ಆರ್.ಆರ್.ಆರ್ ಸಿನಿಮಾದಲ್ಲಿ ಜ್ಯೂ.ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜ ಸಲಿಂಗ ಕಾಮಿಗಳಾ?

ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಆರ್.ಆರ್.ಆರ್ ಸಿನಿಮಾ ಈವರೆಗೂ ಬಾಕ್ಸ್ ಆಫೀಸ್ ಗಳಿಕೆ, ಸಿನಿಮಾ ಮೂಡಿ ಬಂದ ರೀತಿ ಮತ್ತು ಮೇಕಿಂಗ್ ನಿಂದಾಗಿ ಸಾಕಷ್ಟು ಸದ್ದು ಮಾಡಿದೆ. ಇದೀಗ ಸಿನಿಮಾದ ಕಥೆಯಿಂದಾಗಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ. ಅದರಲ್ಲೂ ವಿದೇಶಿ ನೋಡುಗರು ಈ ಕಥೆಯನ್ನು ಬೇರೆಯದ್ದಾಗಿಯೇ ಸ್ವೀಕರಿಸಿರುವುದು ಇನ್ನೂ ಸುದ್ದಿಗೆ ಕಾರಣವಾಗಿದೆ.

ಆರ್.ಆರ್.ಆರ್ ಸಿನಿಮಾ ಓಟಿಟಿಯಲ್ಲಿ ನೋಡಲು ಲಭ್ಯವಿದೆ. ಹೀಗಾಗಿ ಅನೇಕರು ಈ ಸಿನಿಮಾವನ್ನು ಅದೇ ವೇದಿಕೆಯಲ್ಲೇ ವೀಕ್ಷಿಸುತ್ತಿದ್ದಾರೆ. ಸಿನಿಮಾ ನೋಡಿದ ವಿದೇಶಿಗರು ಈ ಸಿನಿಮಾವನ್ನು ಗೇ ಕಥೆಯುಳ್ಳ ಚಿತ್ರ ಎಂದು ಕಾಲೆಳೆದಿದ್ದಾರೆ. ಜ್ಯೂ.ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜ ಪಾತ್ರಗಳು ಸಲಿಂಗ ಕಾಮಿಗಳು ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನು ಓದಿ : ಯಶ್ ಮುಂದಿನ ಸಿನಿಮಾ ನರ್ತನ್ ಜೊತೆ ಫಿಕ್ಸ್ : ಘೋಷಣೆಯೊಂದೇ ಬಾಕಿ

ಇಂತಹ ಸಾಕಷ್ಟು ಕಾಮೆಂಟ್ ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದಕ್ಕೆ ಉತ್ತರಿಸಿರುವ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಉರಿವ ಬೆಂಕಿಗೆ ತುಪ್ಪವಲ್ಲ, ಪೆಟ್ರೊಲ್ ಸುರಿದು ಮತ್ತಷ್ಟು ಬೆಂಕಿ ಉಗುಳುವಂತೆ ಮಾಡಿದ್ದಾರೆ. ‘ಇದೊಂದು ಸಲಿಂಗ ಪ್ರೇಮ ಎನ್ನುವಂತಹ ಕಥೆಯನ್ನು ಈ ಸಿನಿಮಾ ಹೊಂದಿದೆ ಎನ್ನುವ ಅರ್ಥದಲ್ಲಿ ಟ್ವೀಟ್‌ ಮಾಡಿದ್ದಾರೆ. ಇನ್ನೂ ಓದಿ : ಪಠ್ಯ ಪುಸ್ತಕ ಪರಿಷ್ಕರಣೆ ಆಕ್ರೋಶ ಹೊರ ಹಾಕಿದ ನಟ ಚೇತನ್ : ಗಾಂಧಿ, ನೆಹರು ನಮ್ ವಿರೋಧಿಗಳು ಎಂದ ನಟ

ಈ ಸಿನಿಮಾದಲ್ಲಿ ಜ್ಯೂನಿಯರ್ ಎನ್‌ಟಿಆರ್‌ ಮತ್ತು ರಾಮ್ ಚರಣ್ ತೇಜ್ ಇಬ್ಬರೂ ಒಟ್ಟೊಟ್ಟಿಗೆ ತೆರೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಸಿನಿಮಾ ಮುಗಿಯುವ ತನಕ ಒಬ್ಬರಿಗಾಗಿ ಒಬ್ಬರು ಫೈಟ್ ಮಾಡುತ್ತಾರೆ. ನೃತ್ಯ ಮಾಡುತ್ತಾರೆ. ಹೀಗಾಗಿ ಇದೊಂದು ಸಲಿಂಗ ಪ್ರೇಮಕಥೆ ಎಂದು ಉಲ್ಲೇಖಿಸಲಾಗುತ್ತಿದೆ.

Comments

Leave a Reply

Your email address will not be published. Required fields are marked *