ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಅವರು ಆರ್‌ಎಸ್‌ಎಸ್ ಗೀತೆ ಹಾಡಿದ್ದನ್ನ ಸ್ವಾಗತಿಸುತ್ತೇವೆ ಎಂದು ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ (Ashwath Narayan) ಹೇಳಿದ್ದಾರೆ.
ವಿಧಾನಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಆರ್‌ಎಸ್‌ಎಸ್‌ನ (RSS) ಅಧಿಕೃತ ಪ್ರಾರ್ಥನಾ ಗೀತೆಯನ್ನು ಹಾಡಿರುವುದು, ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸಾವಾಗಿತ್ತು. ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು ಡಿಕೆಶಿಗೆ ಆರ್‌ಎಸ್‌ಎಸ್ ಬಗ್ಗೆ ಒಳ್ಳೆಯ ಭಾವನೆ ಇದೆ. ಆರ್‌ಎಸ್‌ಎಸ್ ಗೀತೆ `ನಮಸ್ತೇ ಸದಾ ವತ್ಸಲೇ ಮಾತೃಭೂಮೇ’ ಹಾಡಿರುವುದನ್ನ ಸ್ವಾಗತಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಡಿಕೆಶಿ ಆರ್‌ಎಸ್‍ಎಸ್ ಗೀತೆನೂ ಹಾಡಬಹುದು, ನಾವು ಮಾತ್ರ ಏನು ಮಾಡೋ ಹಾಗಿಲ್ಲ: ರಾಜಣ್ಣ
ಡಿ.ಕೆ ಶಿವಕುಮಾರ್ ಯಾವ ಮನಸ್ಥಿತಿ ಇಟ್ಕೊಂಡು ಹೇಳಿದ್ದಾರೋ ಗೊತ್ತಿಲ್ಲ. ಯಾರೇ ಆದ್ರೂ ಸರಿ ಆರ್‌ಎಸ್‌ಎಸ್ ಮೇಲೆ ಗೌರವ ಇಡಬಹುದು. ಆದ್ರೆ ಕಾಂಗ್ರೆಸ್ (Congress) ಪಕ್ಷದ ಹಲವು ನಾಯಕರು ಆರ್‌ಎಸ್‌ಎಸ್‌ನ ವಿರೋಧಿಸುತ್ತಾರೆ. ಕಾಂಗ್ರೆಸ್ ನಾಯಕರು ಆರ್‌ಎಸ್‌ಎಸ್ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ರೆ ಜನರು ಅವ್ರನ್ನ ಒಪ್ಪಿಕೊಳ್ಳುತ್ತಾರೆ. ಕಾಂಗ್ರೆಸ್‌ನವರು ತುಷ್ಟೀಕರಣ ರಾಜಕಾರಣದಿಂದ ಹೊರಗೆ ಬರಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣವನ್ನು ಸರ್ಕಾರ ಎನ್‌ಐಎಗೆ ವರ್ಗಾಯಿಸಬೇಕು: ಪ್ರತಾಪ್ ಸಿಂಹ ಆಗ್ರಹ
ಧರ್ಮಸ್ಥಳ ಪ್ರಕರಣಗಳ ಬಗ್ಗೆ ಮಾತನಾಡಿದ ಅವರು, ಧರ್ಮಸ್ಥಳ ವಿಚಾರದಲ್ಲಿ ಎಸ್‌ಐಟಿ ರಚನೆ ಆದಾಗ ಸಾಕಷ್ಟು ಅನುಮಾನ ಸೃಷ್ಟಿ ಆಗಿತ್ತು. ಎಸ್‌ಐಟಿಯನ್ನು ಎಲ್ಲರೂ ಸ್ವಾಗತ ಮಾಡಿದ್ರು, ನಾವೂ ಸ್ವಾಗತ ಮಾಡಿದ್ವಿ. ತನಿಖೆ ಕಾಲಮಿತಿಯಲ್ಲಿ ಆಗಲಿ ಅನ್ನೋ ಒತ್ತಾಯ ಇತ್ತು. ಸರ್ಕಾರದವರೇ ಒಂದೊಂದು ರೀತಿ ಮಾತಾಡ್ತಿದ್ರು. ಬಿಜೆಪಿಯವ್ರು ಮೊದಲು ಮಾತಾಡ್ಲಿಲ್ಲ. ಈಗ ಮಾತಾಡ್ತಿದ್ದಾರೆ ಅನ್ನೋದು ಸರಿಯಲ್ಲ. ನಾವು ಪ್ರಾರಂಭದಿಂದಲೂ ಸ್ಪಷ್ಟವಾಗಿಯೇ ಮಾತಾಡ್ತಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಭಗವಾನ್ ಹನುಮಂತ ಮೊದಲ ಬಾಹ್ಯಾಕಾಶ ಯಾನಿ: ವಿದ್ಯಾರ್ಥಿಗಳಿಗೆ ಕೇಂದ್ರ ಮಾಜಿ ಸಚಿವ ಅನುರಾಗ್ ಠಾಕೂರ್ ಮಾಹಿತಿ
ತನಿಖೆ ಮುಗಿದು ಸತ್ಯ ಹೊರಗೆ ಬರಲಿ, ಅಲ್ಲಿಯವರೆಗೂ ನಾವು ಕಾಯ್ತೇವೆ. ಧರ್ಮಸ್ಥಳ ವಿರುದ್ಧ ಅಪಪ್ರಚಾರ ಹಿಂದೆ ಯಾರ ಕೈವಾಡ ಇದೆ ಅನ್ನೋದು ಬಯಲಾಗಬೇಕು. ಇದಕ್ಕಾಗಿ ಎಸ್‌ಐಟಿ ತನಿಖೆ ಆಗಬೇಕು ಅಂತ ನಮ್ಮ ಪಕ್ಷ ಆಗ್ರಹಿಸಿದೆ. ತನಿಖೆ ಸಂದರ್ಭದಲ್ಲಿ ಇನ್ನೂ ಗೊಂದಲ ಮೂಡಿಸೋದು ಬೇಡ. ಅನಾಮಿಕ ವ್ಯಕ್ತಿ ಮೇಲೆ ಅನುಮಾನ, ಎಲ್ಲ ರೀತಿಯ ಪ್ರಶ್ನೆಗಳು ಇವೆ. ಅನಾಮಿಕನ ಬಂಧನವನ್ನು ಸ್ವಾಗತ ಮಾಡುತ್ತೇವೆ. ಆತನ ವಿಚಾರಣೆ ನಡೆಸಲಿ. ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆದು ಸತ್ಯ ಹೊರಗೆ ಬರಲಿ ಎಂದು ಹೇಳಿದ್ದಾರೆ.
ಹಿಂದೂ ಧಾರ್ಮಿಕ ಕೇಂದ್ರಗಳನ್ನು ಟಾರ್ಗೆಟ್ ಮಾಡಲಾಗಿದೆ. ವ್ಯವಸ್ಥಿತ ಷಡ್ಯಂತ್ರಗಳು ನಡೆಯುತ್ತಿವೆ. ಈ ಪಿತೂರಿಗಳನ್ನು ಬಯಲಿಗೆಳೆಯುವ ಕೆಲಸಗಳು ಆಗಬೇಕು. ಎಸ್‌ಐಟಿ ತನಿಖೆ ತೀವ್ರ ವೇಗದಲ್ಲಿ ನಡೆಯುತ್ತಿದೆ. ಈ ಹಂತದಲ್ಲಿ ಯಾವುದೇ ರಾಜಕೀಯ ಬೇಡ. ರಾಜಕೀಯವನ್ನು ದೂರ ಇಡೋಣ. ಕಾಂಗ್ರೆಸ್ ಇದರಲ್ಲೂ ರಾಜಕೀಯ ಮಾಡ್ತಿದೆ. ನಮಗೆ ಯಾವುದೇ ರಾಜಕೀಯ ಬೇಡ. ಸತ್ಯ ಹೊರಗೆ ಬರುವುದು ಮುಖ್ಯ. ಯಾರ ಷಡ್ಯಂತ್ರ ಅನ್ನೋದು ಆಚೆಗೆ ಬರಬೇಕು ಎಂದು ಆಗ್ರಹಿಸಿದ್ದಾರೆ.
