ಪಕ್ಷ ಅಧಿಕಾರಕ್ಕೆ ಬಂದ್ರೆ ಉಚಿತ ತೀರ್ಥಯಾತ್ರೆ: ಅರವಿಂದ್ ಕೇಜ್ರಿವಾಲ್

ನವದೆಹಲಿ: ನಮ್ಮ ಪಕ್ಷವು ಅಧಿಕಾರಕ್ಕೆ ಬಂದಲ್ಲಿ ಅಯೋಧ್ಯೆಯ ರಾಮ ಮಂದಿರ, ಅಜ್ಮೀರ್ ಷರೀಫ್ ಮತ್ತು ರಾಜ್ಯದಲ್ಲಿನ ವೇಲಂಕಣಿಯಲ್ಲಿ ಕ್ರಮವಾಗಿ ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಿಗೆ ಉಚಿತ ರಾಜ್ಯ ಪ್ರಾಯೋಜಿತ ತೀರ್ಥಯಾತ್ರೆಗಳನ್ನು ಕಲ್ಪಿಸುವುದಾಗಿ ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಭರವಸೆ ನೀಡಿದ್ದಾರೆ.

ಮೂಲತಃ ದೆಹಲಿಯಲ್ಲಿ ಎಎಪಿ ಸರ್ಕಾರವು ಜಾರಿಗೆ ತಂದ ಈ ಯೋಜನೆಯನ್ನು 2022 ರ ರಾಜ್ಯವಿಧಾನಸಭಾ ಚುನಾವಣೆಯ ನಂತರ ಪಕ್ಷವು ಅಧಿಕಾರಕ್ಕೆ ಬಂದರೆ ಗೋವಾದಲ್ಲಿ ಪುನರಾವರ್ತಿಸಲಾಗುವುದು. ನಾನು ಇತ್ತೀಚೆಗೆ ಅಯೋಧ್ಯೆಗೆ ಹೋಗಿದ್ದೆ. ರಾಮಮಂದಿರಕ್ಕೆ ಹೋಗಿ ರಾಮಲಲ್ಲಾನ ದರ್ಶನವನ್ನು ಪಡೆದುಕೊಂಡೆ ತುಂಬಾ ಸಂತೋಷವಾಯಿತು. ಭಗವಾನ್ ರಾಮನ ದರ್ಶನವನ್ನು ಪಡೆಯುವ ಮೂಲಕ ನನಗೆ ಸಿಕ್ಕಿದ ತೃಪ್ತಿ ಎಂದು ನಾನು ಭಾವಿಸುತ್ತೇನೆ. ಪ್ರತಿಯೊಬ್ಬರೂ ಅನುಭವಿಸಬೇಕಾದ ಸಂಗತಿಯಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಇದನ್ನೂ ಓದಿ: ನೀಟ್ ಫಲಿತಾಂಶ ಪ್ರಕಟ- ಇ-ಮೇಲ್‍ಗೇ ರಿಸಲ್ಟ್

VOTE

ನಮ್ಮ ಸರ್ಕಾರ ರಚನೆಯಾದರೆ, ನಾವು ಅಯೋಧ್ಯೆಗೆ ಉಚಿತ ತೀರ್ಥಯಾತ್ರೆಗೆ ಅನುಕೂಲ ಮಾಡಿಕೊಡುತ್ತೇವೆ. ಶ್ರೀರಾಮನ ದರ್ಶನಕ್ಕೆ ಸಹಾಯ ಮಾಡುತ್ತೇವೆ. ಕ್ರಿಶ್ಚಿಯನ್ನರಿಗೆ ವೆಲಂಕಣಿಗೆ ಉಚಿತ ತೀರ್ಥಯಾತ್ರೆ, ಮುಸ್ಲಿಮರಿಗೆ ಅಜ್ಮೀರ್ ಷರೀಫ್‍ಗೆ ತೀರ್ಥಯಾತ್ರೆ, ಗೋವಾದಲ್ಲಿ ಶಿರಡಿಯನ್ನು ಬಹುವಾಗಿ ನಂಬುವುದರಿಂದ, ನಾವು ಅವರಿಗೆ ಶಿರಡಿ ತೀರ್ಥಯಾತ್ರೆಗೆ ಅವಕಾಶವನ್ನು ನೀಡುತ್ತೇವೆ ಎಂದು ಕೇಜ್ರಿವಾಲ್ ಹೇಳಿದರು, ಕೆಲವು ವರ್ಷಗಳ ಹಿಂದೆ ದೆಹಲಿ ಸರ್ಕಾರವು ಪರಿಚಯಿಸಿದ ನಂತರ 35,000 ಜನರು ಈ ಯೋಜನೆಯಿಂದ ಪ್ರಯೋಜನ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಪಾಕ್ ಪರ ಘೋಷಣೆ- ದೇಶದ್ರೋಹ ಪ್ರಕರಣ ದಾಖಲಿಸಿ ಯುವಕನ ಬಂಧನ

Comments

Leave a Reply

Your email address will not be published. Required fields are marked *