ನಾಗಾಲ್ಯಾಂಡ್, ಅಸ್ಸಾಂ, ಮಣಿಪುರದಲ್ಲಿ ಆಫ್ಸಾ ವ್ಯಾಪ್ತಿಯ ಪ್ರದೇಶಗಳ ಕಡಿತ: ಅಮಿತ್ ಶಾ

ನವದೆಹಲಿ: ದಶಕಗಳ ಗೊಂದಲದ ಬಳಿಕ ನಾಗಾಲ್ಯಾಂಡ್, ಅಸ್ಸಾಂ ಹಾಗೂ ಮಣಿಪುರದಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ(ಎಎಫ್‌ಎಸ್‌ಪಿಎ) ಅಡಿಯಲ್ಲಿದ್ದ ಪ್ರದೇಶಗಳನ್ನು ಕಡಿತಗೊಳಿಸಲು ಕೇಂದ್ರ ನಿರ್ಧರಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಶುಕ್ರವಾರದಿಂದ ನಾಗಾಲ್ಯಾಂಡ್‌ನ ಏಳು ಜಿಲ್ಲೆಗಳಲ್ಲಿ 15 ಪೊಲೀಸ್ ಠಾಣೆಗಳಿಂದ ತೊಂದರೆಗೊಳಗಾದ ಪ್ರದೇಶದ ಅಧಿಸೂಚನೆಯನ್ನು ತೆಗೆದುಹಾಕಲಾಗುವುದು ಎಂದು ಕೇಂದ್ರ ತಿಳಿಸಿದೆ. ಶುಕ್ರವಾರ ಅಸ್ಸಾಂನ 23 ಜಿಲ್ಲೆಗಳಲ್ಲಿ ಆಫ್ಸಾ ವ್ಯಾಪ್ತಿಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುತ್ತದೆ ಹಾಗೂ ಒಂದು ಜಿಲ್ಲೆಯಲ್ಲಿ ಭಾಗಶಃ ತೆಗೆದುಹಾಕಲಾಗುತ್ತದೆ. ಮಣಿಪುರದಲ್ಲಿ ಆರು ಜಿಲ್ಲೆಗಳ 15 ಪೊಲೀಸ್ ಠಾಣೆ ಪ್ರದೇಶಗಳನ್ನು ತೊಂದರೆಗೊಳಗಾದ ಪ್ರದೇಶದ ಅಧಿಸೂಚನೆಯಿಂದ ಹೊರಗಿಡಲಾಗುತ್ತದೆ ಎಂದು ಕೇಂದ್ರ ತಿಳಿಸಿದೆ. ಇದನ್ನೂ ಓದಿ: ಏನಿದು ಸಶಸ್ತ್ರ ಪಡೆಗಳ ವಿಶೇಷ ಕಾಯ್ದೆ? ಸೈನಿಕರಿಗೆ ಇರೋ ಅಧಿಕಾರ ಏನು? ವಿರೋಧ ಯಾಕೆ? 

nbsp;

2014 ಕ್ಕೆ ಹೋಲಿಸಿದರೆ, 2021ರಲ್ಲಿ ಭಯೋತ್ಪಾದನಾ ಘಟನೆಗಳು ಶೇ.74 ರಷ್ಟು ಕಡಿಮೆಯಾಗಿದೆ. ಈ ಅವಧಿಯಲ್ಲಿ ಭದ್ರತಾ ಸಿಬ್ಬಂದಿ ಹಾಗೂ ನಾಗರಿಕರ ಸಾವುಗಳು ಕ್ರಮವಾಗಿ ಶೇ.60 ಹಾಗೂ ಶೇ.84 ರಷ್ಟು ಕಡಿಮೆಯಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಭಯೋತ್ಪಾದನೆಯಲ್ಲಿ ತೊಡಗಲು ಮುಸ್ಲಿಂ ಯುವಕರಿಗೆ ಪ್ರೇರಣೆ- 5 ವರ್ಷ ಜಾಕಿರ್‌ ನಾಯಕ್‌ ಸಂಸ್ಥೆ ಬ್ಯಾನ್‌

ಮೋದಿ ಸರ್ಕಾರ ಬಂದ ಬಳಿಕ ಹಲವು ಉಗ್ರಗಾಮಿ ಗುಂಪುಗಳು ಭಯೋತ್ಪಾದನೆಯನ್ನು ನಿಲ್ಲಿಸಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಿವೆ. ಕಳೆದ ಕೆಲವು ವರ್ಷಗಳಲ್ಲಿ ಸುಮಾರು 7,000 ಉಗ್ರಗಾಮಿಗಳು ಶರಣಾಗಿದ್ದಾರೆ. ಅವರೆಲ್ಲರೂ ಇಂದು ಪ್ರಜಾಪ್ರಭುತ್ವದ ಭಾಗವಾಗುತ್ತಿದ್ದು, ಶಾಂತಿ ಹಾಗೂ ಅಭಿವೃದ್ಧಿಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ ಎಂದು ಕೇಂದ್ರ ತಿಳಿಸಿದೆ.

Comments

Leave a Reply

Your email address will not be published. Required fields are marked *