ಅಪ್ಪು ಅಡ್ವಾನ್ಸ್ ಪಡೆದಿದ್ದ ಹಣ ನಿರ್ಮಾಪಕರಿಗೆ ವಾಪಸ್

ಬೆಂಗಳೂರು: ಇತ್ತೀಚೆಗಷ್ಟೇ ನಿಧನರಾದ ನಟ ಪುನೀತ್ ರಾಜಕುಮಾರ್ ಸಿನಿಮಾಗಳಲ್ಲಿ ಅಭಿನಯಿಸಲು ಪಡೆದಿದ್ದ ಅಡ್ವಾನ್ಸ್ ಹಣವನ್ನು ಅಪ್ಪು ಧರ್ಮಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ನಿರ್ಮಾಪಕರಿಗೆ ಮರುಕಳಿಸಿದ್ದಾರೆ.

ಮುಂದಿನ ವರ್ಷಕ್ಕೆ ಅಪ್ಪು ಭರ್ತಿ 5 ಚಿತ್ರ ಮಾಡಲು ಡೇಟ್ಸ್ ಕೊಟ್ಟಿದ್ದರು. ಆದರೆ ಅಪ್ಪು ಅಕಾಲಿಕ ನಿಧನದಿಂದಾಗಿ ಆ ಸಿನಿಮಾಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಅಶ್ವಿನಿಯವರೇ ಖುದ್ದು ನಿರ್ಮಾಪಕರಿಗೆ ಕರೆ ಮಾಡಿ ಅವರಿಂದ ಪಡೆದ ಅಷ್ಟೂ ಹಣವನ್ನು ಖಾತೆಗೆ ಹಾಕುತ್ತಿದ್ದಾರೆ.

ನಿರ್ಮಾಪಕ ಉಮಾಪತಿ ಅಪ್ಪು ಡೇಟ್ಸ್ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 25ರಂದು ಉಮಾಪತಿ ಅಡ್ವಾನ್ಸ್ ಕೊಟ್ಟಿದ್ದರು. ಉಮಾಪತಿ ಪ್ರೊಡಕ್ಷನ್‌ನಲ್ಲಿ ಸಿನಿಮಾ ಮಾಡಲು ಅಪ್ಪು ಓಕೆ ಎಂದಿದ್ದರು. ಆದರೆ ಅಪ್ಪು ಅವರ ನಿಧನದ ಹಿನ್ನೆಲೆಯಲ್ಲಿ ಅಶ್ವಿನಿ ಅವರು ಹಣ ನೀಡಲು ಮುಂದಾಗಿದ್ದಾರೆ. ಇದನ್ನೂ ಓದಿ: ರಾಯನ್ ರಾಜ್ ಸರ್ಜಾ ಕ್ರಿಸ್‍ಮಸ್ ಸಂಭ್ರಮ ಹೇಗಿತ್ತು ಗೊತ್ತಾ?

ಈ ಹಿನ್ನೆಲೆಯಲ್ಲಿ ಕಳೆದ 15 ದಿನಗಳಿಂದ ಉಮಾಪತಿಯವರಿಗೆ ಹಣ ವಾಪಸ್ ಕಳಿಸುವುದಾಗಿ ಕರೆ ಬರುತ್ತಿತ್ತು. ಆದರೆ ನಿರ್ದೇಶಕ ಉಮಾಪತಿ ಅವರು ಚಿಕ್ಕ ಹಣ ಬೇಡ ಎಂದಿದ್ದರು. ಆದರೂ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಉಮಾಪತಿ ಅಕೌಂಟ್‌ಗೆ ಆರ್‌ಟಿಜಿಎಸ್ ಮಾಡಿ ದೊಡ್ತನವನ್ನು ಮರೆದಿದ್ದಾರೆ. ಇಂದು ಪಿಆರ್‌ಕೆ ಸಿಬ್ಬಂದಿಯ ಮೂಲಕ ಹಣವನ್ನು ಹಾಕಿ ಫೋನ್ ಮೂಲಕ ಉಮಾಪತಿ ಜೊತೆ ಅಶ್ವಿನಿ ಪುನೀತ್‌ರಾಜ್‌ಕುಮಾರ್ ಮಾತನಾಡಿದ್ದಾರೆ. ಇದನ್ನೂ ಓದಿ: ಸಿನಿಮಾರಂಗದಲ್ಲಿ ಉತ್ತಮ ನಟನಾಗಿ ಯಶಸ್ವಿಯಾಗುವ ಪ್ಲಾನ್ ಇದೆ: ನಿಖಿಲ್ ಕುಮಾರಸ್ವಾಮಿ

ಕಳೆದ ಒಂದು ವಾರದಿಂದ ಸುಮಾರು ಮೂರ್ನಾಲ್ಕು ನಿರ್ಮಾಪಕರಿಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅಡ್ವಾನ್ಸ್ ಹಣವನ್ನು ಮರುಳಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *