ರೈಲು ಹಳಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು- ಫಿಶ್‌ ಪ್ಲೇಟ್‌ ಕತ್ತರಿಸಿದ ದುಷ್ಕರ್ಮಿಗಳು

ಗಾಂಧಿನಗರ:  ಗ್ಯಾಸ್‌ ಸಿಲಿಂಡರ್‌, ಕಬ್ಬಿಣದ ತುಂಡು ಇಟ್ಟ ಬೆನ್ನಲ್ಲೇ ಮತ್ತೊಂದು ರೈಲು ಹಳಿಯಲ್ಲಿ (Rail Track) ವಿಧ್ವಂಸಕ ಕೃತ್ಯಕ್ಕೆ ಯತ್ನ ನಡೆದಿದೆ. ಗುಜರಾತಲ್ಲಿ (Gujarat) ದುಷ್ಕರ್ಮಿಗಳು ಹಳಿಯ ಫಿಶ್ ಪ್ಲೇಟ್ (Fish Plate) ಕಟ್ ಮಾಡಿದ್ದಾರೆ.

ಸೂರತ್‌ನ ಕಿಮ್ ರೈಲು ನಿಲ್ದಾಣದ ಬಳಿ ದುಷ್ಕರ್ಮಿಗಳು ರೈಲ್ವೇ ಟ್ರ್ಯಾಕ್‌ನಿಂದ ಫಿಶ್‌ಪ್ಲೇಟ್‌ಗಳು ಮತ್ತು ಕೀಗಳನ್ನು ತೆಗೆದಿದ್ದಾರೆ. ಫಿಶ್‌ ಪ್ಲೇಟ್‌ಗಳನ್ನು ತೆಗೆದ ಬಳಿಕ ಅದೇ ಟ್ರ್ಯಾಕ್‌ನಲ್ಲಿ ಇರಿಸಿದ್ದಾರೆ.  ಇದನ್ನೂ ಓದಿ: ಭಾರತದ ರೈಲು, ಪೆಟ್ರೋಲ್ ಪೈಪ್‌ಲೈನ್‌ಗಳ ಮೇಲೆ ದಾಳಿ ಮಾಡಿ – ಪಾಕ್‌ ಉಗ್ರನಿಂದ ಕರೆ


ಕೆಲವು ಅಪರಿಚಿತ ದುಷ್ಕರ್ಮಿಗಳು ಉತ್ತರಪ್ರದೇಶ ಲೈನಿನ ಕೆಲವು ಫಿಶ್ ಪ್ಲೇಟ್‌ಗಳು ಮತ್ತು ಕೀಗಳನ್ನು ತೆರೆದು ಅದೇ ಟ್ರ್ಯಾಕ್‌ನಲ್ಲಿ ಇರಿಸಿದ್ದರು. ರೈಲ್ವೇಯ ರೈಲು ಮ್ಯಾನ್‌ಗಳು ಟ್ರಾಕ್‌ ಪರಿಶೀಲನೆ ನಡೆಸುತ್ತಿದ್ದಾಗ ಈ ವಿಚಾರ ಬೆಳಕಿಗೆ ಬಂದಿದೆ. ರೈಲು ಸಂಚಾರವನ್ನು ಕೆಲ ಕಾಲ ಸ್ಥಗಿತಗೊಳಿಸಲಾಗಿತ್ತು ಎಂದು ಪಶ್ಚಿಮ ರೈಲ್ವೆಯ ವಡೋದರ ವಿಭಾಗ ತಿಳಿಸಿದೆ. ರಾಷ್ಟ್ರೀಯ ತನಿಖಾ ದಳದ (NIA) ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮಹಿಳೆ ಕಗ್ಗೊಲೆ; ದೇಹವನ್ನು ಪೀಸ್ ಪೀಸ್ ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟಿದ್ಯಾಕೆ ಹಂತಕ?

ಆಗಸ್ಟ್ ತಿಂಗಳು ಒಂದರಲ್ಲೇ ದೇಶದಾದ್ಯಂತ ರೈಲುಗಳ ಹಳಿ ತಪ್ಪಿಸಲು (Train Derailment) 18 ಪ್ರಯತ್ನಗಳು ನಡೆದಿವೆ ಎಂದು ಭಾರತೀಯ ರೈಲ್ವೇ ತಿಳಿಸಿತ್ತು.

ರೈಲು ದುರಂತಕ್ಕೆ ಸಂಚು ಹೆಚ್ಚಾಗುತ್ತಿದ್ದಂತೆ 75 ಲಕ್ಷ AI ಕ್ಯಾಮೆರಾ ಖರೀದಿಗೆ ಇಲಾಖೆ ಮುಂದಾಗಿದೆ.