Haveri| ನ್ಯೂ ಇಯರ್‌ ಪಾರ್ಟಿಗೆ ಗೋವಾಗೆ ತೆರಳುತ್ತಿದ್ದಾಗ ಅಪಘಾತ – 10 ಮಂದಿಗೆ ಗಾಯ

ಹಾವೇರಿ: ನಿಂತಿದ್ದ ಕಾರಿಗೆ ಹಿಂದಿನಿಂದ ಮತ್ತೊಂದು ಕಾರು ಡಿಕ್ಕಿ ಹೊಡೆದು ನಾಲ್ವರು ಗಂಭೀರವಾಗಿ ಗಾಯಗೊಂಡು, ಆರು ಜನರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಹಾವೇರಿ (Haveri) ಜಿಲ್ಲೆ ಬ್ಯಾಡಗಿ (Byadagi) ತಾಲೂಕಿನ ಛತ್ರ ಗ್ರಾಮದ ಬಳಿ ನಡೆದಿದೆ.

ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಈ ದುರ್ಘಟನೆ ನಡೆದಿದೆ. ನ್ಯೂ ಇಯರ್ ಪಾರ್ಟಿ ಮಾಡಲೆಂದು ಗೋವಾಗೆ ತೆರಳುತ್ತಿದ್ದ ಆಂಧ್ರ ಮೂಲದ ಯುವಕರ ತಂಡ ಕಾರು ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಇದನ್ನೂ ಓದಿ: ಕಲಬುರಗಿಯಲ್ಲಿ ತಲ್ವಾರ್ ಪಾಲಿಟಿಕ್ಸ್ ಜೋರು – ಪ್ರಿಯಾಂಕ್ ಖರ್ಗೆ ತಲ್ವಾರ್ ಹಿಡಿದ ಫೋಟೊ ರಿಲೀಸ್

ಗಂಭೀರವಾಗಿ ಗಾಯಗೊಂಡವರನ್ನು ದಾವಣಗೆರೆ ಮೂಲದ ತೇಜಸ್ (25), ಸಂದೇಶ್ (25), ದೀಪಕ್ (25) ಮತ್ತು ವೆಂಕಟೇಶ್ (26) ಎಂದು ಗುರುತಿಸಲಾಗಿದೆ. ವೀರೇಶ್ (23), ಲಕ್ಷ್ಮಣ (23), ಅಶೋಕ್‌ (24), ಗೌಡನಬಿ (24), ಸಾಗರ್ (26) ಮತ್ತು ಸಂಕೇತ್‌ (36) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಅಸ್ಸಾಂನಲ್ಲಿ ಅಲ್‌ ಖೈದಾ ಉಗ್ರ ಅರೆಸ್ಟ್‌ – ಬಂಧನ ಸಂಖ್ಯೆ 12ಕ್ಕೆ ಏರಿಕೆ

ಗಂಭೀರವಾಗಿ ಗಾಯಗೊಂಡಿದ್ದ ನಾಲ್ವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸಣ್ಣಪುಟ್ಟ ಗಾಯಗೊಂಡವರನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬ್ಯಾಡಗಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಇದನ್ನೂ ಓದಿ: ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಚಿರತೆ ಪ್ರತ್ಯಕ್ಷ – ಸಿಬ್ಬಂದಿಗೆ ವರ್ಕ್ ಫ್ರಮ್ ಹೋಮ್