ಹಾಸನ: ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿಪಡಿಸಿದ ಆರೋಪದಡಿ ಸಕಲೇಶಪುರದ ಪುರಸಭೆ ಮಾಜಿ ಅಧ್ಯಕ್ಷನನ್ನು ಬಂಧಿಸಲಾಗಿದ್ದು, ಬಳಿಕ ಅವರನ್ನು ಬಿಡುಗಡೆ ಮಾಡಿರುವ ಘಟನೆ ಪಟ್ಟಣದ ಭುವನೇಶ್ವರಿ ರಸ್ತೆಯಲ್ಲಿ ನಡೆದಿದೆ.
ಸಯ್ಯದ್ ಮುಫಿಜ್ ಬಂಧಿಸಲ್ಪಟ್ಟಿದ್ದ ಪುರಸಭೆ ಮಾಜಿ ಅಧ್ಯಕ್ಷ. ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಜಗಳ ನಡೆದಿತ್ತು. 9ನೇ ವಾರ್ಡಿನಿಂದ ಮುಫಿಜ್ ಪತ್ನಿ ಹಾಗೂ ಅದೇ ವಾರ್ಡ್ ನ ದಸ್ತಗಿರಿ ಎಂಬವರ ಪತ್ನಿ ಪುರಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಗೆಲುವು-ಸೋಲಿನ ಲೆಕ್ಕಾಚಾರದ ವೇಳೆ ಇಬ್ಬರ ನಡುವೆ ಆರೋಪ-ಪ್ರತ್ಯಾರೋಪ ಜರುಗಿ ಅದು ವಿಕೋಪಕ್ಕೆ ತಿರುಗಿದೆ. ಹೀಗಾಗಿ ಭಾನುವಾರ ಸಂಜೆ ಪೊಲೀಸರು ನಡುಬೀದಿಯಲ್ಲಿ ಸಯ್ಯದ್ ಮುಫೀಜ್ ಅವರನ್ನು ಹಿಡಿದು ಠಾಣೆಗೆ ಎಳೆದೊಯ್ದಿದ್ದರು.
ಘಟನೆ ಸಂಬಂಧ 20 ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು, ಬಳಿಕ ಠಾಣಾ ಜಾಮೀನು ಮೇಲೆ ಬಿಡುಗಡೆ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply