ನಿನಗಿನ್ನು ಬೋರ್ ಆಗಿಲ್ವಾ? ಪೂಜಾರ ಬ್ಯಾಟಿಂಗ್‍ ಕಂಡು ಲಯನ್ ಪ್ರಶ್ನಿಸಿದ್ದು ಹೀಗೆ!

ಸಿಡ್ನಿ: ಟೀಂ ಇಂಡಿಯಾ ಅನುಭವಿ ಆಟಗಾರ ಚೇತೇಶ್ವರ ಪೂಜಾರ ಮಹತ್ವ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದು, ಆದರೆ ಪೂಜಾರನ್ನು ಔಟ್ ಮಾಡಲು ಆಸೀಸ್ ಬೌಲರ್ ಗಳು ಪರದಾಟ ನಡೆಸಿದ್ದಾರೆ. ಈ ನಡುವೆ ಆಸೀಸ್ ಬೌಲರ್ ನಾಥನ್ ಲಯನ್ ಕೂಡ ನೇರ ಪೂಜಾರ ಬಳಿ ತೆರಳಿ ನಿನಗೆ ಇನ್ನು ಬೋರ್ ಆಗಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.

ಸಿಡ್ನಿ ಟೆಸ್ಟ್ ಪಂದ್ಯದ ವೇಳೆ ಲಯನ್ ಬೌಲಿಂಗ್ ಮಾಡುವ ಸಂದರ್ಭದಲ್ಲಿ ಘಟನೆ ನಡೆದಿದ್ದು, ಮಾಧ್ಯಮವೊಂದು ಈ ಸಂಭಾಷಣೆಯನ್ನು ವರದಿ ಮಾಡಿದೆ. ನಾನ್ ಸ್ಟ್ರೈಕ್ ನಲ್ಲಿದ್ದ ಪೂಜಾರ ಶತಕ ಸಿಡಿಸಿದ ಸಂಭ್ರಮದಲ್ಲಿದ್ದರು. ಆ ವೇಳೆ ನಾಥನ್ ಲಯನ್ ಪ್ರಶ್ನೆ ಮಾಡಿದ್ದು, ಇದನ್ನು ಕೇಳಿಸಿಕೊಂಡ ಪೂಜಾರ ನಸು ನಕ್ಕು ಸುಮ್ಮನಾಗಿದ್ದಾರೆ.

114 ಇನ್ನಿಂಗ್ಸ್ ಗಳಲ್ಲಿ ವೃತ್ತಿ ಜೀವನದ 18ನೇ ಶತಕ ಪೂರೈಸಿದ ಪೂಜಾರ ಟೀಂ ಇಂಡಿಯಾ ಪರ ವಿವಿಎಸ್ ಲಕ್ಷ್ಮಣ್ ಹಾಗೂ ದಿಲೀಪ್ ವೆಂಗ್‍ಸರ್ಕಾರ್ ದಾಖಲೆಯನ್ನು ಮುರಿದರು. ಅಲ್ಲದೇ ತಂಡದ ಪರ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದರು. ವಿವಿಎಸ್ ಲಕ್ಷ್ಮಣ್, ದಿಲೀಪ್ ವೆಂಗ್‍ಸರ್ಕಾರ್ ತಲಾ 17 ಶತಕ ಸಿಡಿಸಿದ್ದಾರೆ. ಆಸೀಸ್ ಟೂರ್ನಿಯಲ್ಲಿ ಪೂಜಾರ ಅವರ 3ನೇ ಶತಕ ಇದಾಗಿದೆ.

1 ಸಾವಿರ ಎಸೆತ: ಪೂಜಾರ ಕೇವಲ ರನ್ ಗಳಿಸುವುದರಲ್ಲಿ ಮಾತ್ರವಲ್ಲದೇ 1 ಸಾವಿರಕ್ಕೂ ಹೆಚ್ಚು ಎಸೆತಗಳನ್ನು ಆಸೀಸ್ ನೆಲದ ಟೆಸ್ಟ್ ಪಂದ್ಯದ ಸರಣಿಯಲ್ಲಿ ಎದುರಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ದಿ ಗ್ರೇಟ್ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್, ಸುನಿಲ್ ಗವಾಸ್ಕರ್, ವಿರಾಟ್ ಕೊಹ್ಲಿ, ವಿಜಯ್ ಹಜಾರೆ ಅವರ ಸಾಲಿಗೆ ಸೇರಿದರು.

ಆಸೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿದ್ದ ಪೂಜಾರ, 3ನೇ ಟೆಸ್ಟ್ ಮೊದಲ ದಿನ ಮತ್ತೆ ಶತಕ ಸಿಡಿಸಿದ್ದರು. ಆದರೆ 2ನೇ ಇನ್ನಿಂಗ್ಸ್ ನಲ್ಲಿ ಶೂನ್ಯ ಸುತ್ತಿ ನಿರಾಸೆ ಮೂಡಿಸಿದ್ದರು. ಸದ್ಯ ಅಂತಿಮ ಟೆಸ್ಟ್ ಪಂದ್ಯದಲ್ಲಿ 130 ರನ್ ಗಳಿಸಿರುವ ಪೂಜಾರ 2ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡು ಆಸೀಸ್ ಬೌಲರ್ ಗಳಿಗೆ ತಲೆ ನೋವಾಗಿ ಪರಿಣಾಮಿಸಿದ್ದಾರೆ.

https://twitter.com/narangmrinal/status/1080709940405096448?

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *