ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ಅನಿಲ್ ಕಪೂರ್?

ಬಾಲಿವುಡ್ ನಟ ಅನಿಲ್ ಕಪೂರ್ (Anil Kapoor) ಅವರ ಮುಂದಿನ ಸಿನಿಮಾ ಕುರಿತು ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ಅನಿಲ್ ಕಪೂರ್ ಅವರು ನಟಿಸಲಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ದಿಲ್ಜಿತ್ ದೋಸಾಂಜ್ ಸಂಗೀತ ಕಚೇರಿಯಲ್ಲಿ ಮದ್ಯ ಮತ್ತು ಮಾಂಸದೂಟ: ಬಜರಂಗದಳ ಪ್ರತಿಭಟನೆ

ಮುಂಬೈನಲ್ಲಿ ‘ಟಾಕ್ಸಿಕ್’ (Toxic) ಸಿನಿಮಾ ಶೂಟಿಂಗ್ ನಡೆಯುತ್ತಿರುವ ಸ್ಥಳದಲ್ಲಿ ಕಿಯಾರಾ ಅಡ್ವಾಣಿ ಜೊತೆ ಅನಿಲ್ ಕಪೂರ್ ಕಾಣಿಸಿಕೊಂಡಿದ್ದಾರೆ. ಆ ನಂತರ ಇಬ್ಬರೂ ಬೋಟ್‌ನಲ್ಲಿ ಕುಳಿತು ತೆರಳಿದ್ದಾರೆ. ಹಾಗಾಗಿ ಅನಿಲ್ ಕಪೂರ್ ಕೂಡ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಫ್ಯಾನ್ಸ್ ಊಹಿಸಿದ್ದಾರೆ.

 

View this post on Instagram

 

A post shared by Snehkumar Zala (@snehzala)

ಅಂದಹಾಗೆ, 1983ರಲ್ಲಿ ‘ಪಲ್ಲವಿ ಅನುಪಲ್ಲವಿ’ ಸಿನಿಮಾದಲ್ಲಿ ಅನಿಲ್ ಕಪೂರ್ ನಟಿಸಿದ್ದರು. ಈ ಚಿತ್ರವನ್ನು ಕನ್ನಡ ಮತ್ತು ತಮಿಳಿನಲ್ಲಿ ಖ್ಯಾತ ನಿರ್ದೇಶನ ಮಣಿರತ್ನಂ ನಿರ್ದೇಶಿಸಿದರು. ಒಂದು ವೇಳೆ, ‘ಟಾಕ್ಸಿಕ್‌’ನಲ್ಲಿ ಅನಿಲ್ ನಟಿಸಿದ್ದೇ ಆದರೆ 41 ವರ್ಷಗಳ ಬಳಿಕ ಮತ್ತೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಂತಾಗುತ್ತದೆ.

ಇನ್ನೂ ‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಜೊತೆ ಕಿಯಾರಾ, ನಯನತಾರಾ, ಹುಮಾ ಖುರೇಶಿ ಸೇರಿದಂತೆ ಅನೇಕರು ಹೆಸರು ಸದ್ದು ಮಾಡುತ್ತಿದೆ. ಆದರೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಸಿಗುವವರೆಗೂ ಕಾದುನೋಡಬೇಕಿದೆ.