ಕಣ್ಣು ಕಳೆದುಕೊಂಡಿದ್ದ ಕೆಲಸಗಾರ ಪರಿಹಾರ ಕೇಳಲು ಹೋದಾಗ ನಾಯಿ ಛೂ ಬಿಟ್ಟಿದ್ದ ದರ್ಶನ್‌ ಟೀಂ

– ದರ್ಶನ್ ಹೀರೋ ಅಲ್ಲ ವಿಲನ್ ಎಂದ ಕುಟುಂಬಸ್ಥರು

ಚಾಮರಾಜನಗರ: ನಟ ದರ್ಶನ್ (Actor Darshan) ಮತ್ತು ಗ್ಯಾಂಗ್‌ನ ಮತ್ತೊಂದು ಕರಾಳ ಮುಖ ಬಯಲಾಗಿದೆ. 10 ವರ್ಷದ ಹಿಂದೆ ಪರಿಹಾರ ಕೇಳಲು ಹೋಗಿದ್ದ ಕೂಲಿ ಕೆಲಸಗಾರನ ಮೇಲೆ ನಾಯಿ (Dog) ಛೂ ಬಿಟ್ಟು ವಿಕೃತಿ ಮೆರೆದಿದ್ದರೆಂಬ ಗಂಭೀರ ಆರೋಪ ಕೇಳಿ ಬಂದಿದೆ.

ಟಿ ನರಸೀಪುರ ಸಮೀಪದ ತೂಗುದೀಪ ಫಾರಂ ಹೌಸ್‌ನಲ್ಲಿ (Thoogudeepa Farm House) ಚಾಮರಾಜನಗರ ತಾಲೂಕಿನ ನಿಜಲಿಂಗನಪುರದ ಮಹೇಶ್‌ ಎಂಬವರು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.

ಎತ್ತಿಗೆ ಲಾಳ ಕಟ್ಟಿಸಲು ಹೋದ ಸಂದರ್ಭದಲ್ಲಿ ಎತ್ತು ಮಹೇಶ್ ಅವರ ಕಣ್ಣಿಗೆ ತಿವಿದಿತ್ತು. ಕೊಂಬು ತಲೆಯಿಂದ ಹೊರಬಂದಿತ್ತು. ದರ್ಶನ್‌ ಕಡೆಯುವರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ಮನೆಗೆ ತಂದು ಬಿಟ್ಟು ಹೋಗಿದ್ದರು. ನಂತರ ಕುಟುಂಬದತ್ತ ತಿರುಗಿಯೂ ನೋಡಿಲ್ಲ. ಇದನ್ನೂ ಓದಿ: ಇತಿಹಾಸದಲ್ಲೇ ಮೊದಲು- ದರ್ಶನ್‌ ಇರುವ ಪೊಲೀಸ್‌ ಠಾಣೆಗೆ ಶಾಮಿಯಾನ!

ಪರಿಹಾರ ಕೇಳಲು ಫಾರಂ ಹೌಸ್ ಬಳಿ ಹೋದಾಗ ಸಾಕು ನಾಯಿ ಛೂ ಬಿಟ್ಟು ಪರಿಹಾರ ಕೇಳಲೂ ಹೋದವರಿಗೆ ಬೆದರಿಸಿದ್ದಾರೆ. ಅಲ್ಲದೇ ಮೈಸೂರಿನ ಹೋಟೆಲಿಗೆಂದು ಮಾತುಕತೆಗೆ ಕರೆಸಿ ರೌಡಿಗಳಿಂದ ಬೆದರಿಕೆಯೊಡಿದ್ದರು ಎಂದು ಮಹೇಶ್‌ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

 

ಈ ವಿಚಾರವನ್ನು ಹೊರಗಡೆ ಎಲ್ಲಿಯಾದರೂ ಹೇಳಿದರೆ ಪರಿಸ್ಥಿತಿ ನೆಟ್ಟಗಿರಲ್ಲ ಎಂದು ದರ್ಶನ್‌ ಗ್ಯಾಂಗ್‌ ಬೆದರಿಸಿದೆ. ಹತ್ತು ವರ್ಷಗಳಿಂದ ಕೂಲಿ ಕಾರ್ಮಿಕ ಮಹೇಶ್ ಹಾಸಿಗೆ ಹಿಡಿದಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಿದೆ. ತಾಯಿ ಮತ್ತು ಹೆಂಡತಿಯಿಬ್ಬರೂ ಕೂಲಿ ಕೆಲಸ ಮಾಡಿಕೊಂಡು ಮಹೇಶ್ ಆರೈಕೆ ಮಾಡುತ್ತಿದ್ದಾರೆ.