ಹೈದರಾಬಾದ್‍ಗೆ ಹಾರಿದ ಅರ್ವಿಯಾ ಜೋಡಿ

ಬೆಂಗಳೂರು: ಬಿಗ್‍ಬಾಸ್ ಸೀಸನ್-8ರ ಕಾರ್ಯಕ್ರಮದ ಸ್ಪರ್ಧಿಗಳಾಗಿದ್ದ ಅರವಿಂದ್ ಹಾಗೂ ದಿವ್ಯಾ ಉರುಡುಗ ಹೈದರಾಬಾದ್‍ಗೆ ಹಾರಿದ್ದಾರೆ.

aravind divya

ಅರವಿಂದ್ ಹಾಗೂ ದಿವ್ಯಾ ಉರುಡುಗ ಬಿಗ್‍ಬಾಸ್ ಸೀಸನ್-8ರ ಪ್ರಣಯ ಪಕ್ಷಿಗಳು ಎಂದೇ ಫೇಮಸ್ ಆಗಿದ್ದರು. ಬಿಗ್‍ಬಾಸ್ ಮನೆಯಲ್ಲಿ ಸದಾ ಜೊತೆ, ಜೊತೆಯಾಗಿದ್ದ ಈ ಜೋಡಿ ರಿಯಾಲಿಟಿ ಶೋ ನಂತರ ಕೂಡ ಎಲ್ಲೆಲ್ಲೂ ಜೊತೆ, ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.  ಇದನ್ನೂ ಓದಿ: ಬಿಗ್‌ಬಾಸ್ ಲವ್ ಬರ್ಡ್ಸ್ ಭೇಟಿಯಾದ ಶುಭಾ ಪೂಂಜಾ

ಇತ್ತೀಚೆಗಷ್ಟೇ ಶುಭಾ ಪೂಂಜಾ ಜೊತೆಗೆ ಕಾಣಿಸಿಕೊಂಡಿದ್ದ ಈ ಜೋಡಿ ಇದೀಗ ಫ್ಲೈಟ್‍ವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅರವಿಂದ್ ಹಾಗೂ ದಿವ್ಯಾ ಉರುಡುಗ ಒಟ್ಟಿಗೆ ಹೈದರಾಬಾದ್‍ಗೆ ಹಾರಿದ್ದಾರೆ. ಸದ್ಯ ಇವರಿಬ್ಬರು ಫ್ಲೈಟ್‍ನಲ್ಲಿ ಪ್ರಯಾಣಿಸುತ್ತಿರುವ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಿಶೇಷವೆಂದರೆ ಇವರಿಬ್ಬರೊಂದಿಗೆ ದಿಯಾ ಸಿನಿಮಾ ಖ್ಯಾತಿಯ ನಟಿ ಖುಷಿ ಅವರು ಕೂಡ ಕಾಣಿಸಿಕೊಂಡಿದ್ದಾರೆ.

 

ನಟಿ ಖುಷಿ ಅವರು ಕೂಡ ಅರವಿಂದ್ ಹಾಗೂ ದಿವ್ಯಾ ಉರುಡುಗ ಜೊತೆಗಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಫೋಟೋ ಜೊತೆಗೆ ಹೈದರಾಬಾದ್ ಕಾಲಿಂಗ್ ದಿವ್ಯಾ ಉರುಡುಗ, ಕೆ.ಪಿ ಅರವಿಂದ್ ಎಂದು ಬರೆದುಕೊಂಡಿದ್ದಾರೆ.  ಇದನ್ನೂ ಓದಿ: ಬ್ಯಾಕ್ ಬ್ಯೂಟಿಗೆ 13 ಕೋಟಿ ಇನ್ಶೂರೆನ್ಸ್ ಮಾಡಿಸಿದ Miss Bumbum 2021

ಇತ್ತೀಚೆಗಷ್ಟೇ ಬಿಗ್‍ಬಾಸ್ ಸೀಸನ್ 8ರ ಸ್ಪರ್ಧಿ ಶುಭಾ ಪೂಂಜಾ ಅವರು ಅರವಿಂದ್.ಕೆ.ಪಿ ಮತ್ತು ದಿವ್ಯಾ ಉರುಡುಗ ಅವರನ್ನು ಭೇಟಿ ಮಾಡಿ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಇನ್ನೂ ಆ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು.

Comments

Leave a Reply

Your email address will not be published. Required fields are marked *