ತಂದೆ ಸಾವಿನ ದುಃಖದ ನಡುವೆಯೂ ಶೂಟಿಂಗ್ ಗೆ ಹಾಜರಾಗಿ ಕರ್ತವ್ಯ ಪ್ರಜ್ಞೆ ಮೆರೆದ ಜೂ.ಎನ್‍ಟಿಆರ್

ಹೈದರಾಬಾದ್: ಟಾಲಿವುಡ್ ನಟ ಜೂ.ಎನ್‍ಟಿಆರ್ ತಂದೆ ಹರಿಕೃಷ್ಣರ ಸಾವಿನ ನೋವಿನಲ್ಲೂ ತಮ್ಮ ಮುಂದಿನ ಸಿನಿಮಾ ‘ಅರವಿಂದ ಸಮೇತ’ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

ಚಿತ್ರದ ಬಿಡುಗಡೆಯ ಸಮಯ ಹತ್ತಿರವಾಗಿರುವುದರಿಂದ ಸಿನಿಮಾ ಚಿತ್ರೀಕರಣ ಪೂರ್ಣಗೊಳಿಸುವುದು ಅನಿವಾರ್ಯವಾಗಿದ್ದು, ಇಲ್ಲವಾದಲ್ಲಿ ನಿರ್ಮಾಪಕರು ಭಾರೀ ನಷ್ಟ ಅನುಭವಿಸುವ ಸಾಧ್ಯತೆ ಇತ್ತು. ಇದನ್ನು ತಿಳಿದ ನಟ ಎನ್‍ಟಿಆರ್ ಚಿತ್ರ ನಿಂತು ಹೋಗುವುದರಿಂದ ತಂಡಕ್ಕೆ ಉಂಟಾಗಬಹುದಾದ ನಷ್ಟವನ್ನು ತಪ್ಪಿಸಲು ಶನಿವಾರದಿಂದಲೇ ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ.

ರಾಧಾ ಕೃಷ್ಣ ನಿರ್ಮಾಣದ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದಲ್ಲಿ ಸಿನಿಮಾ ಮೂಡಿಬರುತ್ತಿದೆ. ಹರಿಕೃಷ್ಣರ ಹಠಾತ್ ಮರಣದಿಂದ ಪುತ್ರ ಎನ್‍ಟಿಆರ್ ತೀವ್ರವಾಗಿ ನೊಂದಿದ್ದರು. ಇದರಿಂದ ಈ ಹಿಂದೆ ಚಿತ್ರತಂಡ ತಿಳಿದಂತೆ ದಸರಾಗೆ ಸಿನಿಮಾ ಬಿಡುಗಡೆ ಕಷ್ಟಸಾಧ್ಯ ಎಂಬ ಮಾತು ಕೇಳಿಬಂದಿತ್ತು. ಆದರೆ ತೀವ್ರ ದುಃಖದ ನಡುವೆಯೂ ತಮ್ಮ ಸಿನಿಮಾ ಪೂರ್ಣಗೊಳಿಸಲು ಎನ್‍ಟಿಆರ್ ಮುಂದಾಗಿದ್ದಾರೆ. ಇದೇ ಆಕ್ಟೋಬರ್ 11ಕ್ಕೆ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಸದ್ಯ ಹರಿಕೃಷ್ಣರ ಸಾವಿನ ಶಾಕ್ ನಲ್ಲಿರುವ ಎನ್‍ಟಿಆರ್ ಕುಟುಂಬಕ್ಕೆ ಹರಿಕೃಷ್ಣ ಸಹೋದರ ನಟ ಬಾಲಕೃಷ್ಣ ಹತ್ತಿರವಾಗಿದ್ದಾರೆ ಎಂಬ ಮಾತು ಟಾಲಿವುಡ್‍ನಲ್ಲಿ ಕೇಳಿಬಂದಿದೆ. ಅಲ್ಲದೇ ಇದೂವರೆಗೂ ಇದ್ದ ಎಲ್ಲಾ ಮನಸ್ತಾಪಗಳನ್ನು ಮರೆತು ಎನ್‍ಟಿಆರ್ ರ `ಅರವಿಂದ ಸಮೇತ’ ಸಿನಿಮಾ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಬಾಲಕೃಷ್ಣ ಭಾಗವಹಿಸುವ ಸಾಧ್ಯತೆ ಇದೆ. ಇದನ್ನು  ಓದಿ: ನಂದಮೂರಿ ಹರಿಕೃಷ್ಣ ಮೃತ ದೇಹದ ಜೊತೆ ಸೆಲ್ಫಿ: ಸಿಬ್ಬಂದಿ ವಜಾ

ಟಾಲಿವುಡ್ ಸ್ಟಾರ್ ನಿರ್ದೇಶಕರಾಗಿರುವ ತ್ರಿವಿಕ್ರಮ್ ಹಾಗೂ ಎನ್‍ಟಿಆರ್ ಕಾಂಬಿನೇಷನ್‍ನಲ್ಲಿ ಮೂಡಿಬರುತ್ತಿರುವ ಮೊದಲ ಸಿನಿಮಾ ಇದಾಗಿದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಸಿನಿಮಾ ಆಡಿಯೋ ಬಿಡುಗೆಡಯಾಗುವ ಮಾಡುವ ಕುರಿತು ಚಿತ್ರತಂಡ ಮಾಹಿತಿ ನೀಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *