ಎಮೋಶನಲ್ ವಿಡಿಯೋ ಹಾಕಿ ಸ್ವರ್ಗ ಎಂದು ಅನುಷ್ಕಾ ಪೋಸ್ಟ್!

ಮೆಲ್ಬರ್ನ್: ಮೊದಲ ಮದುವೆಯ ವಾರ್ಷಿಕೋತ್ಸವದಂದು ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಇಬ್ಬರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಫೋಟೋ ಪೋಸ್ಟ್ ಮಾಡಿದ್ದಾರೆ. ವಿರಾಟ್ ಮದುವೆಯ ಅಪರೂಪದ ಫೋಟೋ ಪೋಸ್ಟ್ ಮಾಡಿದರೆ, ಅನುಷ್ಕಾ ಎಮೋಶನಲ್ ವಿಡಿಯೋ ಹಾಕಿದ್ದಾರೆ.

ವಿರಾಟ್ ಕೊಹ್ಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮದುವೆಯ ಅಪರೂಪದ ಫೋಟೋಗಳನ್ನು ಹಂಚಿಕೊಂಡು ಅದಕ್ಕೆ, “ಮದುವೆಯಾಗಿ ಒಂದು ವರ್ಷ ಕಳೆದಿದೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ಇದೆಲ್ಲಾ ನಿನ್ನೆ ಆಗಿರುವ ಹಾಗೇ ಅನಿಸುತ್ತಿದೆ. ಎಷ್ಟು ಬೇಗ ಸಮಯ ಕಳೆದಿದೆ. ನನ್ನ ಆತ್ಮಿಯ ಗೆಳತಿ ಹಾಗೂ ನನ್ನ ಸೋಲ್ ಮೇಟ್‍ಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ನೀನು ಯಾವಾಗಲೂ ನನ್ನವಳು” ಎಂದು ವಿರಾಟ್ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಅನುಷ್ಕಾ ಬಂದ ಮೇಲೆ ನಾನು ಹೇಗೆ ಬದಲಾದೆ – ಪತ್ನಿಯನ್ನು ಹೊಗಳಿದ ಕೊಹ್ಲಿ

ಅನುಷ್ಕಾ ಶರ್ಮಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಎಮೋಶನಲ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ವಿರಾಟ್ ಹಾಗೂ ಅನುಷ್ಕಾ ಮದುವೆಯ ಹಾರ ಬದಲಾಯಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ವಿರಾಟ್, ಅನುಷ್ಕಾಳ ಹಣೆಗೆ ಸಿಂಧೂರ ಹಚ್ಚಿ ಹೆಮ್ಮೆಯಿಂದ ನನ್ನ ಪತ್ನಿ ಎಂದು ಕರೆದಿದ್ದಾರೆ. ಈ ವಿಡಿಯೋ ಪೋಸ್ಟ್ ಮಾಡಿ ಅನುಷ್ಕಾ “ಸಮಯ ಕಳೆದಿರುವುದು ನೀವು ಗಮನಿಸಿಲ್ಲ ಎಂದರೆ ಇದು ಸ್ವರ್ಗ. ನೀವು ಇಂತಹ ಅದ್ಭುತ ವ್ಯಕ್ತಿಯನ್ನು ಮದುವೆಯಾದರೆ ಇದು ಸ್ವರ್ಗ” ಎಂದು ಪೋಸ್ಟ್ ಮಾಡಿದ್ದಾರೆ.

ಕಳೆದ ವರ್ಷದ ಡಿಸೆಂಬರ್ 11ರಂದು ಇಟಲಿಯ ಟಸ್ಕನಿ ನಗರದ `ಬೋಗೋ ಫಿನೊಕಿಯೆಟೊ’ ಎಂಬ ದುಬಾರಿ ರೆಸಾರ್ಟ್‍ನಲ್ಲಿ ದ್ರಾಕ್ಷಿ ಹಣ್ಣಿನ ತೋಟದ ನಡುವೆ ಇರುವ ಸ್ವರ್ಗದಂಥಹ ತಾಣದಲ್ಲಿ ವಿರಾಟ್ ಹಾಗೂ ಅನುಷ್ಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಅನುಷ್ಕಾ ಹಾಗೂ ವಿರಾಟ್ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಸ್ಟ್ರೇಲಿಯಾದಲ್ಲಿ ಆಚರಿಸುತ್ತಿದ್ದಾರೆ.

https://twitter.com/AnushkaSharma/status/1072359108274081797

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *