ನನ್ನ ವಿಷಯಕ್ಕೆ ಬಂದು ಡಿಕೆಶಿ ಶೇಪ್ ಔಟ್ ಮಾಡಿಕೊಂಡಿದ್ದಾರೆ: ಅಶ್ವಥ್ ನಾರಾಯಣ

ಬೆಂಗಳೂರು: ನನ್ನ ವಿಷಯಕ್ಕೆ ಬಂದು ಡಿ.ಕೆ ಶಿವಕುಮಾರ್ ಶೇಪ್ ಔಟ್ ಮಾಡಿಕೊಂಡಿದ್ದಾರೆ ಎಂದು ಸಚಿವ ಅಶ್ವಥ್ ನಾರಾಯಣ ಪಿಎಸ್‍ಐ ಅಕ್ರಮ ಪ್ರಕರಣದಲ್ಲಿ ಟಾರ್ಗೆಟ್ ಮಾಡಿದ್ದ ಡಿ.ಕೆ ಶಿವಕುಮಾರ್‌ಗೆ ಟಕ್ಕರ್ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ನಟಿ ರಮ್ಯಾ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅಶ್ವಥ್ ನಾರಾಯಣ, ಸ್ನೇಹಗಳನ್ನು, ಸಂಬಂಧಗಳನ್ನು ಪ್ರಶ್ನೆ ಮಾಡುವ ಕೀಳು ಮಟ್ಟಕ್ಕೆ ಡಿ.ಕೆ.ಶಿವಕುಮಾರ್ ಇಳಿದಿದ್ದರು. ಡಿ.ಕೆ.ಶಿವಕುಮಾರ್ ವರ್ತನೆಯನ್ನು ಕಾಂಗ್ರೆಸ್ ನಾಯಕರು ಖಂಡಿಸಿದ್ದಾರೆ. ಭೇಟಿಗಳಿಗೆ ಬೇರೆ ಅರ್ಥ ಕಲ್ಪಿಸಲು ಹೋದ ಡಿ.ಕೆ ಶಿವಕುಮಾರ್ ಅವರಿಗೆ ಪಕ್ಷದವರೇ ಪಾಠ ಕಲಿಸಿದ್ದಾರೆ. ಇನ್ನು ಮುಂದೆಯಾದ್ರು ಹೀಗೆ ಮಾತನಾಡೋದನ್ನು ಡಿ.ಕೆ ಶಿವಕುಮಾರ್ ಬಿಡಬೇಕು ಅಂತ ಲೇವಡಿ ಮಾಡಿದರು. ಇದನ್ನೂ ಓದಿ: ರಮ್ಯಾಗೆ ಕೋಪ ಇದ್ರೆ ಬೈಯಲಿ ಆದ್ರೆ ಟ್ವೀಟ್‍ನಲ್ಲಿ ಬೇಡ: ನಲಪಾಡ್

ಅಶ್ವಥ್ ನಾರಾಯಣ ಮತ್ತು ಎಂ.ಬಿ ಪಾಟೀಲ್ ಭೇಟಿ ಪರ ಟ್ವೀಟ್ ಮಾಡಿದ್ದ ನಟಿ ರಮ್ಯಾ ಟ್ವೀಟ್ ಇಟ್ಟುಕೊಂಡು ಡಿ.ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿರೋ ಅಶ್ವಥ್ ನಾರಾಯಣ, ನನ್ನ ಬಗ್ಗೆ ಮಾತನಾಡಿ ಅವರ ವ್ಯಕ್ತಿತ್ವವನ್ನು ಅವ್ರೇ ಹೇಳಿಕೊಳ್ಳುವ ಹಾಗೆ ಆಯ್ತು. ಇದು ನನಗೆ ಸಂತೋಷದ ವಿಚಾರ. ಡಿಕೆ ಶಿವಕುಮಾರ್ ರಾಂಗ್ ನಂಬರ್ ಡಯಲ್ ಮಾಡ್ತಾರೆ. ರಾಂಗ್ ನಂಬರ್‌ಗೆ ಡಯಲ್ ಮಾಡಿ ಹೀಗೆ ಮಾಡಿಕೊಂಡಿದ್ದಾರೆ. ಬಿಲ್ಡಪ್ ಕೊಡೋಕೆ ಹೋಗಿ ಶೇಪ್ ಔಟ್ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

dkshivakumar

ನನ್ನನ್ನು ಟಚ್ ಮಾಡಲು ಬಂದು ಅಯ್ಯೋ ಪಾಪ ಎನ್ನಿಸಿಕೊಳ್ಳುವ ರೀತಿ ಮಾಡಿಕೊಂಡಿದ್ದಾರೆ. ಡಿ.ಕೆ ಶಿವಕುಮಾರ್ ವರ್ತನೆಯಿಂದ ಅವರ ಪಕ್ಷಕ್ಕೆ ದೊಡ್ಡ ಮುಜುಗರ ಆಗಿದೆ. ಯಾರನ್ನೋ ನಿರ್ಣಾಮ ಮಾಡಲು ಹೋಗಿ ಅವ್ರೆ ನಿರ್ಣಾಮ ಆಗಿದ್ದಾರೆ. ನನಗೆ ಡಿ.ಕೆ ಶಿವಕುಮಾರ್ ಬಗ್ಗೆ ಅನುಕಂಪ ಇಲ್ಲ. ಸಜ್ಜನರ ಮೇಲೆ ಮಾತ್ರ ನನಗೆ ಅನುಕಂಪ ಇದೆ ಅಷ್ಟೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಬಿಜೆಪಿ ವಿರುದ್ಧ ಹೋರಾಡಿ, ರಮ್ಯಾ ವಿರುದ್ಧ ಅಲ್ಲ – ಡಿಕೆಶಿ ಬೆಂಬಲಿಗರಿಗೆ ಮಹದೇವಪ್ಪ ಟಾಂಗ್

ಪಕ್ಷದ ನಾಯಕರು, ಹೆಣ್ಣು ಮಕ್ಕಳ ಬಗ್ಗೆ ಕೀಳಾಗಿ ನಡೆಸಿಕೊಳ್ಳೋದು, ಅನುಮಾನ ಬೀಳೋದು, ತೇಜೋವಧೆ ಮಾಡೋದು ಸರಿಯಲ್ಲ. ಈಗ ಡಿ.ಕೆ ಶಿವಕುಮಾರ್ ಅವರಿಗೆ ಬಿಸಿ ತಟ್ಟಿದೆ. ಈಗ ಡಿ.ಕೆ ಶಿವಕುಮಾರ್ ಸೆಲ್ಪ್ ಐಸೋಲೇಟ್ ಆಗಿದ್ದಾರೆ ಅಂತ ವಾಗ್ದಾಳಿ ನಡೆಸಿದರು.

Comments

Leave a Reply

Your email address will not be published. Required fields are marked *