ನೀಚ ಕೃತ್ಯ ಮಾಡುವವರಿಗೆ ಪೊಲೀಸರು ಸ್ಪಷ್ಟ ಸಂದೇಶ ಕೊಟ್ಟಿದ್ದಾರೆ: ಅರಗ ಜ್ಞಾನೇಂದ್ರ

– ಈ ಕೃತ್ಯದಿಂದ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿತ್ತು
– ಪೊಲೀಸರಿಗೆ ಗೃಹ ಸಚಿವರಿಂದ ಧನ್ಯವಾದ

ಬೆಂಗಳೂರು: ನೀಚ ಕೃತ್ಯ ಮಾಡುವವರಿಗೆ, ವಿಕೃತ ಮನಸ್ಸಿನ ವ್ಯಕ್ತಿಗಳಿಗೆ ಪೊಲೀಸರು ಸಂದೇಶ ಕೊಟ್ಟಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು, ಪ್ರವಾಸಿಗರು ಸೇರುವ ಸಾಂಸ್ಕ್ರತಿಕ ನಗರಿ ಮೈಸೂರಾಗಿದೆ. ಈ ಕೃತ್ಯ ನಡೆದ ಬೆನ್ನಲ್ಲೆ ಜನರಲ್ಲಿ ದೊಡ್ಡ ಮಟ್ಟದ ಆತಂಕ ಸೃಷ್ಟಿಯಾಗಿತ್ತು. ಮೈಸೂರಿನಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿಂತೆ ಯಶಸ್ವಿ ಕಾರ್ಯಾಚರಣೆ ಮಾಡಿ 5 ಮಂದಿಯನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆ ಮಾಡಿದ ಪೊಲೀಸ್ ತಂಡಕ್ಕೆ ನಾನು ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ:  ಗ್ಯಾಂಗ್‍ರೇಪ್ ಪ್ರಕರಣ- ಆರೋಪಿಗಳನ್ನು ಬಂಧಿಸಿದ ಪೊಲೀಸರ ತಂಡಕ್ಕೆ 5 ಲಕ್ಷ ರೂ. ಬಹುಮಾನ

ಈ ಪ್ರಕರಣದಲ್ಲಿ ಸಂಬಧಿಸಿದ ಆರೋಪಿಗಳನ್ನು ಪೊಲೀಸರು ಬಂಧಿಸುತ್ತಾರೆ ಎನ್ನುವ ವಿಶ್ವಾಸವಿತ್ತು, ಹಾಗೆ ಆಗಿದೆ. ನನಗೆ ಪೊಲೀಸ್ ಕಾರ್ಯಾರಣೆಯ ಕುರಿತಾಗಿ ತುಂಬಾ ಸಂತೋಷವಾಗಿದೆ. ಇಂತಹ ಕೃತ್ಯ ನಡೆದಾಗ ಆರೋಪಿಗಳನ್ನು ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದು ಪೊಲೀಸರು ಈಗಾಗಲೇ ಸಾಬೀತುಪಡಿಸಿದ್ದಾರೆ. ವಿಕೃತ ಮನಸ್ಸಿನ ವ್ಯಕ್ತಿಗಳಿಗೆ ಒಂದು ಒಳ್ಳೆಯ ಮೆಸೇಗ್ ಅನ್ನು ಪೊಲೀಸ್ ಇಲಾಖೆ ನೀಡಿದೆ ಎಂದು ಹೇಳಿದ್ದಾರೆ.

ಆರೋಪಿಗಳನ್ನು ಪತ್ತೆ ಹಚ್ಚಿರುವುದು ಒಂದು ಭಾಗವಾದರೆ, ಅವರಿಗೆ ಶಿಕ್ಷೆಯನ್ನು ನೀಡುವುದು ಬಾಕಿ ಇದೆ. ಸಂತ್ರಸ್ತೆ ಯಾವುದೇ ಹೇಳಿಕೆಯನ್ನು ಕೊಡುವ ಸ್ಥಿತಿಯಲಿಲ್ಲ. ಆಕೆ ಶಾಕ್‍ಗೆ ಒಳಗಾಗಿದ್ದಾಳೆ. ಹೀಗಾಗಿ ಅವಳ ಮೇಲೆ ನಾವು ಇನ್ನಷ್ಟು ಒತ್ತಡವನ್ನು ಹೇರಲು ಸಾಧ್ಯವಿಲ್ಲ. ಸಿಕ್ಕಿರುವ ಸಾಕ್ಷ್ಯಾಧಾರಗಳ ಮೂಲಕವಾಗಿ ವೈಜ್ಞಾನಿಕ ಮತ್ತು ತಾಂತ್ರಿಕವಾಗಿ ಸಾಕ್ಷಾಧಾರಗಳನ್ನು ಒದಗಿಸಿ ತಪಾಸಣೆ ಮಾಡಲಾಗಿದೆ ಎಂದರು.

ಪೊಲೀಸರಿಗೆ ಈ ಪ್ರಕರಣ ಒಂದು ಸವಾಲಿನ ಕೆಲಸವಾಗಿತ್ತು. ಮುಂದಿನ ದಿನಗಳಲ್ಲಿ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಪ್ರತಿನಿತ್ಯ ಗಸ್ತು ವಾಹಗಳು ರೌಂಡ್ ಹಾಕುವ ಕೆಲಸ ನಿನ್ನೆಯಿಂದಲೇ ಪ್ರಾರಂಭವಾಗಿದೆ.

Comments

Leave a Reply

Your email address will not be published. Required fields are marked *