ಸದ್ಯದಲ್ಲೇ ಮಾಡಾಳ್ ವಿರೂಪಾಕ್ಷಪ್ಪ ಬಂಧನ ಆಗಲಿದೆ: ಆರಗ ಜ್ಞಾನೇಂದ್ರ

ಶಿವಮೊಗ್ಗ : ಸದ್ಯದಲ್ಲೇ ಮಾಡಾಳ್ ವಿರೂಪಾಕ್ಷಪ್ಪ (Madal Virupakshappa) ಬಂಧನ ಆಗಲಿದ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ತಿಳಿಸಿದರು.

ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಮಾಧ್ಯಮದವರ ಜೊತೆ ಪ್ರತಿಕ್ರಿಯಿಸಿದ ಅವರು, ನಮ್ಮ ಪೊಲೀಸ್ ಇಲಾಖೆಯ ಒಳ್ಳೆಯ ಅಧಿಕಾರಿಗಳನ್ನು ಲೋಕಾಯುಕ್ತಕ್ಕೆ ನೀಡಿದ್ದೇವೆ. ನಾವು ಲೋಕಾಯುಕ್ತಕ್ಕೆ ಹಸ್ತಕ್ಷೇಪ ಮಾಡಲಿಲ್ಲ. ಈಗಾಗಿಯೇ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ದಾಳಿಗೊಳಗಾಗಿ ಬಂಧನಕ್ಕೊಳಪಟ್ಟರು. ಸದ್ಯದಲ್ಲಿಯೇ ವಿರೂಪಾಕ್ಷಪ್ಪ ಬಂಧನ ಆಗುತ್ತದೆ. ಸರ್ಕಾರ ಹಸ್ತಕ್ಷೇಪ ಮಾಡಿದ್ದರೇ ಅವರ ಮಗನ ಬಂಧನ ಆಗುತ್ತಿರಲಿಲ್ಲ. ಅಪ್ಪ ಇರಲಿ, ಮಗ ಇರಲಿ, ಯಾರೇ ಇದ್ದರೂ ತಪ್ಪು ಮಾಡಿದ್ದರೇ ಶಿಕ್ಷೆ ಆಗಲಿ. ನಾವು ಭ್ರಷ್ಟಾಚಾರ ಮುಕ್ತವಾಗಿದ್ದೇವೆ. ಈಗಿರುವಾಗ ಕಾಂಗ್ರೆಸ್‌ನವರು ಯಾರ ವಿರುದ್ಧ ಬಂದ್ ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಮಾ.9 ರಂದು ಕಾಂಗ್ರೆಸ್ ವತಿಯಿಂದ ರಾಜ್ಯ ಬಂದ್ ಗೆ ಕರೆ ನೀಡಿರುವುದು ಹಾಸ್ಯಾಸ್ಪದ. ಯಾರು ಭ್ರಷ್ಟಾಚಾರದ ತಾಯಿ ಎನಿಸಿಕೊಂಡಿದ್ದರೋ ಅವರೇ ಬಂದ್‌ಗೆ ಕರೆ ಕೊಟ್ಟಿದ್ದಾರೆ. ಅವರ ಕೇಂದ್ರದ ನಾಯಕರು, ರಾಜ್ಯದ ನಾಯಕರು ಭ್ರಷ್ಟಾಚಾರವೆಸಗಿ ಬಹಳಷ್ಟು ದಿನ ಜೈಲಿನಲ್ಲಿ ಇದ್ದರು. ಈಗ ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾರೆ. ಅಂತಹವರು ಇವತ್ತು ಭ್ರಷ್ಟಾಚಾರದ ವಿರುದ್ದ ಬಂದ್‌ಗೆ ಕರೆ ನೀಡುತ್ತಾರೆ. ನನಗೆ ನಗಬೇಕೋ, ಅಳಬೇಕೋ ಗೊತ್ತಾಗುತ್ತಿಲ್ಲ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಮೆಂಟಲ್ ಕೇಸ್ ಬಗ್ಗೆ ನಮ್ಮನ್ನು ಕೇಳಬೇಡಿ: ರಮೇಶ್ ಜಾರಕಿಹೊಳಿ‌ಗೆ ಡಿಕೆಶಿ ತಿರುಗೇಟು

ನಮ್ಮ ಸರ್ಕಾರ ಭ್ರಷ್ಟಾಚಾರದ ಪರವಾಗಿರದೇ, ಭ್ರಷ್ಟಾಚಾರದ ವಿರುದ್ಧವಾಗಿದೆ. ಯಾರೇ ಭ್ರಷ್ಟಾಚಾರದಲ್ಲಿ ಭಾಗಿಯಾದರೂ ಅವರ ವಿರುದ್ದ ಕ್ರಮ ಕೈಗೊಳ್ಳದೇ ಬಿಡುವುದಿಲ್ಲ. ಆದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅವಧಿಯಲ್ಲಿ ಲೋಕಾಯುಕ್ತ ಸಂಸ್ಥೆಯ ಕತ್ತು ಹಿಸುಕಿ ಸಾಯಿಸಿ ಬಿಟ್ಟಿದ್ದರು. ಅವರ ಮೇಲೆಯೇ 69 ಕೇಸ್‌ಗಳು ಬಂದಿದ್ದವು. ಹಾಗಾಗಿಯೇ ಈ ಸಂಸ್ಥೆಯನ್ನು ಮುಚ್ಚಿ ಎಸಿಬಿಯನ್ನು ಮಾಡಿದ್ದರು. ನಾವು ನ್ಯಾಯಾಲಯದ ಆದೇಶದ ಮೇರೆಗೆ ಅದಕ್ಕೆ ಶಕ್ತಿ ಕೊಟ್ಟಿದ್ದೇವೆ ಎಂದು ಕಿಡಿಕಾರಿದರು. ಇದನ್ನೂ ಓದಿ: 

Comments

Leave a Reply

Your email address will not be published. Required fields are marked *