ಇಡೀ ದೇಶದಲ್ಲೇ ಕಾಂಗ್ರೆಸ್ ಅಧೋಗತಿಗೆ ತಲುಪಿದೆ – ಕಾಂಗ್ರೆಸ್ ವಿರುದ್ಧ ಅಶೋಕ್ ವಾಗ್ದಾಳಿ

ಬೆಂಗಳೂರು: ಬಿಟ್ ಕಾಯಿನ್ ಪ್ರಕರಣ ತನಿಖೆಯಲ್ಲಿ ನಮ್ಮ ಸರ್ಕಾರದ ವೈಫಲ್ಯ ಇಲ್ಲ. ಒಂದು ಸುಳ್ಳು ಸಾವಿರ ಬಾರಿ ಹೇಳುವುದು ಕಾಂಗ್ರೆಸ್ ಸಂಸ್ಕೃತಿ. ಇಡೀ ದೇಶದಲ್ಲಿ ಕಾಂಗ್ರೆಸ್ ಅಧೋಗತಿಗೆ ಇಳಿದಿದೆ ಎಂದು ಸಚಿವ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸೌಧದಲ್ಲಿ ಸೋಮಣ್ಣ, ಗೋಪಾಲಯ್ಯ ಶಾಸಕ ಪ್ರೀತಂ ಗೌಡ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್, ಮುಂದಿನ ಚುನಾವಣೆ ಎದುರಿಸಲು ಸೃಷ್ಟಿ ಮಾಡಿಕೊಂಡಿರುವ ವಿಚಾರವೇ ಬಿಟ್ ಕಾಯಿನ್. ನಿತ್ಯ ಏನು ಸುಳ್ಳು ಹೇಳಬೇಕು ಎಂಬುದು ಕಾಂಗ್ರೆಸ್ ಚಿಂತೆಯಾಗಿದೆ. ಹಾವು ಬಿಡುತ್ತೇವೆ, ಹಾವು ಬಿಡುತ್ತೇವೆ ಅಂತ ಖಾಲಿ ಬುಟ್ಟಿ ಇಟ್ಟುಕೊಂಡು ಸೌಂಡ್ ಮಾಡುತ್ತಿದ್ದಾರೆ. ಇವರ ಹಣೆಬರಹವೇ ಇಷ್ಟು ಎಂದು ಟೀಕಿಸಿದರು. ಇದನ್ನೂ ಓದಿ: ಹುಬ್ಬಳ್ಳಿ ಆಹಾರ ನಿಗಮದ ವಿಭಾಗೀಯ ಕೇಂದ್ರ ಕಚೇರಿಗೆ ಪಿಯೂಷ್ ಗೋಯಲ್ ಚಾಲನೆ

ಜವಾಬ್ದಾರಿಯುತ ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ಇಬ್ಬರು ಹೆಸರು ಹೇಳಲಿ. ಹಾವು ಇಲ್ಲದ ಬುಟ್ಟಿ ಇಟ್ಟುಕೊಂಡು ನಗೆ ಪಾಟಲು ಆಗುವುದು ಬೇಡ ಎಂದು ಸವಾಲು ಹಾಕಿದರು. 2ಜಿ 3ಜಿ ಕಲ್ಲಿದ್ದಲು ಹೀಗೆ ಸಾವಿರಾರು ಕೋಟಿ ರೂ. ಹಗರಣ ಮಾಡಿದ್ದು ಕಾಂಗ್ರೆಸ್. ಇವತ್ತು ದೇಶ ನಡೆಸುತ್ತಿರುವುದು ದೇಶಭಕ್ತ ನರೇಂದ್ರ ಮೋದಿ ಸರ್ಕಾರ ಎಂಬುದು ನೆನಪಿರಲಿ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಪರೀಕ್ಷೆಯಲ್ಲಿ 100ಕ್ಕೆ 89 ಅಂಕ ಪಡೆದ 104ರ ವೃದ್ಧೆಯ ಸ್ಫೂರ್ತಿದಾಯಕ ಕಥೆ

ರಫೆಲ್ ವಿಚಾರದಲ್ಲಿ ನರೇಂದ್ರ ಮೋದಿ ವಿರುದ್ಧ ಆರೋಪ ಮಾಡಿದರು. ಅದರಲ್ಲಿ ಲಂಚ ತಿಂದವರು ಇದೇ ಕಾಂಗ್ರೆಸ್‍ನವರು. ಬಿಟ್ ಕಾಯಿನ್ 4,500 ಕೋಟಿ ರೂ. ಅಂತಾರೆ ದಾಖಲೆ ಕೊಡಲಿ. ಇವರಿಗೆ ತಾಕತ್ತು ಇದ್ದರೆ. 2016 ರಲ್ಲೇ ಈ ವ್ಯವಹಾರ ನಡೆದಿದೆ. ವಿದ್ವತ್ ಹಲ್ಲೆ ಪ್ರಕರಣದಲ್ಲಿ ಶ್ರೀಕಿ ಬಂಧಿಸದೇ ಬಿಟ್ಟು ಕಳುಹಿಸಿದರು ಕಾಂಗ್ರೆಸ್‍ನವರು. ಆಗ ಯಾವ ಒತ್ತಡ ಇತ್ತು. ಸುರ್ಜೆವಾಲ ದೆಹಲಿಯಲ್ಲಿ ಹೇಳುವ ಸಂಸ್ಥೆ ಅಸ್ತಿತ್ವದಲ್ಲೇ ಇಲ್ಲ. ಒಂದು ರಾಷ್ಟ್ರೀಯ ಪಕ್ಷದ ಉಸ್ತುವಾರಿ ಮಾಹಿತಿ ಇಲ್ಲದೆ ಮಾತನಾಡುವುದು ಅವರ ದಿವಾಳಿತನಕ್ಕೆ ಸಾಕ್ಷಿ ಎಂದು ಲೇವಡಿ ಮಾಡಿದರು.

Comments

Leave a Reply

Your email address will not be published. Required fields are marked *