ಜೆಡಿಎಸ್ ಮುಳುಗುತ್ತಿದೆ, ಬಿಜೆಪಿ ಬೆಳೆಯುತ್ತಿದೆ : ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್

– ನಮಗೆ ಯಾರ ಜೊತೆಯೂ ಮೈತ್ರಿ ಅವಶ್ಯಕತೆ ಇಲ್ಲ

ಮೈಸೂರು: ರಾಜ್ಯದಲ್ಲಿ ಜೆಡಿಎಸ್ ಮುಳುಗುತ್ತಿದ್ದು, ಬಿಜೆಪಿ ಬೆಳೆಯುತ್ತಿದೆ. ನಮಗೆ ಯಾರ ಮೈತ್ರಿ ಅವಶ್ಯಕತೆ ಇಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.

ಜೆಡಿಎಸ್ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳಲ್ಲ. ಅಧಿಕೃತವಾಗಿ, ಅನಧಿಕೃತವಾಗಿ ಯಾವುದೇ ಪಕ್ಷದೊಂದಿಗೆ ಬಿಜೆಪಿ ಹೊಂದಾಣಿಕೆ ಇಲ್ಲ. ಜೆಡಿಎಸ್ ಮುಳುಗುತ್ತಿದೆ ಬಿಜೆಪಿ ಬೆಳೆಯುತ್ತಿದೆ. ಹೀಗಾಗಿ ಯಾರ ಜೊತೆಯೂ ಮೈತ್ರಿ ಅವಶ್ಯಕತೆ ಇಲ್ಲ. ಮುಂದೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿಯಲು ಸಂಕಲ್ಪ ಮಾಡಿದ್ದೇವೆ. ಜೆಡಿಎಸ್, ಕಾಂಗ್ರೆಸ್ ಎರಡೂ ಸರ್ಕಾರಗಳನ್ನ ಜನ ನೋಡಿದ್ದಾರೆ. ನಮ್ಮ ಸರ್ಕಾರ ಜನಪರವಾಗಿದೆ. ಬೊಮ್ಮಾಯಿ ಸರ್ಕಾರ ಜನರ ಪರವಾಗಿ ಕೆಲಸ ಮಾಡುತ್ತಿದೆ ಎಂದರು.

ಬಿ.ಎಸ್.ಯಡಿಯೂರಪ್ಪ ಒಬ್ಬ ದೊಡ್ಡ ನಾಯಕ. ಅವರಿಗೆ ಸಂಘಟನೆ ಬಗ್ಗೆ ಅನುಭವ ಇದೆ. ಅವರ ಅನುಭವವನ್ನ ಪಕ್ಷ ಸಂಘಟನೆಗೆ ಬಳಸಿಕೊಳ್ಳುತ್ತೇವೆ ಎಂದ ಅವರು, ಹಳೇ ಮೈಸೂರು ಭಾಗದಲ್ಲಿ ದಿನದಿನಕ್ಕೂ ಸಂಘಟನೆ ಹೆಚ್ಚಾಗುತ್ತಿದೆ. ಈ ಭಾಗದಲ್ಲೂ ಅತಿ ಹೆಚ್ಚು ಸ್ಥಾನಗಳನ್ನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಾಲಕೃಷ್ಣನಾಗಿ ದರ್ಶನ ಕೊಟ್ಟ ಉಡುಪಿ ಕೃಷ್ಣ

ಸೋಮವಾರ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ್ದ ಅರುಣ್ ಸಿಂಗ್, 2023ರ ಚುನಾವಣೆಯಲ್ಲಿ ರಾಜ್ಯದಲ್ಲಿ ಸ್ಪಷ್ಟ ಬಹುಮತ ಪಡೆಯುವುದೇ ರಾಜ್ಯದ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತನ ಗುರಿಯಾಗಿದೆ. ಮೊದಲಿಗೆ ಮೈಸೂರು ಭಾಗದಲ್ಲಿ ಮೈಸೂರು, ಮಂಡ್ಯ, ಹಾಸನ ಭಾಗದಲ್ಲಿ ಪ್ರವಾಸ ಮಾಡಲಿದ್ದೇನೆ. ಪಕ್ಷ ಬಲವರ್ಧನೆಗಾಗಿ ಪ್ರವಾಸ ಕೈಗೊಳ್ಳುತ್ತಿದ್ದೇನೆ. ಮುಂದಿನ 2023ರ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯುವುದೇ ನಮ್ಮ ಗುರಿ. ಉಳಿದ ಸಚಿವ ಸ್ಥಾನಗಳ ಹಂಚಿಕೆ ಸಿಎಂಗೆ ಬಿಟ್ಟ ನಿರ್ಧಾರವಾಗಿದೆ. ಹೈಕಮಾಂಡ್ ಜೊತೆ ಚರ್ಚೆ ಮಾಡಿ ಸಲಹೆ ಸೂಚನೆಗಳನ್ನು ಪಡೆದು ಸಚಿವ ಸ್ಥಾನ ಹಂಚಿಕೆ ಮಾಡಲಿದ್ದಾರೆ ಎಂದು ಹೇಳಿದ್ದರು. ಇದನ್ನೂ ಓದಿ: ಕಾಂಗ್ರೆಸ್‍ಗೆ ಅಧಿಕಾರಕ್ಕೆ ಬರುವ ಹಗಲುಗನಸು ಕಾಣುವ ನೈತಕತೆ ಇಲ್ಲ: ಸಿ.ಟಿ.ರವಿ

Comments

Leave a Reply

Your email address will not be published. Required fields are marked *