ಬಸವ ನಾಡಿನಲ್ಲಿ ಪಕ್ಷದ ಲಾಂಛನ ಬಿಡುಗಡೆ ಮಾಡಿದ ಅನುಪಮಾ ಶೆಣೈ

ವಿಜಯಪುರ: ಮಾಜಿ ಡಿವೈಎಸ್ ಪಿ ಅನುಪಮಾ ಶಣೈ ನೇತೃತ್ವದ ಹೊಸ ಪಕ್ಷ ‘ಭಾರತೀಯ ಜನಶಕ್ತಿ ಕಾಂಗ್ರೆಸ್’ನ ಲಾಂಛನವನ್ನು ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಬಿಡುಗಡೆ ಮಾಡಲಾಯಿತು.

ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷದ ಚಿಹ್ನೆ ಬೆಂಡೆಕಾಯಿ ಅಗಿದ್ದು, ಪಕ್ಷದ ರಾಜ್ಯಾಧ್ಯಕ್ಷ ಮಹಾದೇವಪ್ಪ ಉದ್ಗಾವಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಅನುಪಮಾ ಶಣೈ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ನೂರಾರು ಕಾರ್ಯಕರ್ತರು ಮತ್ತು ರೈತರು ಪಾಲ್ಗೊಂಡಿದ್ದರು.

ಇದೇ ವೇಳೆ ಮಾತನಾಡಿದ ಅನುಪಮಾ ಶೆಣೈ ಉಡುಪಿ ಮತಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಿದ್ದೇನೆ. ಚುನಾವಣೆಯಲ್ಲಿ ಹಣ ನೀಡಿ ಮತ ಕೇಳೊದಿಲ್ಲ. ಚುನಾವಣೆ ಅಂದ್ರೆ ಹುಡುಗಾಟಿಕ್ಕೆ ಅಲ್ಲ. ನಮ್ಮ ಬಂಧು ಬಳಗ ನೀಡಿದ ಹಣವನ್ನೆ ಚುನಾವಣೆಯಲ್ಲಿ ಬಳಕೆ ಮಾಡಿಕೊಳ್ತೇನೆ ಎಂದರು. ಭಾರತೀಯ ಜನಶಕ್ತಿ ಕಾಂಗ್ರೆಸ್‍ಗೆ ಬೆಂಡೆಕಾಯಿ ಚಿನ್ಹೆಯನ್ನು ಅಧಿಕೃತವಾಗಿ ಚುನಾವಣಾ ಆಯೋಗ ನೀಡಿದೆ. ಮುಂದಿನ ದಿನಗಳಲ್ಲಿ ಪಕ್ಷದ ಚಿಹ್ನೆ ಬದಲಾಗುವ ಸಾಧ್ಯತೆಗಳಿವೆ ಅಂತಾ ತಿಳಿಸಿದ್ರು.

ಐಪಿಎಸ್ ಅಧಿಕಾರಿಗಳ ಎತ್ತಗಂಡಿ ಮಾಡ್ತಾ ಇರೋದು ತಪ್ಪು. ಎಂಎಲ್‍ಎ ಗಳಿಗೆ ಹೇಗೆ ಐದು ವರ್ಷ ಕಾಲಾವಕಾಶವಿರುತ್ತದೆ. ಹಾಗೇ ಐಪಿಎಸ್ ಅಧಿಕಾರಿಗಳಿಗೆ ಏಕೆ ಇಲ್ಲ. ಐಪಿಎಸ್ ಹಾಗೂ ಕೆಎಎಸ್ ಅಧಿಕಾರಿಗಳಿಗೆ ಎರಡು ವರ್ಷ ಆದ್ರು ಅವಕಾಶ ನೀಡಬೇಕೆಂದು ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Comments

Leave a Reply

Your email address will not be published. Required fields are marked *