ಚಾಮುಂಡೇಶ್ವರಿ ದೇವಸ್ಥಾನ ಎಲ್ಲರ ಆಸ್ತಿ ಅನ್ನೋದು ಸರಿ ಅಲ್ಲ, ಡಿಕೆಶಿ ಕ್ಷಮೆ ಕೇಳ್ಬೇಕು: ಆರ್.ಅಶೋಕ್

ಬೆಂಗಳೂರು: ಚಾಮುಂಡೇಶ್ವರಿ ದೇವಸ್ಥಾನ (Chamundeshwari Temple) ಎಲ್ಲರ ಆಸ್ತಿ ಎಂಬ ಹೇಳಿಕೆ ಸರಿ ಇಲ್ಲ. ಡಿಕೆಶಿ ರಾಜ್ಯದ ಜನರ ಕ್ಷಮೆ ಕೇಳಬೇಕು, ಕೊಟ್ಟ ಹೇಳಿಕೆ ವಾಪಸ್ ಪಡೆಯಬೇಕು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R.Ashok)  ಆಗ್ರಹಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ವಕ್ಫ್ ಆಸ್ತಿ, ಮಸೀದಿಗಳನ್ನ ಸಾರ್ವಜನಿಕ ಆಸ್ತಿ ಅಂತಾ ಘೋಷಣೆ ಮಾಡ್ತೀರಾ..!? ನನ್ನದು ನನ್ನದೇ, ನಿನ್ನದು ನನ್ನದೇ ಅನ್ನೋ ಸ್ಕೀಂ ಅವರದ್ದು. ಚಾಮುಂಡೇಶ್ವರಿಗೆ ಅವಮಾನ ಮಾಡಿದ್ದಾರೆ ಡಿಕೆಶಿ. ರಾಜ್ಯದ ಜನ ದಂಗೆ ಏಳ್ತಾರೆ, ಡಿಕೆಶಿ ಕ್ಷಮೆ ಕೇಳಬೇಕು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಬಾನು ಮುಷ್ತಾಕ್‌ಗೆ ದಸರಾ ಆಹ್ವಾನ – ಉದ್ದೇಶವೋ, ದುರುದ್ದೇಶವೋ ಬಹಿರಂಗಪಡಿಸಲಿ – ವಿಜಯೇಂದ್ರ

ರಾಜ್ಯ ಸರ್ಕಾರದ ಪದೇ ಪದೇ ಹಿಂದೂಗಳ ಭಾವನಕ್ಕೆ ಧಕ್ಕೆ ತರುತ್ತಿದೆ. ಕಾಂಗ್ರೆಸ್‌ನ (Congress) ರಾಜ್ಯಸಭೆ ಸದಸ್ಯರ ಬೆಂಬಲಿಗರಿಂದ ಪಾಕಿಸ್ತಾನ ಜಿಂದಾಬಾದ್ ಆಯ್ತು. ಅದನ್ನೇ ಒಂದು ಕಡೆ ಸರ್ಕಾರ ಮುಚ್ಚಿ ಹಾಕಿಬಿಡ್ತು. ಚಾಮುಂಡೇಶ್ವರಿ ದೇವಸ್ಥಾನವನ್ನು ಹಿಂದೂಗಳ ಸ್ವತ್ತಾ ಎಂದಿದ್ದಾರೆ..? ಹಾಗಿದ್ರೆ ಯಾವಾಗ ಇದನ್ನು ವಕ್ಫ್ ಬೋರ್ಡ್‌ಗೆ ಬರೆಯುತ್ತೀರಾ..? ಡಿಕೆಶಿ ಅವರೇ ನಿಮ್ಮನ್ನು ಏನಂತ ಕರಿಯಬೇಕು..? ರಾಜ್ಯ ಸರ್ಕಾರ ಮತ್ತೆ ಮುಸ್ಲಿಂ ತುಷ್ಟೀಕರಣ ಮಾಡ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ಮಂಡ್ಯ | ಸೆ.25ರಿಂದ ನಾಲ್ಕು ದಿನ ಶ್ರೀರಂಗಪಟ್ಟಣ ದಸರಾ