ಬೆಂಗಳೂರು: ಅಸನಿ ಚಂಡಮಾರುತ ಎಫೆಕ್ಟ್ ನಿಂದಾಗಿ ಬೆಂಗಳೂರಿನ ವಾತಾವರಣ ಕಂಪ್ಲೀಟ್ ಕೂಲ್ ಆಗಿದೆ. ಇಂದು ಕೂಡ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಮೋಡದ ಮರೆಯಲ್ಲೇ ಸೂರ್ಯ ದೇವನ ಜಾರಿಹೋಗಲಿದ್ದಾನೆ.

ಬಂಗಾಳಕೊಲ್ಲಿಯನ್ನ ತೀವ್ರ ವಾಯುಭಾರ ಕುಸಿತದಿಂದ ಉಂಟಾಗಿರುವ ಅಸನಿ ಚಂಡಮಾರುತದ ಎಫೆಕ್ಟ್ ನಿಂದ ರಾಜ್ಯದ ಹಲವು ಕಡೆ ಜೋರು ಮಳೆ ಆಗ್ತಿದೆ. ಬೆಂಗಳೂರಿನಲ್ಲೂ ಚಂಡಮಾರುತದ ಪರಿಣಾಮ ಬೇಸಿಗೆ ಬೇಗೆಯಿಂದ ತತ್ತರಿಸಿದ್ದ ಜನರಿಗೆ ತಂಪೆರೆದಿದೆ. ನಗರದಲ್ಲಿ ನೆನ್ನೆಯಿಂದಲೂ ಸಹ ಮೋಡ ಕವಿದ ವಾತಾವರಣವಿದೆ. ನಿನ್ನೆ ನಗರದ ಬಹು ಭಾಗಗಳಲ್ಲಿ ಗಾಳಿ ಜೊತೆಗೆ ತುಂತುರು ಮಳೆ ಆಗಿತ್ತು. ಇಂದು ಸಹ ಅಂತಹದ್ದೆ ಪರಿಸ್ಥಿತಿ ಮುಂದುವರೆಯುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದನ್ನೂ ಓದಿ: ಅಸನಿ ಸೈಕ್ಲೋನ್ ಎಫೆಕ್ಟ್ – 3 ದಿನ ಮಳೆ ಸಂಭವ

ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಜೊತೆಗೆ ಗುಡುಗು, ಮಿಂಚು ಸಹಿತ ಮಳೆಯ ಎಚ್ಚರಿಕೆ ನೀಡಲಾಗಿದೆ. ಜೊತೆಗೆ ಗಾಳಿಯ ವೇಗ ಸಹ ಹೆಚ್ಚಾಗುವ ಸಾಧ್ಯತೆ ಇದೆ. ಬೆಂಗಳೂರು ಹೊರತು ಪಡಿಸಿ ರಾಜ್ಯದ ದಕ್ಷಿಣ ಮತ್ತು ಉತ್ತರ ಒಳನಾಡು ಹಾಗೂ ಕರಾವಳಿ ಭಾಗದಲ್ಲೂ ಅನೇಕ ಕಡೆ ಅಸನಿ ಎಫೆಕ್ಟ್ ಇರಲಿದೆ. ಜೊತೆಗೆ ಮುಂದಿನ ಮೂರು ದಿನಗಳ ಮಳೆ ಎಚ್ಚರಿಕೆಯನ್ನು ಸಹ ನೀಡಿದ್ದು, ಮನೆಯಿಂದ ಅನವಶ್ಯಕವಾಗಿ ಆಚೆ ಬರುವವರು ಕೊಂಚ ಯೋಚಿಸಿ ಆಚೆ ಬಂದ್ರೆ ಒಳ್ಳೆಯದು.
ಒಟ್ಟಾರೆ ಬೇಸಿಗೆಯ ಬಿಸಿಲಿನಿಂದ ಬಸವಳಿದಿದ್ದ ಬೆಂಗಳೂರನ್ನ ಅಸನಿ ಕೂಲ್ ಮಾಡಿದೆ.

Leave a Reply