ಅರ್ಜುನ್ ಸರ್ಜಾರನ್ನು ಚಕ್ರವ್ಯೂಹದಿಂದ ಬಿಡಿಸಲು ಅಖಾಡಕ್ಕಿಳಿದ ತಾಯಿ..!

ಬೆಂಗಳೂರು: ನಟಿ ಶೃತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ಮೀಟೂ ವಿವಾದಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ.

ಅರ್ಜುನ್ ಸರ್ಜಾರನ್ನು ಮೀಟೂ ಚಕ್ರವ್ಯೂಹದಿಂದ ಬಿಡಿಸಲು ಅವರ ತಾಯಿ ಅಖಾಡಕ್ಕಿಳಿದ್ದಾರೆ. ಬುಧವಾರವಷ್ಟೇ ಮಹಿಳಾ ಆಯೋಗದ ಮುಂದೆ ಸರ್ಜಾ ವಿರುದ್ಧ ಹೇಳಿಕೆ ಕೊಟ್ಟಿದ್ದ ಶೃತಿ ಹರಿಹರನ್‍ಗೆ ಕೌಂಟರ್ ಕೊಡೋದಕ್ಕೆ ಸರ್ಜಾ ತಾಯಿ ಸಜ್ಜಾಗಿದ್ದಾರೆ.

ಸೋಮವಾರ ಖುದ್ದು ಮಹಿಳಾ ಆಯೋಗದಲ್ಲಿ ಶೃತಿ ಹರಿಹರನ್ ವಿರುದ್ಧವೇ ಸರ್ಜಾ ತಾಯಿ ದೂರು ದಾಖಲಿಸಲಿದ್ದಾರೆ. ನನ್ನ ಮಗನ ವಿರುದ್ಧ ಶೃತಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಯಾವುದೇ ಆಧಾರವಿಲ್ಲದೇ ವೈಯಕ್ತಿಕ ತೇಜೋವಧೆ ಮಾಡುತ್ತಿದ್ದಾರೆ ಅಂತಾ ಸರ್ಜಾ ತಾಯಿ ದೂರು ನೀಡಲಿದ್ದಾರೆ ಅನ್ನುವ ಮಾಹಿತಿ ಸರ್ಜಾ ಕುಟುಂಬದ ಮೂಲದಿಂದ ಪಬ್ಲಿಕ್ ಟಿವಿಗೆ ಮಾಹಿತಿ ಬಂದಿದೆ.

ಸದ್ಯ ಆಯೋಗದಲ್ಲಿ ದೂರು ದಾಖಲಾದ ಬಳಿಕ ಮತ್ತೆ ಶೃತಿ ಹರಿಹರನ್ ವಿಚಾರಣೆಯನ್ನು ಆಯೋಗ ನಡೆಸಲಿದೆ.


ನಾನು ಸಕ್ಕರೆ, ಮಾಧ್ಯಮಗಳು ಇರುವೆಯಿದ್ದಂತೆ:
ಇಂದು ನಟಿ ಶೃತಿ ಹರಿಹರನ್ ಮಹಿಳಾ ಆಯೋಗದ ಕಚೇರಿಗೆ ಆಗಮಿಸಿ ಮೀಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು. ಕಚೇರಿಗೆ ಆಗಮಿಸಿದ ಶೃತಿ ಹರಿಹರನ್, ನಾನು ಸಕ್ಕರೆ ಇದ್ದಂತೆ. ಮಾಧ್ಯಮಗಳು ಇರುವೆ ಅಂತಾ ಹೇಳಿದ್ದರು. ಮಹಿಳಾ ಆಯೋಗದಿಂದ ಹೊರ ಬಂದಾಗ ಈ ಕುರಿತು ಪ್ರಶ್ನಿಸಿದಾಗ, ನಾನು ಆ ರೀತಿ ಹೇಳಿಯೇ ಇಲ್ಲ ಎಂದು ಮಾತು ಬದಲಿಸಿದ್ದರು.

ನನ್ನ ಜೀವನದಲ್ಲಿ ಮಾಧ್ಯಮಗಳನ್ನು ತುಂಬಾ ಗೌರವಿಸುತ್ತೇನೆ. ನಾನು ಆ ರೀತಿ ಹೇಳಿಲ್ಲ ಅಂತಾ ಹೇಳಿದಾಗ ಪಬ್ಲಿಕ್ ಟಿವಿ ಪ್ರತಿನಿಧಿ, ನೀವು ಮಾತನಾಡಿರುವ ಆಡಿಯೋ ಮತ್ತು ವಿಡಿಯೋ ಇದೆ. ಬೇಕಾದರೆ ಒಂದು ಸಾರಿ ಕೇಳಿ ಎಂದು ಪ್ರಶ್ನೆ ಮಾಡಿದ್ದರು. ಇದರಿಂದ ಒಂದು ಕ್ಷಣ ಗೊಂದಲಕ್ಕೊಳಗಾದ ಶೃತಿ ನಗುವೊಂದನ್ನು ಬೀರಿ ಕಾರ್ ಹತ್ತಿ ಹೊರಟು ಹೋಗಿದ್ದರು.

ನಟ ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಮಾಧ್ಯಮಗಳ ಮುಂದೆಯೇ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಸಂಬಂಧ ಮಹಿಳಾ ಅಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಪ್ರಕರಣ ದಾಖಲಿಸಿಕೊಂಡ ಮಹಿಳಾ ಅಯೋಗ ಶೃತಿಗೆ ತಮ್ಮ ಹೇಳಿಕೆಯನ್ನು ದಾಖಲಿಸುವಂತೆ ಸೂಚಿಸಿತ್ತು. ಅದ್ಯಾಕೋ ಶೃತಿ ಮಾತ್ರ ಕಳೆದ ಕೆಲ ದಿನಗಳಿಂದ ಫುಲ್ ಸೈಲೆಂಟ್ ಆಗಿದ್ದರು. ಈ ಹಿನ್ನೆಲೆಯಲ್ಲಿ ಇಂದು ವಕೀಲ ಅನಂತ್ ನಾಯ್ಕ್ ಅವರ ಜೊತೆ ಮಹಿಳಾ ಆಯೋಗದ ಮುಂದೆ ಹಾಜರಾದ ಶೃತಿ, ವಿಸ್ಮಯ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡಿದ್ದಾರೆ. ಶೃತಿಯನ್ನು ಪ್ರತ್ಯೇಕ ಕೊಠಡಿಗೆ ಕರೆದುಕೊಂಡ ಹೋದ ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮಿ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಂಡಿದ್ದು, ಈ ವಿಚಾರಣೆ ನಡೆಯಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Comments

Leave a Reply

Your email address will not be published. Required fields are marked *