ಇಂದು ಲಾಂಚ್ ಆಗಲಿದೆ ಕುರುಕ್ಷೇತ್ರದ ಮತ್ತೊಂದು ಟ್ರೈಲರ್!

ಇದೀಗ ಎಲ್ಲೆಡೆ ಕುರುಕ್ಷೇತ್ರದೆಡೆಗಿನ ಕುತೂಹಲ ಕುದಿಯಲಾರಂಭಿಸಿದೆ. ಈ ಚಿತ್ರ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿರುವ ಈ ಹೊತ್ತಿನಲ್ಲಿ ಅಭಿಮಾನಿಗಳೆಲ್ಲ ಏನಾದರೂ ಒಂದು ಸರ್ಪ್ರೈಸ್ ಸಿಗಬಹುದೆಂದು ಕಾದು ಕೂತಿದ್ದಾರೆ. ಅದೆಷ್ಟೋ ಜನರ ಈ ಮನದಿಂಗಿತವನ್ನು ಅರ್ಥೈಸಿಕೊಂಡಿರೋ ಚಿತ್ರತಂಡ ಮತ್ತೊಂದು ಟ್ರೈಲರ್ ಲಾಂಚ್ ಮಾಡಲು ತೀರ್ಮಾನಿಸಿದೆ. ನಿರ್ಮಾಪಕ ಮುನಿರತ್ನ ಅವರೇ ಮುಂದೆ ನಿಂತು ರೂಪಿಸಿರೋ ಈ ಟ್ರೈಲರ್ ಇಂದು ಬಿಡುಗಡೆಯಾಗಲಿದೆ.

ಇಂಥಾದ್ದೊಂದು ಸಿಹಿ ಸುದ್ದಿಯನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಈ ಬಗ್ಗೆ ಮಾಹಿತಿ ನೀಡಿರೋ ದರ್ಶನ್ `ಅಭಿಮಾನಿಗಳ ಒತ್ತಾಯದ ಮೇರೆಗೆ ಕುರುಕ್ಷೇತ್ರ ಚಿತ್ರದ ಮತ್ತೊಂದು ಟ್ರೈಲರ್ ಬಿಡುಗಡೆಯಾಗಲಿದೆ. ಈ ಟ್ರೈಲರ್ ಅನ್ನು ತಪ್ಪದೇ ವೀಕ್ಷಿಸಿ’ ಅಂತ ದರ್ಶನ್ ಬರೆದುಕೊಂಡಿದ್ದಾರೆ. ಈ ವಿಚಾರ ತಿಳಿದು ದರ್ಶನ್ ಅಭಿಮಾನಿಗಳಲ್ಲದೇ ಪ್ರೇಕ್ಷಕ ವರ್ಗವೆಲ್ಲ ಖುಷಿಗೊಂಡಿದೆ.

ವಾರದ ಹಿಂದಷ್ಟೇ ಆಡಿಯೋ ಜೊತೆಗೊಂದು ಟ್ರೈಲರ್ ಅನ್ನೂ ಬಿಡುಗಡೆಗೊಳಿಸಲಾಗಿತ್ತು. ಈ ಟ್ರೈಲರ್ ಕಂಡು ಪ್ರೇಕ್ಷಕರು ಕೂಡಾ ಥ್ರಿಲ್ ಆಗಿದ್ದರು. ಆದರೂ ಕೂಡಾ ಅಭಿಮಾನಿಗಳು ಮತ್ತೆ ಒಂದಷ್ಟು ಸರ್ಪ್ರೈಸ್ ಗಳನ್ನು ಅಪೇಕ್ಷಿಸುತ್ತಿರೋದನ್ನು ಮನಗಂಡೇ ಈ ಟ್ರೈಲರ್ ಲಾಂಚ್ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ಬಿಡುಗಡೆಯಾಗಿರೋ ಮೂರು ಹಾಡುಗಳು ಸೂಪರ್ ಹಿಟ್ ಆಗಿವೆ. ಹೊಸ ಟ್ರೈಲರ್ ಹವಾ ಹೇಗಿರಲಿದೆ ಅನ್ನೋ ಕುತೂಹಲವಂತೂ ಎಲ್ಲರಲ್ಲಿಯೂ ಇದ್ದೇ ಇದೆ.

ಕುರುಕ್ಷೇತ್ರ ಮುನಿರತ್ನ ಅವರು ಮಹತ್ವಾಕಾಂಕ್ಷೆಯಿಂದ ನಿರ್ಮಾಣ ಮಾಡಿರುವ ಚಿತ್ರ. ಬಹು ಕೋಟಿ ವೆಚ್ಚ ಮತ್ತು ಅದ್ಧೂರಿ ತಾರಾಗಣ ಹೊಂದಿರೋ ಕುರುಕ್ಷೇತ್ರ ಕನ್ನಡ ಮಾತ್ರವಲ್ಲದೇ ಪರರಾಜ್ಯ, ವಿದೇಶಗಳಲ್ಲಿಯೂ ಅಬ್ಬರಿಸಲು ಅಣಿಯಾಗಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿಯೂ ಇದು ಬಿಡುಗಡೆಯಾಗಲಿದೆ.

https://www.youtube.com/watch?v=i1F0OpKaXOg

Comments

Leave a Reply

Your email address will not be published. Required fields are marked *