ಮಗಳ ಫೋಟೋ ಶೇರ್ ಮಾಡಿದ್ದಕ್ಕೆ ಗರಂ ಆದ ಅನುಷ್ಕಾ ಶರ್ಮಾ

ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮೊನ್ನೆಯಷ್ಟೇ ಮಗಳನ್ನು ಬಿಟ್ಟು ವಿದೇಶ ಪ್ರವಾಸದಲ್ಲಿದ್ದರು. ಅದರಲ್ಲೂ ಬೀಚ್ ಮತ್ತಿತರ ಬಳಿ ಈ ದಂಪತಿ ಮೋಜುಮಸ್ತಿ ಮಾಡುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದವು. ಈ ವೇಳೆಯಲ್ಲಿ ಮಗಳು ವಮಿಕಾ ಇಲ್ಲದೇ ಇರುವುದಕ್ಕೆ ಅನೇಕರು ‘ಮಗಳು ಎಲ್ಲಿ’ ಎಂದು ಪ್ರಶ್ನೆ ಮಾಡಿದ್ದರು. ಮಗು ಒಂಟಿಯಾಗಿರುವ ಫೋಟೋವನ್ನೂ ಪೋಸ್ಟ್ ಮಾಡಿದ್ದರು.

ಮಗಳ ಫೋಟೋವನ್ನು ಈ ರೀತಿಯಾಗಿ ದುರ್ಬಳಕೆ ಮಾಡಿದಕ್ಕೆ ಮತ್ತು ಅನುಮತಿ ಇಲ್ಲದೇ ಮಗಳ ಫೋಟೋವನ್ನು ಕ್ಲಿಕ್ಕಿಸುವುದಕ್ಕೆ ಆಕ್ಷೇಪನೆ ವ್ಯಕ್ತ ಪಡಿಸಿದ್ದಾರೆ ಅನುಷ್ಕಾ ಶರ್ಮಾ. ನನ್ನ ಮಗಳನ್ನು ನಾನು ಹೇಗೆ ನೋಡಿಕೊಳ್ಳಬೇಕು ಎನ್ನುವುದು ಗೊತ್ತಿದೆ. ಅಲ್ಲದೇ, ಮಗಳ ಫೋಟೋ ತಗೆಯದಂತೆ ಹಲವಾರು ಬಾರಿ ವಿನಂತಿಸಿದ್ದೇನೆ. ಆದರೂ, ಫೋಟೋ ಕ್ಲಿಕ್ ಮಾಡುತ್ತಾರೆ. ಈ ವಿಷಯದಲ್ಲಿ ನನಗೆ ಅಸಾಮಾಧನವಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಸ್ವಯಂ ಪ್ರೇರಿತನಾಗಿ ಡ್ರಗ್ಸ್ ಸೇವಿಸಿಲ್ಲ, ಬೆಂಗಳೂರು ಪೊಲೀಸ್ ಒಳ್ಳೆಯವರು : ಬಾಲಿವುಡ್ ನಟ ಸಿದ್ಧಾಂತ್ ಕಪೂರ್

ಮಗಳ ಆರೈಕೆಯ ಬಗ್ಗೆ ಯಾರೂ ನಮಗೆ ಪಾಠ ಮಾಡಬೇಕಿಲ್ಲ. ನಿಮಗಿಂತಲೂ ಹೆತ್ತವರಿಗೆ ಮಕ್ಕಳ ಬಗ್ಗೆ ಕಾಳಜಿ ಇರುತ್ತದೆ. ಈ ವಿಷಯದಲ್ಲಿ ಮೂಗು ತೂರಿಸುವ ಅಗತ್ಯವಿಲ್ಲ ಎಂದು ನೇರವಾಗಿಯೇ ಅನುಷ್ಕಾ ಶರ್ಮಾ ಹೇಳಿದ್ದಾರೆ. ಅದನ್ನು ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *