊಂದಿಗೆ ಪೈಪೋಟಿ ನೀಡಲು ಈ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *