ಕೊಹ್ಲಿ ಪುತ್ರಿಯನ್ನು ರೇಪ್ ಮಾಡ್ತಿನಿ ಅಂದಿದ್ದ ಐಐಟಿ ಪದವೀಧರನಿಗೆ ಜಾಮೀನು

ಮುಂಬೈ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪುತ್ರಿಯನ್ನು ಅತ್ಯಾಚಾರ ಮಾಡುವುದಾಗಿ ಆನ್‍ಲೈನ್‍ನಲ್ಲಿ ಬೆದರಿಕೆ ಹಾಕಿದ ಐಐಟಿ ಪದವೀಧರನಿಗೆ ಮುಂಬೈ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ರಾಮ್‍ನಾಗೇಶ್ ಶ್ರೀನಿವಾಸ ಅಕುಬಾಥಿನಿ (23) ಮುಂಬೈ ಪೊಲೀಸ್ ವಿಶೇಷ ತಂಡ ಈತನನ್ನು ಬಂಧಿಸಿತ್ತು. ತಿಂಗಳಿಗೆ 2 ಬಾರಿ ಪೊಲೀಸ್ ಠಾಣೆಗೆ ಹಾಜರಾಗಬೇಕು ಹಾಗೂ ಮುಂಬೈನಲ್ಲಿ ಉಳಿದುಕೊಂಡಿರುವ ವಿಳಾಸವನ್ನು ಪೊಲೀಸರಿಗೆ ನೀಡಬೇಕು ಎಂದು ಕೋರ್ಟ್ ಷರತ್ತು ವಿಧಿಸಿದೆ. ಇದನ್ನೂ ಓದಿ:  ವಿರಾಟ್‌ ಕೊಹ್ಲಿ ಪುತ್ರಿಗೆ ಅತ್ಯಾಚಾರ ಬೆದರಿಕೆ ಪ್ರಕರಣ- ಇಂಜಿನಿಯರ್‌ ಅರೆಸ್ಟ್‌

ಆರೋಪಿಯು ತನ್ನ ಟ್ವಿಟರ್ ಖಾತೆ ಹೆಸರನ್ನು ಬದಲಾಯಿಸಿಕೊಂಡಿದ್ದ. ಅಲ್ಲದೇ ತಾನು ಪಾಕಿಸ್ತಾನಿ ಎನ್ನುವಂತೆ  ಪೋಸ್ಟ್‌ಗಳನ್ನು ಮಾಡಿದ್ದಾನೆ ಎಂಬುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಇದನ್ನೂ ಓದಿ: ವಿವಾಹಗಳಲ್ಲಿ ಕೇಕ್ ಕತ್ತರಿಸುವಂತಿಲ್ಲ, ಶಾಂಪೇನ್‌ ಹಾರಿಸುವಂತಿಲ್ಲ: ಕೊಡವ ಸಮಾಜದಿಂದ ನಿಷೇಧ

ಹೈದರಾಬಾದ್ ಕಂಪನಿಯೊಂದರಲ್ಲಿ ಸಾಫ್ಟ್‍ವೇರ್ ಎಂಜಿನಿಯರ್ ಆಗಿದ್ದ ಶ್ರೀನಿವಾಸ್ ಒಂದು ತಿಂಗಳ ಹಿಂದೆ ಬೆಂಗಳೂರಿನ ಪ್ರಮುಖ ಕಂಪನಿಯೊಂದರಲ್ಲಿ ಕೆಲಸ ಮಡುತ್ತಿದ್ದನು. ಅಮೆರಿಕದಲ್ಲಿ ಸ್ನಾತಕೋತ್ತರ ಪದವಿಗಾಗಿ ತಯಾರಿ ಮಾಡಿಕೊಳ್ಳಲು ಕೆಲಸ ಬಿಟ್ಟಿದ್ದನು.

ಕುಟುಂಬ ಸದಸ್ಯರು ಹೇಳುವಂತೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಟಾಪರ್ ಆಗಿದ್ದ. ಐಐಟಿ-ಜೆಇಇ( Indian Institute Of Technology) ಪರೀಕ್ಷೆಯಲ್ಲಿ 2367 ರ‍್ಯಾಂಕ್ ಕೂಡ ಪಡೆದಿದ್ದ ರಾಮ್ ನಾಗೇಶ್, ಕೆಲವೇ ದಿನಗಳಲ್ಲಿ ಉನ್ನತ ಅಧ್ಯಯನಕ್ಕೆ ಅಮೆರಿಕಕ್ಕೆ ತೆರಳಬೇಕಿತ್ತು.

ಪಾಕ್ ವಿರುದ್ಧ ಭಾರತ ಸೋಲಿನಿಂದಾಗಿ ತೀತ್ರ ಬೇಸರಕ್ಕೆ ಒಳಗಾಗಿ ಅತ್ಯಾಚಾರ ಬೆದರಿಕೆ ಪೋಸ್ಟ್ ಹಾಕಿದ್ದಾಗಿ ಹೇಳಿಕೆ ನೀಡಿದ್ದ. ಆಕಸ್ಮಿಕವಾಗಿ ತಮ್ಮ ಮಗ ಅತ್ಯಚಾರ ಬೆದರಿಕೆ ಪೋಸ್ಟ್ ಮಾಡಿದ್ದಾನೆ ಎಂದು ಅವರ ಕುಟುಂಬಸ್ಥರು ಹೇಳಿಕೊಂಡಿದ್ದಾರೆ. ಕನ್ನಡಕ ಹಾಕಿದ್ದ ಆತ ಅದನ್ನು ತೆಗೆದ ಬಳಿಕ ತಪ್ಪಾಗಿ ಟೈಪ್ ಮಾಡಿರಬೇಕು. ತಕ್ಷಣ ಪೋಸ್ಟ್ ಅನ್ನು ಅಳಿಸಿದ್ದಾನೆ ಎಂದು ಆರೋಪಿ ತಂದೆ ಹೇಳಿದ್ದರು.

Comments

Leave a Reply

Your email address will not be published. Required fields are marked *