ಮಂಡ್ಯ: ಲೋಕಸಭೆ ಚುನಾವಣೆ ಜೆಡಿಎಸ್ ನಿಂದ ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್ ಸಿಕ್ಕಿ ಆತ ಎಲೆಕ್ಷನ್‍ನಲ್ಲಿ ಗೆಲವು ಸಾಧಿಸಲಿ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಒಂದೂ ಕಾಲು ರೂ. ಹರಕೆ ಕಟ್ಟಿಕೊಂಡಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದ ಹೊರವಲಯದಲ್ಲಿರುವ ಹೊಳೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಅನಿತಾ ಕುಮಾರಸ್ವಾಮಿ ಅವರು ಹರಕೆ ಹೊತ್ತು ಪೂಜೆ ಸಲ್ಲಿಸಲಿದ್ದಾರೆ. ಹೊಳೆ ಆಂಜನೇಯ ಸ್ವಾಮಿ ದೇಗುಲಕ್ಕೆ ಹರಕೆ ಹೊತ್ತರೆ ಇಷ್ಟಾರ್ಥ ನೆರವೇರಲಿದೆ ಎನ್ನುವ ನಂಬಿಕೆಯಿದೆ.

ಅನಿತಾ ಕುಮಾರಸ್ವಾಮಿ ಪೂಜೆಯ ನಂತರ ನಿಖಿಲ್‍ಗೆ ಎಲ್ಲಾ ರೀತಿಯಲ್ಲೂ ಒಳಿತಾಗಲಿ ಎಂದು ಹರಕೆ ಹೊತ್ತು ಪೂಜೆ ಸಲ್ಲಿಸುತ್ತಿದ್ದಾರೆ. ಅನಿತಾ ಕುಮಾರಸ್ವಾಮಿ ಅವರು ದೇವಾಲಯಕ್ಕೆ ಒಟ್ಟು ಐದು ಮಂಗಳವಾರ ಸತತವಾಗಿ ಬಂದು ಪೂಜೆ ಸಲ್ಲಿಸಲಿದ್ದಾರೆ.
ಕಳೆದ ಮಂಗಳವಾರವೂ ಕೂಡ ಅನಿತಾ ಅವರು ಹೊಳೆ ಆಂಜನೇಯಸ್ವಾಮಿ ದೇವಾಲಯಕ್ಕೆ ಬಂದು ಒಂದು ಕಾಲು ರೂ. ಹರಕೆ ಸಮರ್ಪಿಸಿ ಪೂಜೆ ಸಲ್ಲಿಸಿದ್ದರು. ಇಂದು ಎರಡನೇ ಬಾರಿಗೆ ಪೂಜೆ ಸಲ್ಲಿಸಲಿದ್ದಾರೆ. ಇನ್ನೂ ಮೂರು ಮಂಗಳವಾರ ಅನಿತಾ ಕುಮಾರಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಲಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply