ರೈತನ ಬಾಗಿಲಿಗೆ ಕೋಲ್ಕತಾ ಕೋರ್ಟಿನಿಂದ ಅರೆಸ್ಟ್ ವಾರೆಂಟ್

ಬೆಳಗಾವಿ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಎಚ್ಚರಿಕೆಯನ್ನು ನೀಡಿದ್ದರೂ ಅವರು ಮಾತನ್ನು ತಿರಸ್ಕರಿಸಿ ಕೋಲ್ಕತ್ತಾದ ಕೋರ್ಟ್ ರೈತರ ಮನೆ ಬಾಗಿಲಿಗೆ ಅರೆಸ್ಟ್ ವಾರೆಂಟ್ ಕಳುಹಿಸಿದೆ.

ಬೆಳಗಾವಿಯ ಬೈಲಹೊಂಗಲ ನಗರದ ಅಕ್ಸಿಸ್ ಬ್ಯಾಂಕ್‍ನಲ್ಲಿ ಸಾಲ ಪಡೆದ 180 ಕ್ಕೂ ಹೆಚ್ಚು ರೈತರ ವಿರುದ್ಧ ಅರೆಸ್ಟ್ ವಾರೆಂಟ್ ಬಂದಿದೆ. ರೈತರಿಗೆ ಯಾವುದೇ ನೋಟಿಸ್, ಅರೆಸ್ಟ್ ವಾರೆಂಟ್ ಕಳಿಸೋದಿಲ್ಲ ಎಂದು ಮೊಸಳೆ ಕಣ್ಣಿರು ಹಾಕಿದ್ದ ಅಕ್ಸಿಸ್ ಬ್ಯಾಂಕ್ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ವಚನ ನೀಡಿದ್ದು ಇದೀಗ ಮತ್ತೆ ಉಡಾಫೆ ವರ್ತನೆಯನ್ನು ತೋರಿದೆ.

ಕಳೆದ ತಿಂಗಳ ಕೋರ್ಟ್ ಕೇಸಿಗೆ ಹಾಜರಿರದ ಸವದತ್ತಿ ತಾಲೂಕಿನ ಏಣಗಿ ಗ್ರಾಮದ ರೈತರಿಗೆ ಸವದತ್ತಿ ಠಾಣೆಯಿಂದ ಅರೆಸ್ಟ್ ವಾರೆಂಟ್ ಬಂದಿತ್ತು. ಗ್ರಾಮದಲ್ಲಿ ರೈತರಿಗಾಗಿ ಹುಡುಕಾಟ ನಡೆಯುತ್ತಿದ್ದು, ಸರ್ಕಾರದ ಆದೇಶಕ್ಕೆ ಅಕ್ಸಿಸ್ ಬ್ಯಾಂಕ್ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಪೊಲೀಸ್ ಜಿಲ್ಲಾ ವರಷ್ಠಾಧಿಕಾರಿಗಳು ನೀಡಿದ ಎಚ್ಚರಿಕೆಯನ್ನು ಮರೆತು ಅವರ ಕಚೇರಿಯಿಂದ ಅ.9 ಕ್ಕೆ ಅರೆಸ್ಟ್ ವಾರೆಂಟ್ ಹೊರಬಂದಿದೆ. ಸದ್ಯಕ್ಕೆ ಅನ್ನದಾತರಲ್ಲಿ ಬಂಧನದ ಭೀತಿ ಉಂಟಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *