ಡ್ರೋಣ್ ಪ್ರತಾಪ್ ಮೇಲೆ ಮತ್ತೊಂದು ಗಂಭೀರ ಆರೋಪ

ಬಿಗ್ ಬಾಸ್ ಮನೆಯಲ್ಲಿ ಗೆಲುವಿಗಾಗಿ ಸೆಣೆಸುತ್ತಿರುವ ಡ್ರೋನ್ ಪ್ರತಾಪ್ (Drone Pratap) ಮೇಲೆ ಒಂದರ ಮೇಲೆ ಒಂದರಂತೆ ದೂರುಗಳು ದಾಖಲಾಗುತ್ತಿವೆ. ಮೊನ್ನೆಯಷ್ಟೇ ಡಾ.ಪ್ರಯಾಗ್ ಎನ್ನುವವರು ಡ್ರೋಣ್ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಇದೀಗ ಲಕ್ಷ ಲಕ್ಷ ದೋಖಾ ಮಾಡಿರುವ ಆರೋಪ ಕೇಳಿ ಬಂದಿದೆ.

ಪೂಣಾ ಮೂಲದ ಸಾರಂಗ್ ಮಾನೆ (Sarang Mane) ಎನ್ನುವವರು ಡ್ರೋಣ್ ಪ್ರತಾಪ್ ಗೆ ಬರೋಬ್ಬರಿ 83 ಲಕ್ಷ ರೂಪಾಯಿ ನೀಡಿದ್ದಾರಂತೆ. ಈ ಹಣದಲ್ಲಿ 8 ಡ್ರೋಣ್ ನೀಡುವುದಾಗಿ ಪ್ರತಾಪ್ ಹೇಳಿದ್ದರಂತೆ. ಆದರೆ, ಕೊಟ್ಟ ಮಾತಿನಂತೆ ‍ಪ್ರತಾಪ್ ನಡೆದುಕೊಂಡಿಲ್ಲ ಎನ್ನುವುದು ಮಾನೆ ಆರೋಪ.

ಪ್ರತಾಪ್ ಈಗಾಗಲೇ 2 ಡ್ರೋಣ್ ಕಳಿಸಿದ್ದಾರೆ. ಆದರೆ, ಅವು ಸರಿಯಾಗಿ ಕಾರ್ಯ ಮಾಡುತ್ತಿಲ್ಲ. ಒಂದು ವರ್ಷವಾಗಿದೆ ಹಣವನ್ನೂ ಕೊಡುತ್ತಿಲ್ಲ ಎಂದು ಸಾರಂಗ್ ಮಾನೆ. ಆರೋಪ ಮಾಡುತ್ತಿದ್ದಾರೆ. ರೈತರ ಬೆಳೆಗಳಿಗೆ ಕ್ರಿಮಿನಾಶಕ ಔಷಧ ಸಿಂಪಡಿಸುವ ಡ್ರೋಣ್ ಗಳ ಎಕ್ಸಿಬಿಷನ್ ವೇಳೆ ಸಾರಂಗ್ ಮಾನೆ ಅವರಿಗೆ  ಡ್ರೋಣ್ ಪ್ರತಾಪ್ ಪರಿಚವಾಗಿದ್ದರಂತೆ. ರೈತರಿಗೆ ಡ್ರೋಣ್ ಕಳಿಸಿಕೊಡುವ ಟೆಂಡರ್ ಪಡೆದಿದ್ದ ಸಾರಂಗ್ ಮಾನೆ ಅವರು ಪ್ರತಾಪ್ ಗೆ ಆ ಜವಾಬ್ದಾರಿ ನೀಡಿದ್ದರು.