– ರಾಹುಲ್ ಗಾಂಧಿಗೆ ಸ್ಪಷ್ಟ ನಿಲುವಿಲ್ಲ
ಹಾಸನ: ಕುಮಾರಸ್ವಾಮಿ ಗೌರವ ಕೊಡುವುದನ್ನು ಅವರ ತಂದೆಯಿಂದ ನೋಡಿ ಕಲಿತುಕೊಳ್ಳಲಿ. ರಾಜಕೀಯದಲ್ಲಿ ಮರ್ಯಾದೆ ಇರಬೇಕಾದರೆ, ಮರ್ಯಾದೆಯುತವಾಗಿ ಮಾತನಾಡಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಆಕ್ರೋಶ ಹೊರಹಾಕಿದ್ದಾರೆ.

ಅರುಣ್ ಸಿಂಗ್ ರಾಜ್ಯಕ್ಕೆ ಬಂದಿದ್ದು ದುಡ್ಡು ಕಲೆಕ್ಷನ್ಗಾಗಿ ಎಂಬ ಕುಮಾರಸ್ವಾಮಿ ಹೇಳಿಕೆಗೆ ಹಾಸನದ ಚನ್ನರಾಯಪಟ್ಟಣದಲ್ಲಿ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಗೌರವ ಕೊಡುವುದನ್ನು ಅವರ ತಂದೆಯಿಂದ ನೋಡಿ ಕಲಿತುಕೊಳ್ಳಲಿ. ಕುಮಾರಸ್ವಾಮಿ ಬಗ್ಗೆ ಒಪಿನಿಯನ್ ಏನೂ ಇಲ್ಲ. ಅವರ ತಂದೆ ಎಷ್ಟು ಗೌರವಯುತವಾಗಿ ನಡೆದುಕೊಳ್ಳುತ್ತಾರೆ. ಲೂಸ್ಟಾಕ್ ಮಾತನಾಡುವುದು ಬೇಕಾಗಿಲ್ಲ. ಸಾರ್ವಜನಿಕರು ಲೂಸ್ ಟಾಕ್ ಮಾತನಾಡುವುದನ್ನು ಇಷ್ಟಪಡುವುದಿಲ್ಲ. ನಾನೂ ಎರಡು ದಿನದಿಂದ ರಾಜ್ಯ ಸುತ್ತುತ್ತಿದ್ದೇನೆ. ಜೆಡಿಎಸ್ ಶಕ್ತಿ ಏನೆಂಬುದು ನನಗೂ ಗೊತ್ತಿದೆ. ನಾನು ಒಬ್ಬ ಸಂಘಟನಾ ವ್ಯಕ್ತಿ. ನನಗೆ ಎಲ್ಲ ಪಕ್ಷಗಳ ಶಕ್ತಿ ಗೊತ್ತಿದೆ. ಅವರಿಗೆ ಏನು ಹೇಳಲು ಅಧಿಕಾರ ಇದೆ, ಅದನ್ನು ನಾನು ಡಿಸ್ಟರ್ಬ್ ಮಾಡಲು ಇಷ್ಟಪಡಲ್ಲ. ಅವರು ಏನು ಮಾತನಾಡ್ತಾರೆ ಜನತೆ ನೋಡುತ್ತಾರೆ. ಮರ್ಯಾದೆಯುತವಾಗಿ ನಡೆದುಕೊಳ್ಳುವುದು ಮುಖ್ಯ ಎಂದು ಎಚ್ಡಿಕೆ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಅವರು ಹೃದಯವಂತರು, ಹೃದಯವಂತಿಕೆ ಇರೋರು ಒಳ್ಳೆಯ ಹಾರೈಕೆ ಮಾಡಿದ್ರೆ ಸಂತೋಷ: ಎಚ್ಡಿಕೆಗೆ ಸುಮಲತಾ ಟಾಂಗ್

ರಾಹುಲ್ ಗಾಂಧಿ ಮಾತನಾಡಿದರೆ ಕಾಂಗ್ರೆಸ್ಗೆ ವೋಟ್ ಕಡಿಮೆಯಾಗುತ್ತೆ
ಕೇಂದ್ರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಫೇಲ್ ಲೀಡರ್. ರಾಹುಲ್ ಗಾಂಧಿಗೆ ಸ್ಪಷ್ಟ ನಿಲುವಿಲ್ಲ, ನಿಯತ್ತು ಇಲ್ಲ. ಯಾವಾಗ ರಾಹುಲ್ ಗಾಂಧಿ ಮಾತನಾಡುತ್ತಾರೆ ಆಗ ಕಾಂಗ್ರೆಸ್ ಪಕ್ಷಕ್ಕೆ ವೋಟ್ ಕಮ್ಮಿ ಆಗುತ್ತೆ. ಯಾವಾಗ ಮೋದಿ ಮಾತನಾಡುತ್ತಾರೆ ಆಗ ಬಿಜೆಪಿಗೆ ಮತ ಜಾಸ್ತಿಯಾಗುತ್ತೆ. ಇದೇ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಇರುವ ವ್ಯತ್ಯಾಸ. ಕೇಂದ್ರದಲ್ಲೇ ನೇತೃತ್ವ ಇಲ್ಲ ಅಂದ್ರೆ ರಾಜ್ಯದಲ್ಲಿ ಬಲ ಆಗಲು ಸಾಧ್ಯವಿಲ್ಲ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರದ ಬಗ್ಗೆ ಟೀಕಿಸುವುದರ ವಿರುದ್ಧ ಅರುಣ್ ಸಿಂಗ್ ವ್ಯಂಗ್ಯವಾಡಿದರು.

ಪಕ್ಷದ ಅತಿ ದೊಡ್ಡ ನಾಯಕ ಯಡಿಯೂರಪ್ಪ
ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಹಾಡಿ ಹೊಗಳಿದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಯಡಿಯೂರಪ್ಪ ಅವರು ಕರ್ನಾಟಕದಲ್ಲಿ ಸಾಕಷ್ಟು ಬಾರಿ ಓಡಾಡಿದ್ದಾರೆ. ಕರ್ನಾಟಕದ ಮೂಲೆ, ಮೂಲೆಯ ಕಾರ್ಯಕರ್ತರು ಅವರಿಗೆ ಗೊತ್ತಿದ್ದಾರೆ. ಬಿಜೆಪಿ ಪಕ್ಷದ ಅತಿ ದೊಡ್ಡ ನಾಯಕ ಯಡಿಯೂರಪ್ಪ. ಅವರ ಅನುಭವವನ್ನು ಪಕ್ಷ ಉಪಯೋಗಿಸಿಕೊಳ್ಳುತ್ತಲೇ ಇರುತ್ತದೆ. ಯಡಿಯೂರಪ್ಪ ಪ್ರವಾಸವನ್ನು ಪಕ್ಷ ನಿರ್ಣಯಿಸುತ್ತದೆ. ಅವರು ನಮ್ಮ ನಾಯಕರಾಗಿದ್ದು, ನಾಲ್ಕು ಬಾರಿ ಸಿಎಂ ಆಗಿದ್ದಾರೆ. ಪಕ್ಷವನ್ನು ಇಷ್ಟು ಎತ್ತರಕ್ಕೆ ಬೆಳೆಸುವಲ್ಲಿ ಅವರ ಕೊಡುಗೆ ಅಪಾರವಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಿರಿಯರನ್ನು ಕಸದ ಬುಟ್ಟಿಗೆ ಹಾಕುವುದು ಬಿಜೆಪಿ ಸಂಸ್ಕೃತಿ- ಸಲೀಂ ಅಹ್ಮದ್

Leave a Reply