ಪೆನ್ಷನ್ ಹಣ ಉಳಿಸಲು ಹೊಸ ಪ್ರಾಜೆಕ್ಟ್ ಮಾಡಲಾಗಿದೆ: ಅಗ್ನಿಪಥ್ ಬಗ್ಗೆ ಆರಗ ಪ್ರತಿಕ್ರಿಯೆ

ಹಾಸನ: ಮಿಲಿಟರಿಯಲ್ಲಿ ಪೆನ್ಷನ್‍ಗೆ ಹೆಚ್ಚು ಹಣ ಖರ್ಚಾಗುತ್ತಿದೆ. ಇದರಿಂದಾಗಿ ಪೆನ್ಷನ್ ಹಣ ಉಳಿಸಲು ಹೊಸ ಪ್ರಾಜೆಕ್ಟ್ ಮಾಡಲಾಗಿದೆ ಎಂದು ಅಗ್ನಿಪಥ್ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಹಾಸನ ನಗರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಪೊಲೀಸ್ ಇಲಾಖೆಯ ಕಟ್ಟಡಗಳ ಕಾಮಗಾರಿಗಳನ್ನು ವೀಕ್ಷಣೆ ಮಾಡಿದ ನಂತರ ಮಾತನಾಡಿದ ಅವರು, ಅಗ್ನಿಪಥ್ ಬಹಳ ಒಳ್ಳೆ ಯೋಜನೆ ಆಗಿದೆ. ನಮ್ಮ ಮಿಲಿಟರಿಗೆ ಯಂಗ್ ಬ್ಲಡ್ ಬಂದರೆ ಬಹಳ ಒಳ್ಳೆಯದು ಎಂದರು.

ನಮ್ಮ ರಾಜ್ಯ ಸರ್ಕಾರದ ಪೊಲೀಸ್ ನೇಮಕಾತಿಯಲ್ಲೂ ಅಗ್ನಿವೀರರಿಗೆ ಹೆಚ್ಚಿನ ಮೀಸಲಾತಿ ಕೊಡುವ ಬಗ್ಗೆ ಯೋಚಿಸಲಾಗಿದೆ. ಪೊಲೀಸ್‍ನಲ್ಲಿ ಶೇ.10 ಅಗ್ನಿಶಾಮಕದಲ್ಲಿ ಶೇ.50ರಷ್ಟು ಮೀಸಲಾತಿ ಬಗ್ಗೆ ಯೋಚಿಸಲಾಗಿದೆ ಎಂದ ಅವರು, ಅಗ್ನಿಪಥ್ ಹೋರಾಟದ ಹಿಂದಲ್ಲ ಮುಂದಿರೋದೆ ಕಾಂಗ್ರೆಸ್, ಅವರಿಗೆ ಮೋದಿ ಸರ್ಕಾರ ಮಾಡಿದ್ದೆಲ್ಲಾ ವಿರೋಧಿಸುವ ಚಟವಿದೆ ಅಷ್ಟು ಬಿಟ್ರೆ ಬೇರೆ ಏನಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ: ವಿಪಕ್ಷಗಳಿಂದ ಅಭ್ಯರ್ಥಿಯಾಗಿ ಯಶವಂತ್‌ ಸಿನ್ಹಾ ಆಯ್ಕೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಚಾರಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಯಾರು ತಪ್ಪು ಮಾಡಿದ್ದಾರೆ ಕಾನೂನು ಬಾಹಿರ ಹಣ ವರ್ಗಾಯಿಸಿದ್ದಾರೆ ಅವರನ್ನ ಇಡಿ ಕರೆಯುತ್ತದೆ. ಈ ದೇಶದಲ್ಲಿ ಗಾಂಧಿ ಕುಟುಂಬಕ್ಕೆ ಒಂದು ಕಾನೂನು ಜನಸಾಮಾನ್ಯರಿಗೆ ಒಂದು ಕಾನೂನಾ, ಎಲ್ಲರಿಗೂ ಒಂದೇ ಕಾನೂನಿದೆ ಎಂದರು.

ಇಡೀ ದೇಶದಾದ್ಯಂತ ಕಾಂಗ್ರೆಸ್‍ನವರು ಪ್ರತಿಭಟಿಸುತ್ತಿದ್ದಾರೆ. ಇವರಿಗೆ ನಾಚಿಕೆ ಆಗಬೇಕು ಕಾನೂನು ಕಾಯ್ದೆಯನ್ನು ಇವರು ಗೌರವಿಸದೇ ಇನ್ಯಾರು ಗೌರವಿಸುತ್ತಾರೆ. ಇಡಿಯಲ್ಲಿ ತಪ್ಪು ಮಾಡದಿದರೆ ಹೊರಗೆ ಬರುತ್ತಾರೆ. ಇಲ್ಲದಿದ್ದರೆ ಶಿಕ್ಷೆ ಅನುಭವಿಸುತ್ತಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ 90ರ ದಶಕದಲ್ಲಿಯೇ ಅಗ್ನಿಪಥ್ ಜಾರಿಗೆ ತರಲು ಚಿಂತಿಸಿತ್ತು: ಉಮೇಶ್ ಕತ್ತಿ ಹೊಸ ಬಾಂಬ್

ವಿಧಾನಪರಿಷತ್ ಫಲಿತಾಂಶ ವಿಚಾರದ ಬಗ್ಗೆ ಮಾತನಾಡಿ, ಇದರಲ್ಲಿ ಹಿನ್ನಡೆ ಮುನ್ನಡೆ ಬರುವುದಿಲ್ಲ ಎಂದ ಅವರು, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಯತ್ನಾಳ್ ಅಸಮಾಧಾನ ವಿಚಾರದ ಬಗ್ಗೆಯೂ ಮಾತನಾಡಿ, ಯತ್ನಾಳ್‍ರವರು ಹೇಳ್ತಾ ಇರ್ತಾರೆ ಇದರಿಂದ ಯಾವುದೇ ವ್ಯತ್ಯಾಸ ಇಲ್ಲ ನಮ್ಮ ಹಿರಿಯರು ಎಲ್ಲಾ ಸೇರಿ ನಿಶ್ಚಯ ತೆಗೆದುಕೊಳ್ತಾರೆ ಈ ವಿಚಾರದಲ್ಲಿ ಹೈಕಮಾಂಡ್ ವೀಕಾಗಿಲ್ಲ ಎಲ್ಲವನ್ನೂ ನಿಭಾಯಿಸುತ್ತೆ ಮುಂದೆ ಎಲ್ಲವೂ ಸರಿಯಾಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಿಎಸ್‍ಐ ಹಗರಣದ ಬಗ್ಗೆ ಸಂಪೂರ್ಣ ತನಿಖೆಗೆ ಆದೇಶ ಕೊಟ್ಟಿದ್ದೇವೆ. ಒಳ್ಳೆಯ ಸಿಐಡಿ ಬ್ಯಾಚ್ ಮಾಡಿ ಬಿಟ್ಟಿದ್ದೇವೆ, ಪೆÇಲೀಸ್ ಅಧಿಕಾರಿಗಳಿಂದ ಹಿಡಿದು ಯಾರ್ಯಾರು ಬ್ರೋಕರ್ ಗಳಿದ್ರು ಹಣ ಕೊಟ್ಟಿದ್ದಾರೆ, ಅವರೆಲ್ಲರನ್ನೂ ಜೈಲಿಗೆ ಕಳಿಸುತ್ತೇವೆ. ನಿನ್ನೆ ಕೂಡ ಒಬ್ಬರನ್ನು ಜೈಲಿಗೆ ಕಳಿಸಲಾಗಿದೆ ಎಂದು ಮಾಹಿತಿ ನೀಡಿದರು.

Live Tv

Comments

Leave a Reply

Your email address will not be published. Required fields are marked *