ಮೊದಲೇ ಟಾರ್ಗೆಟ್ ರೀಚ್, ರಫ್ತಿನಲ್ಲಿ ಸಾಧನೆ – ಇದು ಆತ್ಮನಿರ್ಭರ್ ಭಾರತದ ಮೈಲುಗಲ್ಲು ಎಂದ ಮೋದಿ

ನವದೆಹಲಿ: ಭಾರತವು ಮೊದಲ ಬಾರಿಗೆ ಸರಕು ರಫ್ತಿನಿಂದ 400 ಬಿಲಿಯನ್ ಡಾಲರ್(30 ಲಕ್ಷ ಕೋಟಿ ರೂ.) ಗುರಿಯನ್ನು ಸಾಧಿಸಿದ್ದು, ಇದು ಆತ್ಮನಿರ್ಭರ್ ಭಾರತದ ಪ್ರಮುಖ ಮೈಲಿಗಲ್ಲು ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪ್ರಸ್ತುತ 2021-22 ಹಣಕಾಸು ವರ್ಷದಲ್ಲಿ ಭಾರತವು 400 ಬಿಲಿಯನ್ ಡಾಲರ್ ಸರಕು ರಫ್ತುಗಳಿಂದ ಮಹತ್ವಾಕಾಂಕ್ಷೆಯ ಗುರಿಯನ್ನು ಈಗಾಗಲೇ ತಲುಪಿದೆ. ಮೊದಲ ಬಾರಿಗೆ ಭಾರತವು ಈ ಮೈಲುಗಲ್ಲನ್ನು ಸಾಧಿಸಿದ್ದು, ಈ ಯಶಸ್ಸಿಗೆ ಕಾರಣರಾದ ರೈತರು, ಎಂಎಸ್‍ಎಂಇಗಳು ಮತ್ತು ರಫ್ತುದಾರರನ್ನು ಅಭಿನಂದಿಸುತ್ತೇನೆ. ಈ ಸಾಧನೆ ಆತ್ಮನಿರ್ಭರ್ ಭಾರತದ ಪ್ರಮುಖ ಮೈಲುಗಲ್ಲಾಗಿದೆ ಎಂದು ಅಭಿನಂದಿಸಿದ್ದಾರೆ.

ಜನವರಿಯಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮಾತನಾಡಿ, ರಫ್ತನ್ನು ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಕರೆಯನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಿದ್ದಾರೆ. ಇದರಿಂದಾಗಿ ಎಲ್ಲಾ ಭಾರತೀಯರು ಹೆಮ್ಮೆ ಪಡುವ ಸಮಯ ಬಂದಿದೆ. 2021-22ರ ಆರ್ಥಿಕ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ 220 ಶತಕೋಟಿ ಡಾಲರ್‍ನೊಂದಿಗೆ ನಮ್ಮ ಗುರಿಯನ್ನು ತಲುಪುವ ಹಾದಿಯಲ್ಲಿದ್ದೇವೆ ಎಂದಿದ್ದರು. ಇದನ್ನೂ ಓದಿ: `ಪುಷ್ಪಾ’ ಸಿನಿಮಾ ಸ್ಟೈಲ್‍ನಲ್ಲಿ ಸಾಗಣೆ – 2,200 ಕೆ.ಜಿ ರಕ್ತಚಂದನ ಜಪ್ತಿ

ವಾಣಿಜ್ಯ ಸಚಿವಾಲಯದ ಪ್ರಕಾರ, ಭಾರತವು 2021ರ ಡಿಸೆಂಬರ್‌ನಲ್ಲಿ 37 ಶತಕೋಟಿ ರಫ್ತುಗಳ ಗುರಿಯನ್ನು ಸಾಧಿಸಿದೆ. ಇದು ಡಿಸೆಂಬರ್ ತಿಂಗಳಲ್ಲೇ ಅತ್ಯಧಿಕವಾಗಿದೆ. ಕಳೆದ ಡಿಸೆಂಬರ್‌ನಲ್ಲಿ, ಭಾರತದ ಸರಕು ರಫ್ತುಗಳು 37.29 ಬಿಲಿಯನ್(2.83ಲಕ್ಷ ಕೋಟಿ ರೂ.) ಡಾಲರ್‌ನಷ್ಟಿದ್ದರೆ, 12 ತಿಂಗಳ ಹಿಂದಿನ ಅನುಗುಣವಾದ ಅಂಕಿಅಂಶಗಳು 27.22 ಬಿಲಿಯನ್ ಡಾಲರ್(1.67ಲಕ್ಷ ಕೋಟಿ ರೂ.)ಗಿಂತ ಹೆಚ್ಚು ದಾಖಲಾಗಿವೆ. ಇದನ್ನೂ ಓದಿ: ನಾನು ಗಾಂಧಿ, ನೆಹರೂ ಕುಟುಂಬದ ಗುಲಾಮ: ಕಾಂಗ್ರೆಸ್ ಶಾಸಕ

Comments

Leave a Reply

Your email address will not be published. Required fields are marked *