ಕಲಬುರಗಿ: ಪಿಎಸ್‍ಐಗೆ ಅವಾಚ್ಯ ಪದಗಳಿಂದ ನಿಂದಿಸಿ ಆವಾಜ್ ಹಾಕಿದ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು ತಾಳ್ಮೆ ಕಳೆದುಕೊಂಡಿದ್ದಾರೆ. ಕರೆಸಿ ಮಾತನಾಡುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಕಲಬುರಗಿಯಲ್ಲಿ ಈ ಕುರಿತಾಗಿ ಪ್ರತಿಕ್ರಿಯಿಸಿದ ಅವರು, ನಮ್ಮ ಶಾಸಕರು ತಾಳ್ಮೆ ಕಳೆದುಕೊಂಡಿದ್ದಾರೆ ಅಂತ ಅನ್ಸುತ್ತೆ. ಎಂ.ಪಿ. ಕುಮಾರಸ್ವಾಮಿ ಅವರು ತಾಳ್ಮೆ ಕಳೆದುಕೊಂಡಿದ್ದಾರೆ. ಎಂ.ಪಿ. ಕುಮಾರಸ್ವಾಮಿ ಅವರು ಪಿಎಸ್‍ಐಗೆ ಅವಾಚ್ಯವಾಗಿ ನಿಂದನೆ ಮಾಡಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ನಾನು ರಿಪೋರ್ಟ್ ತರಿಸುತ್ತೇನೆ. ಘಟನೆ ಕುರಿತು ಶಾಸಕರನ್ನು ಕರೆಸಿ ಮಾತಾಡುವುದಾಗಿ ತಿಳಿದಿರು.

ಪಿಡಬ್ಲೂ ಇಲಾಖೆ ನೇಮಕಾತಿಯಲ್ಲೂ ಅಕ್ರಮ ನಡೆದಿದೆ ಎನ್ನುವ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ ಶಿಟ್ ಆಗಿದೆ. ಸದ್ಯ ಪಿಎಸ್‍ಐ ಪ್ರಕರಣದಲ್ಲಿ ಬೇರು ಮಟ್ಟಕ್ಕೆ ಹೋಗಿದ್ದೇವೆ. ಅಕ್ರಮ ಮಾಡಿದವರನ್ನು ಬಿಡೋದಿಲ್ಲ, ನಾವ್ಯಾರು ಈ ಸೂತಕದಲ್ಲಿ ಇಲ್ಲ ನಮಗೆ ನೈತಿಕತೆ ಇದೆ. ತನಿಖೆ ಮಾಡಿಸುತ್ತೆವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ವಿಜಯಪುರ ಹೆಚ್ಚು ಕಡಿಮೆ ಪಾಕಿಸ್ತಾನ ಇದ್ದಂಗೆ ಇದೆ: ಯತ್ನಾಳ್

ಮೈಸೂರಿನಲ್ಲಿ ಮಿನಿ ಪಾಕಿಸ್ತಾನ ಘೋಷಣೆ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಬಂದಿದೆ. ಹೀಗಾಗಿ ಹಿರಿಯ ಅಧಿಕಾರಿಗಳ ಹತ್ತಿರ ಮಾತಾಡಿದ್ದೇನೆ. ಜೊತೆಗೆ ವರದಿ ಕೊಡಲು ತಿಳಿಸಿದ್ದೇನೆ ಎಂದರು. ಇದನ್ನೂ ಓದಿ: ಮರ್ಯಾದೆಯಿಂದ ವಾಪಸ್ ಹೋಗೋ ಲೇ – ಇನ್ಸ್‌ಪೆಕ್ಟರ್‌ಗೆ ಎಂ.ಪಿ.ಕುಮಾರಸ್ವಾಮಿ ಆವಾಜ್

Leave a Reply