ಮಾಲಿನ್ಯ ನಿಯಂತ್ರಣಕ್ಕೆ ಮೂರು ಸೂತ್ರ ಪಾಲಿಸಲು ಕೇಜ್ರಿವಾಲ್ ಮನವಿ

ನವದೆಹಲಿ: ದಸರಾ, ದೀಪಾವಳಿ ಹಬ್ಬಗಳು ಸನ್ನಿಹಿತವಾಗುತ್ತಿದ್ದಂತೆ ದೆಹಲಿ ಸರ್ಕಾರ ಮಾಲಿನ್ಯದ ಬಗ್ಗೆ ಎಚ್ಚೆತ್ತುಕೊಂಡಿದೆ. ಸಿಎಂ ಅರವಿಂದ್ ಕೇಜ್ರಿವಾಲ್ ಮೂರು ಸೂತ್ರಗಳನ್ನು ಪಾಲಿಸುವಂತೆ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸದ್ಯ ಮಾಲಿನ್ಯ ನಿಯಂತ್ರಣದಲ್ಲಿದ್ದರು ಕಳೆದೊಂದು ತಿಂಗಳಿನಿಂದ ಮಾಲಿನ್ಯದ ಪ್ರಮಾಣ ನಿಯಮಿತವಾಗಿ ಹೆಚ್ಚುತ್ತಿದೆ. ಮಾಲಿನ್ಯ ನಿಯಂತ್ರಣ ಮಾಡುವುದು ಎಲ್ಲರ ಜವಾಬ್ದಾರಿಯಾಗಿದ್ದು, ಈ ಹಿನ್ನಲೆ ಮೂರು ಸೂತ್ರಗಳನ್ನು ಪಾಲಿಸಬೇಕು ಎಂದು ಕರೆ ಕೊಟ್ಟಿದ್ದಾರೆ. ಇದನ್ನೂ ಓದಿ: ಮಕ್ಕಳಿಗೆ ಲಸಿಕೆ ಭಾಗ್ಯ- 2 ರಿಂದ 18 ವರ್ಷದವರಿಗೆ ಕೋವ್ಯಾಕ್ಸಿನ್ ನೀಡಲು ಅನುಮತಿ

ಅಕ್ಟೋಬರ್ 18 ರಿಂದ ರೆಡ್ ಲೈಟ್ ಆನ್, ಇಂಜಿನ್ ಆಫ್ ಎನ್ನುವ ಅಭಿಯಾನ ಆರಂಭಿಸಲಿದ್ದು, ಸಿಗ್ನಲ್‍ಗಳಲ್ಲಿ ವಾಹನಗಳನ್ನು ಆಫ್ ಮಾಡುವಂತೆ ಅವರು ಮನವಿ ಮಾಡಿದ್ದಾರೆ. ಈ ಪ್ರಕ್ರಿಯೆಯಿಂದ 13-20% ಮಾಲಿನ್ಯದ ಪ್ರಮಾಣದ ತಗ್ಗಿಸಬಹುದು ಮತ್ತು ಸುಮಾರು 250 ಕೋಟಿ ಮೌಲ್ಯದ ಇಂಧನವನ್ನು ಉಳಿಸಬಹುದು. ವಾರದಲ್ಲಿ ಒಂದು ದಿನ ಸ್ವಯಂ ವಾಹನ ಬಿಟ್ಟು ಸಾರ್ವಜನಿಕ ಸಾರಿಗೆ ಅಥಾವ ಕ್ಯಾಬ್‍ಗಳನ್ನು ಹಂಚಿಕೊಂಡು ಓಡಾಡುವಂತೆ ಕೇಜ್ರೀವಾಲ್ ತಮ್ಮ ಎರಡನೇ ಸೂತ್ರದಲ್ಲಿ ಹೇಳಿದ್ದಾರೆ. ಇನ್ನು ಮೂರನೇ ಸೂತ್ರವಾಗಿ ಕಸ ಸುಡುವ ಕೆಲಸಗಳನ್ನು ಮಾಡದಂತೆ ಅವರು ಮನವಿ ಮಾಡಿದ್ದು, ಈ ಕ್ರಮಗಳು ಮಾಲಿನ್ಯ ಪ್ರಮಾಣ ತಗ್ಗಿಸಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಗನ ಆರೋಗ್ಯ ವಿಚಾರಿಸುತ್ತಾ ರಾತ್ರಿಯಿಡೀ ನಿದ್ದೆಗೆಟ್ಟ ಶಾರೂಖ್ ದಂಪತಿ!

ಪ್ರತಿವರ್ಷ ಚಳಿಗಾಲದಲ್ಲಿ ದೆಹಲಿ ಗ್ಯಾಸ್ ಚೇಂಬರ್ ಆಗಿ ಬದಲಾಗುತ್ತದೆ. ಈ ಹಿನ್ನಲೆ ಈಗಾಗಲೇ ಪಟಾಕಿ ಮಾರಾಟ ಮತ್ತು ಬಳಕೆ ಎರಡು ನಿಷೇಧ ಮಾಡಿದ್ದು, ಮಾಲಿನ್ಯಕ್ಕೆ ಕಾರಣವಾಗುವ ಇತರೆ ಅಂಶಗಳನ್ನು ನಿಯಂತ್ರಿಸುವ ಪ್ರಯತ್ನಕ್ಕೆ ಕೇಜ್ರಿವಾಲ್ ಕೈ ಹಾಕಿದ್ದಾರೆ.

Comments

Leave a Reply

Your email address will not be published. Required fields are marked *