ನವದೆಹಲಿ: ಟೋಪಿ ಧರಿಸಿ ಸಂಸತ್ತಿಗೆ ಹೋಗಬಹುದು. ಆದರೆ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹಿಜಬ್ ಧರಿಸಿ ಯಾಕೆ ಹೋಗಬಾರದು ಎಂದು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವನ್ನು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ದಿನೇ ದಿನೇ ತಾರಕಕ್ಕೆ ಏರುತ್ತಿರುವ ಹಿಜಬ್ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಹಿಜಬ್ ಧರಿಸುವ ಹಕ್ಕಿಗಾಗಿ ಹೋರಾಡುತ್ತಿರುವ ನಮ್ಮ ಸಹೋದರಿಯರು ತಮ್ಮ ಹೋರಾಟದಲ್ಲಿ ಯಶಸ್ವಿಯಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದರು.

ಕರ್ನಾಟಕದಲ್ಲಿ ಸಂವಿಧಾನದ ಪರಿಚ್ಛೇದ 15, 19 ಮತ್ತು 21ರ ಉಲ್ಲಂಘನೆಯಾಗುತ್ತಿದೆ. ದ್ವೇಷ ಸಾಧಿಸುವ ಮತ್ತು ಗುಂಡಿನ ದಾಳಿ ನಡೆಸುವವರ ವಿರುದ್ಧ ನಾವು ನಿಲ್ಲಬೇಕು. ಬಿಜೆಪಿ ಸರ್ಕಾರದ ಈ ನಿರ್ಧಾರವನ್ನು ನಾನು ಖಂಡಿಸುತ್ತೇನೆ ಎಂದು ವಾಗ್ದಾಳಿ ನಡೆಸಿದರು.

ಈಗಾಗಲೇ ಹಿಜಬ್ ಪ್ರಕರಣ ಕೋರ್ಟ್‍ನಲ್ಲಿದ್ದು, ಅರ್ಜಿ ಕರ್ನಾಟಕ ಹೈಕೋರ್ಟ್‍ನ ವಿಸ್ತøತ ಪೀಠಕ್ಕೆ ವರ್ಗಾವಣೆಯಾಗಿದೆ. ನ್ಯಾ. ಕೃಷ್ಣ ದೀಕ್ಷಿತ್ ಮಾತನಾಡಿ, ಎರಡನೇ ದಿನ ವಿಚಾರಣೆ ಆರಂಭದಲ್ಲೇ ಇದು ಬಹಳ ದೊಡ್ಡ ವಿಚಾರ. ಮೂರು ನ್ಯಾಯಾಲಯದ ಆದೇಶ ನೋಡಿದ್ದೇವೆ. ಕೆಲವೊಂದು ಪಿಐಎಲ್‍ಗಳು ದಾಖಲು ಆಗುತ್ತಿವೆ. ಆ ಅರ್ಜಿಗಳು ಕೂಡ ವಿಭಾಗೀಯ ಪೀಠಕ್ಕೆ ವಿಚಾರಣೆಗೆ ಬರುತ್ತಿವೆ ಎಂದು ಹೇಳಿದರು. ಇದನ್ನೂ ಓದಿ: ಧರ್ಮ ಹೇಳಿದಂತೆ ಮೈತುಂಬ ಬಟ್ಟೆ ಹಾಕುವುದು ತಪ್ಪಾ: ರಾಯರೆಡ್ಡಿ ಪ್ರಶ್ನೆ

ಕೊನೆಗೆ ಈ ಪ್ರಕರಣದ ವಿಚಾರಣೆ ದೀರ್ಘವಾಗಿರುವ ಕಾರಣ ಯಾವುದೇ ಮಧ್ಯಂತರ ಆದೇಶ ನೀಡುವುದಿಲ್ಲ. ಮುಖ್ಯ ನಾಯಮೂರ್ತಿಗಳ ಪೀಠಕ್ಕೆ ವರ್ಗಾವಣೆ ಮಾಡಲಾಗುವುದು ಎಂದು ಆದೇಶಿಸಿದರು. ಇದನ್ನೂ ಓದಿ: ಶಿಕ್ಷಣ ಸಂಸ್ಥೆಗಳ 200 ಮೀಟರ್ ವ್ಯಾಪ್ತಿಯಲ್ಲಿ ಪ್ರತಿಭಟನೆಗೆ ನಿಷೇಧ: ಕಮಲ್ ಪಂತ್

Leave a Reply