ಎಂಗೇಜ್‌ಮೆಂಟ್ ಸಂಭ್ರಮದಲ್ಲಿ ನಿರ್ಮಾಪಕ ಅನುರಾಗ್ ಕಶ್ಯಪ್ ಪುತ್ರಿ ಆಲಿಯಾ

ಬಾಲಿವುಡ್ ನಿರ್ಮಾಪಕ, ನಟ ಅನುರಾಗ್ ಕಶ್ಯಪ್ (Anurag Kashyap) ಪುತ್ರಿ ಆಲಿಯಾ ಕಶ್ಯಪ್ (Aaliyah Kashyap) ಅವರು ತಮ್ಮ ಬಹುಕಾಲದ ಗೆಳೆಯ ಶೇನ್ ಗ್ರೆಗೊಯಿರ್ (Shane Gregoire) ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಆಲಿಯಾ ಎಂಗೇಜ್‌ಮೆಂಟ್ ಸಂಭ್ರಮದಲ್ಲಿ ಬಿಟೌನ್ ನಟ-ನಟಿಯರು ಭಾಗಿಯಾಗಿದ್ದಾರೆ.

ಚಿತ್ರರಂಗದಲ್ಲಿ ಈಗ ಮದುವೆ ಸೀಸನ್ ಶುರುವಾಗಿದೆ. ಒಬ್ಬೊಬ್ಬರೇ ಹಸೆಮಣೆ ಏರುತ್ತಿದ್ದಾರೆ. ಈಗ ಅನುರಾಗ್ ಕಶ್ಯಪ್ ಪುತ್ರಿ ಆಲಿಯಾ ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿದ್ದಾರೆ. ಸದ್ಯ ಪ್ರೀತಿಸಿದ ಹುಡುಗ ಶೇನ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಎಂಗೇಜ್‌ಮೆಂಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

ಹಲವು ವರ್ಷಗಳ ಪ್ರೀತಿಗೆ ಉಂಗುರ ಮುದ್ರೆ ಒತ್ತುವ ಆಲಿಯಾ ಎಂಗೇಜ್ ಆಗಿದ್ದಾರೆ. ಶಾರುಖ್ ಪುತ್ರಿ ಸುಹಾನಾ, ಬಿಗ್ ಬಿ ಮೊಮ್ಮಗ ಅಗಸ್ತ್ಯ ನಂದಾ, ಖುಷಿ ಕಪೂರ್, ಅನುರಾಗ್ ಕಶ್ಯಪ್ ಅವರ ಮಾಜಿ ಪತ್ನಿ ಕಲ್ಕಿ ಅವರು ನಿಶ್ಚಿತಾರ್ಥದ ಸಂಭ್ರಮದಲ್ಲಿ ಭಾಗಿಯಾಗಿ ಎಂಜಾಯ್ ಮಾಡಿದ್ದಾರೆ. ಇದನ್ನೂ ಓದಿ:‘ರಾ’ ಏಜೆಂಟ್ ಆಗಿ ಬಾಲಿವುಡ್ ಪ್ರವೇಶ ಮಾಡಲಿದ್ದಾರೆ ‘ಪಾಕ್ ಪ್ರೇಮಿ’ ಸೀಮಾ

ಆಲಿಯಾ ಕಶ್ಯಪ್ ಅವರು ನಟನಾ ಕ್ಷೇತ್ರದಿಂದ ದೂರವಿದ್ದಾರೆ. ತಮ್ಮದೇ ಖಾಸಗಿ ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ಸಂದರ್ಶನ, ಫಿಟ್‌ನೆಸ್ ಟಿಪ್ಸ್ ನೀಡುವ ಮೂಲಕ ಆಕ್ಟೀವ್ ಆಗಿದ್ದಾರೆ. ಶೇನ್ ಜೊತೆ ಆಲಿಯಾ ಹಲವು ವರ್ಷಗಳಿಂದ ಡೇಟಿಂಗ್ ಮಾಡ್ತಿದ್ದರು. ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿ ಕೂಡ ಇದ್ದರು. ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]