ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕ ಇಳಿಕೆ – ಹೀಗಿದೆ ಇಂದಿನ ದರ

petrol

ನವದೆಹಲಿ: ಕೇಂದ್ರ ಸರ್ಕಾರವು ತೈಲದ ಮೇಲಿನ ಅಬಕಾರಿ ಸುಂಕ ಕಡಿತ ಮಾಡಿದ ಬಳಿಕ ಇಂದಿನಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ದೇಶಾದ್ಯಂತ ಇಳಿಕೆಯಾಗಿದೆ.

ಅಬಕಾರಿ ಸುಂಕವು ಪೆಟ್ರೋಲ್ ದರದ ಪ್ರತಿ ಲೀಟರ್‌ಗೆ 8 ರೂಪಾಯಿ ಮತ್ತು ಡೀಸೆಲ್ ದರದ ಪ್ರತಿ ಲೀಟರ್ ಮೇಲೆ 6 ರೂಪಾಯಿ ಕಡಿಮೆಯಾಗಲಿದೆ ಎಂದು ಕೇಂದ್ರ ನೇರ ತೆರಿಗೆ ಮತ್ತು ಸುಂಕ ಮಂಡಳಿ (CBIC) ತಿಳಿಸಿದೆ. ಇದನ್ನೂ ಓದಿ: ದೆಹಲಿಗೆ ರೊಬೋಟಿಕ್ ಅಗ್ನಿಶಾಮಕ ವಾಹನ ಎಂಟ್ರಿ – ಏನೆಲ್ಲಾ ಇದೆ ವಿಶೇಷ?

ಏಪ್ರಿಲ್ ತಿಂಗಳಲ್ಲಿ ಹಣದುಬ್ಬರ ಕಳೆದ 8 ವರ್ಷಗಳಲ್ಲಿಯೇ ಅತ್ಯಧಿಕ ಮಟ್ಟಕ್ಕೆ ಏರಿಕೆಯಾಗಿರುವ ನಡುವೆ, ಗ್ರಾಹಕರಿಗೆ ಕೊಂಚ ನಿರಾಳತೆ ನೀಡಿದಂತಾಗಿದೆ. ನಿನ್ನೆ ರಾಜಸ್ಥಾನದ ಅಶೋಕ್ ಗೆಹ್ಲೋಟ್ ಸರ್ಕಾರವು ಪೆಟ್ರೋಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಪ್ರತಿ ಲೀಟರ್‌ಗೆ 2.48 ರೂ. ಮತ್ತು ಡೀಸೆಲ್‌ಗೆ 1.16 ರಷ್ಟು ಕಡಿಮೆ ಮಾಡಿದೆ. ಇದನ್ನೂ ಓದಿ: ಬ್ರಿಗೇಡ್ ರೋಡ್‍ನಲ್ಲಿ ಕಟ್ಟಡದ ಮೇಲಿಂದ ಬಿದ್ದು ಯುವತಿ ಸಾವು

ಈ ಕುರಿತು ಟ್ವೀಟ್ ಮಾಡಿರುವ ಗೆಹ್ಲೋಟ್, ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಬೆಲೆಯನ್ನು ಕಡಿತಗೊಳಿಸಿರುವುದರಿಂದ ರಾಜ್ಯ ಸರ್ಕಾರವೂ ದರ ಇಳಿಕೆ ಮಾಡಿದೆ. ಇದರಿಂದ ರಾಜ್ಯದಲ್ಲಿ ಪ್ರತಿ ಲೀಟರ್‌ಗೆ ಪೆಟ್ರೋಲ್ 10.48 ರೂ. ಮತ್ತು ಡೀಸೆಲ್ 7.16 ರೂ.ಗಳಷ್ಟು ಕಡಿತವಾಗಲಿದೆ. ಅದರಂತೆ ದೇಶದ ಪ್ರಮುಖ ನಗರಗಳಲ್ಲಿನ ದರಗಳನ್ನು ನೋಡಬಹುದು.

PETROL

ಎಲ್ಲಿ – ಎಷ್ಟು ದರ?
* ಮುಂಬೈ: ಪೆಟ್ರೋಲ್ 113.33 ರೂ., ಡೀಸೆಲ್ 97.26 ರೂ.
* ಕೋಲ್ಕತ್ತಾ: ಪೆಟ್ರೋಲ್ 106.01 ರೂ., ಡೀಸೆಲ್ 92 ರೂ.
* ಚೆನ್ನೈ: ಪೆಟ್ರೋಲ್ 102.62 ರೂ., ಡೀಸೆಲ್ 94.22 ರೂ.
* ಬೆಂಗಳೂರು: ಪೆಟ್ರೋಲ್ 101.92 ರೂ., ಡೀಸೆಲ್ 87 ರೂ.
* ಗುರುಗ್ರಾಮ್: ಪೆಟ್ರೋಲ್ 97.17 ರೂ., ಡೀಸೆಲ್ 90 ರೂ..
* ಒಡಿಶಾ: ಪೆಟ್ರೋಲ್ 102 ರೂ., ಡೀಸೆಲ್ 94.86 ರೂ.
* ದಕ್ಷಿಣ ಕನ್ನಡ: ಪೆಟ್ರೋಲ್ 101.13 ರೂ., ಡೀಸೆಲ್ 87.13 ರೂ.

Comments

Leave a Reply

Your email address will not be published. Required fields are marked *