ನಾನು ಮಂತ್ರಿ ಆಗಿರುವವರೆಗೆ ನನ್ನ ಮಗ MLA,MLC ಆಗುವುದು ಬೇಡ: ಈಶ್ವರಪ್ಪ

ಶಿವಮೊಗ್ಗ: ರಾಜ್ಯ ವಿಧಾನ ಪರಿಷತ್‍ನ 25 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಎಲ್ಲಾ ಪಕ್ಷಗಳಲ್ಲಿ ಟಿಕೆಟ್ ಪಡೆಯಲು ಪೈಪೋಟಿ ನಡೆಯುತ್ತಿದೆ. ಆದರೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಾನು ಮಂತ್ರಿ ಆಗಿರುವವರೆಗೂ ನನ್ನ ಪುತ್ರ ಕಾಂತೇಶ್ ಎಂಎಲ್‍ಎ, ಎಂಎಲ್‍ಸಿ ಸ್ಥಾನಕ್ಕೆ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಶಿವಮೊಗ್ಗದಿಂದ ಪರಿಷತ್ ಸ್ಥಾನಕ್ಕೆ ನನ್ನ ಪುತ್ರ ಕಾಂತೇಶ್ ಈ ಬಾರಿ ಸ್ಪರ್ಧೆ ಮಾಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ನಾನು ಮಂತ್ರಿ ಆಗಿರುವ ಕಾರಣ ನನ್ನ ಪುತ್ರ ಎಂಎಲ್‍ಎ ಅಥವಾ ಎಂಎಲ್‍ಸಿ ಆಗಕೂಡದು ಎಂದು ತೀರ್ಮಾನಿಸಿದ್ದೇನೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಡ್ರೋನ್ ಮೂಲಕ ಕೋವಿಡ್ ಲಸಿಕೆ ಟ್ರಯಲ್

ಅಭ್ಯರ್ಥಿ ಆಯ್ಕೆ ಸಂಬಂಧ ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ನಡೆದಿದೆ. ಅಭ್ಯರ್ಥಿಗಳ ಪಟ್ಟಿ ಹೆಚ್ಚು ಕಡಿಮೆ ಫೈನಲ್ ಮಾಡಿ ತೀರ್ಮಾನಿಸಲಾಗಿದೆ. ಅಧ್ಯಕ್ಷರು ಹಾಗು ಮುಖ್ಯಮಂತ್ರಿ ಅವರು ಮತ್ತೊಮ್ಮೆ ಚರ್ಚೆ ಮಾಡಿ ಕೇಂದ್ರದ ನಾಯಕರಿಗೆ ಕಳುಹಿಸುತ್ತಾರೆ. ಕೇಂದ್ರದ ನಾಯಕರು ಇನ್ನೆರಡು ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದ್ದಾರೆ ಎಂದರು. ಇದನ್ನೂ ಓದಿ: ದೆಹಲಿಯಲ್ಲಿ ಪೊಲ್ಯೂಷನ್ ಲಾಕ್‍ಡೌನ್ – 1 ವಾರ ಆನ್‌ಲೈನ್‌ ಕ್ಲಾಸ್‌, ವರ್ಕ್‌ ಫ್ರಂ ಹೋಂ

ಈಗಾಗಲೇ ವರಿಷ್ಠರ ಮುಂದೆ ಅಭ್ಯರ್ಥಿಗಳ ಪಟ್ಟಿಯಲ್ಲಿ ನನ್ನ ಪುತ್ರನ ಹೆಸರು ಬೇಡ ಎಂದು ತಿಳಿಸಿದ್ದೇನೆ. ನನ್ನ ಅಭಿಪ್ರಾಯವನ್ನು ಪಕ್ಷದ ವರಿಷ್ಠರು ಒಪ್ಪುತ್ತಾರೆ ಎಂದು ಭಾವಿಸುತ್ತೇನೆ. ಆದರೆ ಪಕ್ಷ ಏನು ತೀರ್ಮಾನ ಕೈಗೊಳ್ಳುತ್ತದೋ, ಅದಕ್ಕೆ ಯಾವಾಗಲೂ ಬದ್ದನಾಗಿರುತ್ತೇನೆ ಎಂದರು. ಇದನ್ನೂ ಓದಿ: ಲಸಿಕೆ ಹಾಕಿಸದಿದ್ರೂ ಬರುತ್ತೆ ಎರಡು ಡೋಸ್ ವ್ಯಾಕ್ಸಿನೇಷನ್ ಸಕ್ಸಸ್ ಮೆಸೇಜ್!

Comments

Leave a Reply

Your email address will not be published. Required fields are marked *