ಮಂತ್ರಿ ಒಳಗೆ ಶುರು ಹಚ್ಕೊಂಡಿದ್ದ, ಬಾಗಿಲಲ್ಲಿ ಪೊಲೀಸರು ಇದ್ರು: ಅರಗ ಜ್ಞಾನೇಂದ್ರ

ಬೆಂಗಳೂರು: ವಿಧಾನಸೌಧದ ಮೂರನೇ ಮಹಡಿಯಲ್ಲಿ ಒಳಗೆ ಮಂತ್ರಿ ಶುರು ಹಚ್ಕೊಂಡು ಬಿಟ್ಟಿದ್ದ. ಬಾಗಿಲಲ್ಲಿ ಪೊಲೀಸರು ನಿಂತಿದ್ರು ಎಂದು ಯಾರ ಹೆಸರು ಹೇಳದೇ ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರಸ್ತಾಪಿಸಿದರು.

ವಿಧಾನಸಭೆಯಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ನಿಯಮ 69ರಡಿ ಮಾತನಾಡುವಾಗ ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರು ಅತ್ಯಾಚಾರ ಪ್ರಕರಣ ಪ್ರಸ್ತಾಪಿಸಿದ್ರು. ಆ ವೇಳೆ ಸಿದ್ದರಾಮಯ್ಯ ಅವರಿಗೆ ಅರಗ ಅವರು ತಿರುಗೇಟು ಕೊಡುವಾಗ, ಇಲ್ಲೇ ಮೂರನೇ ಮಹಡಿಯಲ್ಲಿ ಸಚಿವ ಒಬ್ಬ ಒಳಗೆ ಶುರು ಹಚ್ಕೊಂಡಿದ್ದ. ಹೊರಗೆ ಬಾಗಿಲಲ್ಲಿ ಪೊಲೀಸರು ಇದ್ದರು. ಏನ್ ಮಾಡ್ಬೇಕು..? ವಾರಗಟ್ಟಲೇ ಮೀಡಿಯಾದಲ್ಲಿ ನೋಡಿದ್ದೇವೆ. ಆಗ ಯಾರು ಸಿಎಂ ಆಗಿದ್ದರು..? ನಿಮಗೆ ದೋಷ ಕೊಡಲು ಆಗುತ್ತಾ..? ನಿಮ್ಮ ವೈಫಲ್ಯ, ವಿಫಲತೆ ಎನ್ನಲು ಆಗುತ್ತಾ..? ಎಂದು ಪ್ರಶ್ನಿಸಿದ ಘಟನೆ ನಡೆಯಿತು. ಇದನ್ನೂ ಓದಿ: ವಿಸ್ತಾರವಾದ, ಪ್ರತ್ಯೇಕವಾದ ನಿಲ್ಲುವವರೆಗೂ ಮುಸ್ಲಿಮರಿಗೆ ಆರ್ಥಿಕ ಬಹಿಷ್ಕಾರ: ಮುತಾಲಿಕ್

ಆಗ ಒಂದು ವೇಳೆ ತಪ್ಪು ಆಗಿದ್ದಾರೆ, ಅದು ನಮ್ಮ ವಿಫಲತೆ ಎಂದು ಒಪ್ಪಿಕೊಳ್ಳುತ್ತೇವೆ. ಅದೇ ರೀತಿ ನೀವು ಒಪ್ಪಿಕೊಳ್ಳಿ ಎಂದು ಸಿದ್ದರಾಮಯ್ಯ ಅವರು ಮರುಪ್ರಶ್ನೆ ಹಾಕಿದ್ರು. ಸಿದ್ದರಾಮಯ್ಯ ಅವರು ಮೈಸೂರು ರೇಪ್ ಪ್ರಕರಣ ಪ್ರಸ್ತಾಪಿಸಿ ಚಾಮುಂಡಿಬೆಟ್ಟದ ಹತ್ತಿರ ರೇಪ್ ಕೇಸ್ ಆಯ್ತು. ನಾನು ಹೇಳಿದ್ದು, ಯಾರೇ ಆಗಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದೆ. ಆಗ ಕಾಂಗ್ರೆಸ್ ಅವರು ನನ್ನನ್ನೆ ರೇಪ್ ಮಾಡ್ತಾವರೆ ಎಂದು ವ್ಯಂಗ್ಯವಾಡಿದರು.

ಎಲ್ಲ ಸಂಘಟನೆಗಳ ಪ್ರತಿಭಟನೆ ಮಾಡಿದ ಮೇಲೆ ಹೆಣ್ಣು ಮಗಳು ಅಷ್ಟೊತ್ತಿನಲ್ಲಿ ಅಲ್ಲಿಗೆ ಯಾಕೆ ಹೋಗಿದ್ದಳು ಎಂದು ಹೇಳಿದ್ರಿ. ಆ ಯುವತಿ ಅಷ್ಟೊತ್ತಿಗೆ ಅಲ್ಲಿ ಯಾಕೆ ಹೋಗಿದ್ದಳು ಎಂದು ಹೇಳಿದ್ರಿ, ಇದು ನಿಮ್ಮ ಭಾಷೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ರು. ತಿರುಗೇಟು ಕೊಟ್ಟ ಅರಗ ಜ್ಞಾನೇಂದ್ರ ಗಾಂಧಿಜೀ ಅವರ ಆಶಯ, ರಾಮ ರಾಜ್ಯ ಆಗಬೇಕು ಎಂಬುದು ಅವರ ಆಶಯವಾಗಿತ್ತು ಎಂದು ವಿವರಿಸಿದರು.

ಗಾಂಧಿ ಆಶಯ ನಿಮ್ಮ ಕಾಲದಲ್ಲಿ ಆಗಿಲ್ಲ. ನಮ್ಮ ಕಾಲದಲ್ಲಿ ಆಗಿಲ್ಲ. ಮಧ್ಯರಾತ್ರಿ ಹನ್ನೆರಡು ಗಂಟೆಗೆ ಮಹಿಳೆ ಕಾಡಿಗೆ ಹೋಗಬಹುದು ಎಂದು ಯಾವ ದೇಶದಲ್ಲಿ ಇದೆ ಎಂದು ಹೇಳಿ. ಮೃಗಿಯ ಮನಸ್ಸಿನ ವ್ಯಕ್ತಿಗಳು ಇದ್ದಾಗ, ಹೆಣ್ಣು ಮಾನ-ಪ್ರಾಣದ ದೃಷ್ಟಿಯಿಂದ ನಾನು ಹೇಳಿದ್ದೇನೆ ಅಷ್ಟೇ. ನಿಮ್ಮ ಮನೆಯ ಹೆಣ್ಣು ಮಕ್ಕಳನ್ನು ರಾತ್ರಿ ಎಂಟೂವರೆ, ಒಂಬತ್ತು ಗಂಟೆಗೆ ಕಾಡಿಗೆ ಕಳಿಸುತ್ತೇವಾ..? ಎಂದು ಸಿದ್ದುಗೆ ತಿರುಗೇಟು ಕೊಟ್ಟರು. ಅದೇ ವೇಳೆ ವಿಧಾನಸೌಧದ ವಿಚಾರ ಪ್ರಸ್ತಾಪಿಸಿದ್ರು.

ಈ ನಡುವೆ ಸದನದಲ್ಲಿ ಪ್ರಸ್ತಾಪವಾಗುವ ಅಶ್ಲೀಲ, ಅಸಂಸದೀಯ ಪದಗಳು ಯಾವುದು ಕಡತಕ್ಕೆ ಹೋಗಬಾರದು. ಹೋಗಿರುವುದನ್ನ ಕಡತದಿಂದ ತೆಗೆಸುತ್ತೇನೆ ಎಂದು ಸ್ಪೀಕರ್ ರೂಲಿಂಗ್ ಕೊಟ್ಟರು. ಇದನ್ನೂ ಓದಿ: ಪ್ರಿ ಆಸ್ಕರ್ ಪಾರ್ಟಿಯಲ್ಲಿ ಮೊದಲಬಾರಿ ಮಗಳ ಬಗ್ಗೆ ಮಾತನಾಡಿದ ದೇಸಿ ಗರ್ಲ್ ಪಿಗ್ಗಿ

Comments

Leave a Reply

Your email address will not be published. Required fields are marked *