ಸಿದ್ದರಾಮಯ್ಯಗೆ ಅಂಕಲ್ ಎಂದ ಅಶ್ವಥ್ ನಾರಾಯಣ್

ರಾಮನಗರ: ಅಧಿಕಾರದ ರುಚಿ ನೋಡಿರೋ ಅಂಕಲ್‍ಗೆ ರಾಜಕೀಯ ಕಂಟಿನ್ಯೂ ಮಾಡುವ ಆಶಕ್ತಿ ಇದೆ ಎಂದು ಸಿದ್ದರಾಮಯ್ಯ ಅವರನ್ನು ಸಚಿವ ಅಶ್ವಥ್ ನಾರಾಯಣ್ ವ್ಯಂಗ್ಯ ಮಾಡಿದರು.

ಮಾಗಡಿಯಲ್ಲಿ ಮಾತನಾಡಿ, ಸಿದ್ದರಾಮಯ್ಯರಿಗೆ 75 ವರ್ಷ ಆಗಿದೆ ಅದಕ್ಕೆ ಮನೆಗೆ ಹೋಗಪ್ಪಾ ಅಂತ ಕಳಿಸುತ್ತಿದ್ದಾರೆ. ಗುಡ್ ಬಾಯ್ ಅಂತ ಹೇಳೋದಿಕ್ಕೆ ಕಾರ್ಯಕ್ರಮ ಮಾಡುತ್ತಿದ್ದಾರೆ. ಹಿಂದೆ ರಾಜಕೀಯ ಸನ್ಯಾಸತ್ವ ತೆಗೆದುಕೊಳ್ಳುತ್ತೇನೆ ಎಂದಿದ್ದರು. ಆದರೂ ರಾಜಕೀಯದಲ್ಲಿ ನಿವೃತ್ತಿ ಪಡೆದಿಲ್ಲ ಎಂದು ಟೀಕಿಸಿದರು.

Siddaramaiah

ಅಧಿಕಾರದ ರುಚಿ ನೋಡಿರೋ ಅಂಕಲ್‍ಗೆ ರಾಜಕೀಯ ಕಂಟಿನ್ಯೂ ಮಾಡುವ ಅಶಕ್ತಿ ಇದೆ. ಆದರೆ ಜನ ಈ ಕಾಲಕ್ಕೆ ಸಿದ್ದರಾಮಯ್ಯರನ್ನು ತಿರಸ್ಕರಿಸುತ್ತಾರೆ. ದುರಾಸೆ ಬಿಟ್ಟು ಗೌರವಾನ್ವಿತವಾಗಿ ಯುವಕರಿಗೆ ಅವಕಾಶ ಮಾಡಿಕೊಡಲಿ. ಇನ್ನಾದರೂ ಅವರಿಗೆ ದುರಾಸೆ ಹೋಗಿ ತಿಳುವಳಿಕೆ ಬರಲಿ ಎಂದರು. ಇದನ್ನೂ ಓದಿ: ನೋವಿಗೆ ರಾಜೀನಾಮೆಯೇ ಪರಿಹಾರವಲ್ಲ: ಈಶ್ವರಪ್ಪ

ಮಂಗಳೂರು ಹತ್ಯೆ ಪ್ರಕರಣದ ಪರಿಹಾರ ನೀಡುವಲ್ಲಿ ತಾರತಮ್ಯ ಆರೋಪ ವಿಚಾರವಾಗಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು. ಮನೆಗೆ ಬೆಂಕಿ ಬಿದ್ದಾಗ ಅಡುಗೆ ಮಾಡಿಕೊಳ್ಳುವ ಪ್ರಯತ್ನ ಬಿಡಲಿ. ಜನರ ಭಾವನೆ ಜೊತೆ ಆಟವಾಡುವ ಕೆಲಸ ಬೇಡ ಎಂದು ತಿಳಿಸಿದರು.

ಪ್ರಕರಣ ಬಗ್ಗೆ ಸಿಎಂ ಸೂಕ್ತವಾದ ಕ್ರಮ ವಹಿಸುತ್ತಿದ್ದಾರೆ. ಎಲ್ಲವೂ ಕೂಡಾ ಪಾರದರ್ಶಕವಾಗಿ ನಡೆಯುತ್ತಿದೆ. ನಮ್ಮ ಸಿಎಂ ತಿಳುವಳಿಕೆ ಇರುವವರು. ಹೆಚ್‍ಡಿಕೆ ರಾಜಕೀಯ ಪ್ರೇರಿತವಾಗಿ ಹೇಳಿಕೆ ನೀಡಬಾರದು. ಹೇಳಿಕೆ ಕೊಡಬೇಕಾದರೆ ಆಧಾರ, ವಿಚಾರ ಇರಬೇಕು. ಸುಮ್ಮನೆ ಹೇಳಿಕೆ ನೀಡಿ ತಪ್ಪಿಸಿಕೊಳ್ಳಬಾರದು ಎಂದು ಕಿಡಿಕಾರಿದರು. ಇದನ್ನೂ ಓದಿ: ಮಂಡ್ಯದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಬೀದಿಗಿಳಿದ ಹಿಂದೂ ಕಾರ್ಯಕರ್ತರು, ಅನ್ನದಾತರು!

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *