ಖಾಕಿ ವರ್ಸಸ್ ಸ್ಯಾಂಡಲ್‍ವುಡ್: ಪೊಲೀಸರ ವಿರುದ್ಧ ದೂರ ನೀಡಲು ಸಿದ್ಧವಾಯ್ತು ‘ಅಂತ್ಯ’ ಚಿತ್ರ ತಂಡ

ಬೆಂಗಳೂರು: ಕನ್ನಡದ ಗಾಯಕ ಚಂದನ್ ಶೆಟ್ಟಿ ‘ಗಾಂಜಾ’ ಹಾಡಿಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ಮುಂದೆ ಹಾಜರಾಗಿ ತಾವು ಹಾಡು ಹಾಡಿದ್ದು ತಪ್ಪು ಎಂದು ಒಪ್ಪಿಕೊಂಡಿದ್ದಾರೆ. ಆದ್ರೆ ಹಾಡಿಗೆ ಸಾಹಿತ್ಯ ಬರೆದಿದ್ದು ರಚನೆಕಾರ ಹಾಗು ಚಿತ್ರದ ನಿರ್ಮಾಪಕ ಪೊಲೀಸರೇ ವಿರುದ್ಧವೇ ದೂರು ನೀಡಲು ಮುಂದಾಗ್ತಿದ್ದಾರೆ.

ಹೌದು, ಕಳೆದ ನಾಲ್ಕಾರು ದಿನಗಳಿಂದ ಚಂದನ್ ಶೆಟ್ಟಿ ಗಾಯನದ ‘ಅಂತ್ಯ’ ಸಿನಿಮಾದ ಗಾಂಜಾ ಕುರಿತಾದ ಹಾಡೊಂದು ಸಾಕಷ್ಟು ವಿವಾದವಾಗಿತ್ತು. ಈ ಸಂಬಂಧ ಚಂದನ ಶೆಟ್ಟಿಯವರಿಗೆ ಸಿಸಿಬಿ ಪೊಲೀಸರು ಸಮನ್ಸ್ ಸಹ ಜಾರಿ ಮಾಡಿದ್ದರು. ವಿಚಾರಣೆಗೆ ಹಾಜರಾಗಿದ್ದ ಚಂದನ್, ತಮ್ಮ ಮೇಲಿನ ಆರೋಪಗಳು ಅಸಮಂಜಸ.ನಾನು ಕೇವಲ ಹಾಡನ್ನು ಹಾಡಿದ್ದನ್ನೇ, ಸಾಹಿತ್ಯ ಬರೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಆದ್ರೆ ಆಂತ್ಯದ ಚಿತ್ರದ ಸಾಹಿತ್ಯ ರಚನಕಾರರಾದ ಮುತ್ತು ಮತ್ತು ನಿರ್ಮಾಪಕ ಅವಿನಾಶ್ ಸಿಸಿಬಿ ಪೊಲೀಸರ ನಡೆಯನ್ನು ಪ್ರಶ್ನಿಸಿದ್ದಾರೆ.

ನಮ್ಮ ಫಿಲ್ಮ್ ಸೆನ್ಸಾರ್ ಬೋರ್ಡ್ ಅಂತಿಮ, ಯೂಟ್ಯೂಬ್‍ನಲ್ಲಿ ಈ ಸಾಂಗ್ಸ್ ತೆಗಿಯಿರಿ ಅಂತಾ ಹೇಳೋದು ಪೊಲೀಸರ ಕೆಲಸವಲ್ಲ. ಹಾಗಿದ್ರೇ ಎಲ್ಲಾ ಭಾಷೆಯ ನಶೆಯ ಹಾಡುಗಳನ್ನು ತೆಗೆಸಲಿ. ಪೊಲೀಸರ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಡಲು ನಿರ್ಧರಿಸಿರುವ ಈ ಟೀಂ ಕಾನೂನು ಹೋರಾಟಕ್ಕೂ ರೆಡಿಯಾಗಿದೆ. ಈ ಗಲಾಟೆಗೆ ಚಲನಚಿತ್ರ ವಾಣಿಜ್ಯ ಮಂಡಳಿ ಎಂಟ್ರಿಯಾಗುತ್ತಾ ಖಾಕಿ ವರ್ಸಸ್ ಬಣ್ಣದ ಲೋಕದ ಗಲಾಟೆ ಶುರುವಾಗುತ್ತಾ ಅಂತಾ ಬಿಟೌನ್‍ನಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದೆ

ಏನಿದು ಪ್ರಕರಣ?
ಮಾದಕ ವಸ್ತುಗಳ ಸೇವನೆಗೆ ಪ್ರಚೋದನೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಸಿಂಗರ್ ಚಂದನ್ ಶೆಟ್ಟಿಗೆ ಬಂಧನ ಭೀತಿ ಎದುರಾಗಿತ್ತು. ಚಂದನ್ ಶೆಟ್ಟಿ ಸಂಗೀತ ಸಂಯೋಜನೆಯ ಅಂತ್ಯ ಸಿನಿಮಾದ ಗಾಂಜಾ ಕಿಕ್ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿತ್ತು. ಆದರೆ ಗಾಂಜಾ ಕಿಕ್ ಹಾಡಿನಲ್ಲಿ ಮಾದಕ ವಸ್ತುಗಳನ್ನು ಸೇವಿಸುವ ಕುರಿತು ವೈಭವಿಕರಿಸಿ ತೋರಿಸಲಾಗಿದೆ. ಹೀಗಾಗಿ ಖುದ್ದು ಸ್ವಯಂ ದೂರು ದಾಖಲಿಸಿಕೊಂಡಿರುವ ಸಿಸಿಬಿ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಚಂದನ್ ಶೆಟ್ಟಿಗೆ ಸಮನ್ಸ್ ಜಾರಿ ಮಾಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *