ಹಿರಿಯ ನಟಿ ಲೀಲಾವತಿ ಮನೆಗೆ ಭೇಟಿ ನೀಡಿದ ಅರ್ಜುನ್ ಸರ್ಜಾ

ನ್ನಡ ಸಿನಿಮಾ ರಂಗದ ಹಿರಿಯ ನಟಿ ಲೀಲಾವತಿ (Leelavati) ಅವರ ಮನೆಗೆ ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸಿದ್ದಾರೆ ಖ್ಯಾತ ನಟ ಅರ್ಜುನ್ ಸರ್ಜಾ (Arjun Sarja). ನೆಲಮಂಗಲದ ಬಳಿ ಇರುವ ಸೋಲದೇವನಹಳ್ಳಿ ತೋಟದ ಮನೆಗೆ ಬಂದಿದ್ದ ಅರ್ಜುನ್ ಸರ್ಜಾ, ಕೆಲವು ಹೊತ್ತು ಲೀಲಾವತಿ ಅವರ ಮನೆಯಲ್ಲಿ ಇದ್ದು, ಆರೋಗ್ಯ ವಿಚಾರಿಸಿದ್ದಾರೆ.

ವಯಸ್ಸಿನ ಕಾರಣದಿಂದಾಗಿ ಲೀಲಾವತಿ ಅವರು ಹಾಸಿಗೆ ಹಿಡಿದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅನೇಕ ಕಲಾವಿದರು ಮತ್ತು ತಂತ್ರಜ್ಞರು ಸೋಲದೇವನಹಳ್ಳಿಗೆ ತೆರೆಳ ಆರೋಗ್ಯ ವಿಚಾರಿಸುತ್ತಿದ್ದಾರೆ. ಇದೀಗ ಅರ್ಜುನ್ ಸರ್ಜಾ ಕೂಡ  ಅದೇ ಕೆಲಸ ಮಾಡಿದ್ದಾರೆ. 87 ವರ್ಷದ ಹಿರಿಯ ನಟಿ ಲೀಲಾವತಿಯವರು ಆರೋಗ್ಯ ಸಮಸ್ಯೆಯಿಂದಾ ವಿಶ್ರಾಂತಿ ಪಡೆಯುತ್ತಿದ್ದಾರೆ.

 

ತಾಯಿಯ ಆರೋಗ್ಯ ವಿಚಾರಿಸುವಾಗ ಲೀಲಾವತಿ ಪುತ್ರ ವಿನೋದ್ ರಾಜ್(Vinod Raj)ಕಣ್ಣೀರಿಟ್ಟಿದ್ದಾರೆ. ಆನಂತರ ಲೀಲಾವತಿಯವರು ಬೇಗ ಆರೋಗ್ಯ ಸುಧಾರಿಸಲು ಭಗವಂತ ಹನುಮಂತನಲ್ಲಿ ಪ್ರಾರ್ಥಿಸುವುದಾಗಿ ನಟ ಅರ್ಜುನ್ ಸರ್ಜಾ ತಿಳಿಸಿದ್ದಾರೆ. ದೊಡ್ಡ ಹನುಮಂತನ ದೇವಾಲಯ ಕಟ್ಟಿಸಿದ್ದು ಅಲ್ಲಿ ಪ್ರಾರ್ಥನೆ ಸಲ್ಲಿಸುವುದಾಗಿ ಹೇಳಿದರು ಅರ್ಜುನ್ ಸರ್ಜಾ.