ಜಮೀನಿನಲ್ಲಿ ರಸ್ತೆ ಬಿಡುವ ವಿಚಾರಕ್ಕೆ ಗಲಾಟೆ – ಮೂವರಿಗೆ ಚಾಕು ಇರಿತ

ಮೈಸೂರು: ಜಮೀನಿನಲ್ಲಿ ಹಾದು ಹೋಗುವ ರಸ್ತೆ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಮೂವರಿಗೆ ಚಾಕು ಇರಿದು ರಾಡ್‍ನಿಂದ ಹಲ್ಲೆ ನಡೆಸಿದ ಘಟನೆ ಹೆಚ್‍ಡಿ ಕೋಟೆ (HD Kote) ತಾಲೂಕಿನ ಕಟ್ಟೆಮನುಗನ ಹಳ್ಳಿಯಲ್ಲಿ ನಡೆದಿದೆ.

ಜಮೀನು ಮಾಲೀಕರಾದ ಬಸವರಾಜು ಹಾಗೂ ಪ್ರದೀಪ್ ಎಂಬವರಿಗೆ ಗಂಭೀರ ಗಾಯಗಳಾಗಿವೆ. ನ್ಯಾಯಾಲಯದಲ್ಲಿ ಜಮೀನಿನ ವಿಚಾರವಾಗಿ ಪ್ರಕರಣವಿದ್ದರೂ ಜಮೀನಿಗೆ ನುಗ್ಗಿ ಗ್ರಾಮದ ಸಣ್ಣಕುಮಾರ, ಬುದ್ದ, ಸೋಮೇಶ್, ಸಂಜು, ರವಿ, ಕುಮಾರ್, ಮುನಿಯಮ್ಮ, ದೊಡ್ಡಸಿದ್ದು, ರಾಜಶೇಖರ್ ಹಾಗೂ ಕವಿತಾ ಎಂಬವರು ಗಲಾಟೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದವರು ಆರೋಪಿಸಿದ್ದಾರೆ.

ಈ ಸಂಬಂಧ ಹೆಚ್‍ಡಿ ಕೋಟೆ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.