ಇದೊಂದು ಐತಿಹಾಸಿಕ ಮತ್ತು ಅಭೂತಪೂರ್ವ ಕ್ಷಣ: ಪ್ರಧಾನಿ ಮೋದಿ

ನವದೆಹಲಿ: ಭಾರತ ಮತ್ತು ಆಸಿಯಾನ್ ರಾಷ್ಟ್ರಗಳ ನಡುವಿನ ಸಂಬಂಧಕ್ಕೆ 25 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ 10 ದೇಶಗಳ ನಾಯಕರ ಜೊತೆ ಭಯೋತ್ಪಾದನೆ, ಭದ್ರತೆ, ಸಂಪರ್ಕ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದಾರೆ.

ಈ ವೇಳೆ ಮಾತನಾಡಿದ ಮೋದಿ ಆಸಿಯಾನ್ ರಾಷ್ಟ್ರಗಳ ನಡುವಿನ ಐತಿಹಾಸಿಕ ಸಂಬಂಧಗಳನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ 2019ರ ವರ್ಷವನ್ನು ಪ್ರವಾಸೋದ್ಯಮವನ್ನು ಉತ್ತೇಜಿಸುವ ವರ್ಷವನ್ನಾಗಿ ಘೋಷಿಸಿದರು. ಅಲ್ಲದೇ ಕಾಂಬೋಡಿಯಾ, ಮ್ಯಾನ್ಮಾರ್, ವಿಯೆಟ್ನಾಂ ದೇಶಗಳಲ್ಲಿರುವ ದೇವಾಲಯಗಳ ಕುರಿತು ಚರ್ಚೆ ನಡೆಸಲು ಉತ್ತಮ ಅವಕಾಶ ಎಂದರು.

ಕಳೆದ 25 ವರ್ಷಗಳಲ್ಲಿ ನಮ್ಮ ನಡುವಿನ ವ್ಯಾಪಾರ ವಹಿವಾಟು 25 ಪಟ್ಟು ಬೆಳವಣಿಗೆಯಾಗಿದ್ದು ಇದು ಮತ್ತಷ್ಟು ಹೆಚ್ಚಾಗಬೇಕು. ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಆಗಮಿಸಿದ್ದು ಇದೊಂದು ಐತಿಹಾಸಿಕ ಮತ್ತು ಅಭೂತಪೂರ್ವ ಕ್ಷಣ ಎಂದು ಮೋದಿ ಬಣ್ಣಿಸಿದರು.

ನಮ್ಮ ಸ್ನೇಹ ಸಂಬಂಧ ನಮ್ಮ ಸಂಸ್ಕೃತಿ ಮತ್ತು ನಾಗರೀಕತೆಯೊಂದಿಗೆ ರೂಪುಗೊಂಡಿದೆ. ಭಾರತವು ಆಸಿಯಾನ್ ರಾಷ್ಟ್ರಗಳಲ್ಲಿ ಶಾಂತಿ ಹಾಗೂ ಮೌಲ್ಯಯುತ ಸಮಾಜ ನಿರ್ಮಾಣದ ದೃಷ್ಟಿಯನ್ನು ಹೊಂದಿದೆ ಎಂದರು.

25 ವರ್ಷಗಳ ಇಂಡೋ-ಆಸಿಯಾನ್ ಸಂಬಂಧಗಳನ್ನು ಗುರುತಿಸುವ ಸಲುವಾಗಿ ಮೋದಿ ವಿಶೇಷ ಅಂಚೆಚೀಟಿಗಳನ್ನು ಮೋದಿ ಬಿಡುಗಡೆ ಮಾಡಿದರು.

ಈ ಕಾರ್ಯಕ್ರಮಕ್ಕೂ ಮೊದಲು ಇಂಡೋನೇಷ್ಯಾ, ಮಲೇಷ್ಯಾ, ಫಿಲಿಪಿನ್ಸ್, ಸಿಂಗಾಪುರ, ಥೈಲೆಂಡ್, ಬ್ರೂನಿ, ಕಾಂಬೋಡಿಯಾ, ಲಾವೋಸ್, ಮ್ಯಾನ್ಮಾರ್, ವಿಯೆಟ್ನಾಂ ದೇಶಗಳ ನಾಯಕರ ಜೊತೆ ಫೋಟೋ ಸೆಷನ್ ನಡೆಯಿತು.

Comments

Leave a Reply

Your email address will not be published. Required fields are marked *